ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುನಾಮಿ ರುದ್ರನರ್ತನ- ಬೆಂಗಳೂರಿನ 37ಮಂದಿ ಸೇರಿ ರಾಜ್ಯದಿ 45ಬಲಿ

By Staff
|
Google Oneindia Kannada News

ಸುನಾಮಿ ರುದ್ರನರ್ತನ- ಬೆಂಗಳೂರಿನ 37ಮಂದಿ ಸೇರಿ ರಾಜ್ಯದಿ 45ಬಲಿ
ಸಮುದ್ರತೀರದ ಬಗ್ಗೆ ಆತಂಕ, ಈಗ ಎಲ್ಲೆಲ್ಲೂ ನೋವಿನ ಅಲೆ, ಬಂಧುಗಳ ಸಾವು, ಇತ್ಯಾದಿ

ಬೆಂಗಳೂರು : ಕ್ರಿಸ್‌ಮಸ್‌ ಮತ್ತು ವರ್ಷದ ಕಡೆಯಲ್ಲಿನ ಉಳಿಕೆ ರಜೆಗಳನ್ನು ಸವಿಯಲು, ಪರಿವಾರ ಸಮೇತ ಕಡಲ ತೀರಗಳಿಗೆ ಪ್ರವಾಸ ತೆರಳಿದ್ದ ರಾಜ್ಯದ ಹಲವಾರು ಕುಟುಂಬಗಳ ಪಾಲಿಗೆ ಸುನಾಮಿ ಮೃತ್ಯುವಾಗಿ ಪರಿಣಮಿಸಿದೆ. ತಮಿಳುನಾಡು ಪ್ರವಾಸಕ್ಕೆ ತೆರಳಿದ್ದ ಬೆಂಗಳೂರಿನ 37 ಮಂದಿ ಸೇರಿದಂತೆ, ರಾಜ್ಯದಲ್ಲಿ 45 ಮಂದಿ ಜಲಪ್ರಳಯಕ್ಕೆ ಬಲಿಯಾಗಿದ್ದಾರೆ.

ಸುನಾಮಿ ರುದ್ರನರ್ತನಕ್ಕೆ ಸಿಲುಕಿದ ಪಾಂಡಿಚೇರಿ, ವೇಳಂಕಣಿ, ಚಿದಂಬರಂ, ಕನ್ಯಾಕುಮಾರಿ, ನಾಗಪಟ್ಟಣಂ, ಶ್ರೀಲಂಕಾದ ಅಂಡಮಾನ್‌ ನಿಕೋಬಾರ್‌ ಮತ್ತು ಮಲೇಷಿಯಾಗೂ ಕರ್ನಾಟಕದ ಸಾವಿರಾರು ಮಂದಿ ಪ್ರವಾಸಕ್ಕೆ ತೆರಳಿದ್ದರು. ಅವರ ಸ್ಥಿತಿಗತಿಗಳ ಮಾಹಿತಿ ಇನ್ನೂ ಲಭ್ಯವಾಗಿಲ್ಲ.

ಏಕಾಂಗಿಗಳು : ಸುನಾಮಿ ಹೊಡೆತಕ್ಕೆ ಬೆಂಗಳೂರಿನ ಒಂದೇ ಕುಟುಂಬದ ಒಂಬತ್ತು ಮಂದಿಯಲ್ಲಿ ಒಬ್ಬ ಮಾತ್ರ ಬದುಕುಳಿದಿದ್ದಾನೆ. ಬದುಕುಳಿದ ಹದಿನೈದು ವರ್ಷದ ಬಾಲಕ ಮ್ಯಾಥ್ಯೂ ಕುಟುಂಬ, ತಮಿಳುನಾಡಿನ ವೇಳಂಕಣಿಗೆ ತೆರಳಿತ್ತು. ಅಲ್ಲಿ ಚರ್ಚ್‌ನಲ್ಲಿ ಪ್ರಾರ್ಥನೆ ಸಲ್ಲಿಸಿ, ಬೀಚ್‌ನಲ್ಲಿ ತಿಂಡಿ ತಿನ್ನುವಾಗ ಈ ದುರಂತ ಸಂಭವಿಸಿದೆ.

ಬೆಂಗಳೂರಿನ ಸಿವಿಲ್‌ ಇಂಜಿನಿಯರ್‌ ಶಶಿಧರ ಉಡುಪಗೆ ಡಿಸೆಂಬರ್‌ ಬಗ್ಗೆ ಪ್ರೀತಿ. ಡಿ.10ಉಡುಪರ ವಿವಾಹ ವಾರ್ಷಿಕೋತ್ಸವದ ದಿನ. ಡಿ.22 ಅವರ ಜನ್ಮದಿನ. ಶುಭ ಮಾಸವಾಗಿದ್ದ ಡಿಸೆಂಬರ್‌, ತಮಿಳುನಾಡಿಗೆ ಪತ್ನಿಯಾಂದಿಗೆ ಪ್ರವಾಸಕ್ಕೆ ತೆರಳಿದ್ದ ಉಡುಪ ಅವರ ಜೀವವನ್ನೇ ತಿಂದಿದೆ. ಪವಾಡ ಎಂಬಂತೆ ಅವರ ಒಬ್ಬನೇ ಮಗ ಪ್ರಣವ್‌ ಬುದುಕುಳಿದಿದ್ದಾನೆ.

ನೆರವು : ರವಿಶಂಕರ್‌ ತಮ್ಮ ಗುರೂಜಿ ಆರ್ಟ್‌ ಆಫ್‌ ಲೀವಿಂಗ್‌ ಪ್ರತಿಷ್ಠಾನದಿಂದ ಸಂತ್ರಸ್ಥರಿಗೆ ಆಹಾರ, ಔಷಧಿ, ಬಟ್ಟೆ ಮತ್ತಿತರ ನೆರವನು ಒದಗಿಸಿದೆ. ಈ ನಿಟ್ಟಿನಲ್ಲಿ 200 ಕಾರ್ಯಕರ್ತರು ದುರಂತ ನಡೆದ ಸ್ಥಳಗಳಿಗೆ ತೆರಳಿದ್ದಾರೆ.

ಮಾಹಿತಿ : ತಮಿಳುನಾಡು, ಆಂಧ್ರ, ಕೇರಳ ರಾಜ್ಯಗಳಿಗೆ ಪ್ರವಾಸಕ್ಕೆ ತೆರಳಿ ಕಾಣೆಯಾದವರ ಮಾಹಿತಿಗಾಗಿ ರಾಜ್ಯದ ಪೋಲೀಸ್‌ ಕಂಟ್ರೋಲ್‌ ರೂಂ(ದೂರವಾಣಿ ಸಂಖ್ಯೆ-2294 2222, 2221 1777) ಸಂಪರ್ಕಿಸಲು ಪೋಲೀಸ್‌ ಆಯುಕ್ತ ಎಸ್‌.ಮರಿಸ್ವಾಮಿ ಕೋರಿದ್ದಾರೆ.

ಮೊದಲೇ ಗೊತ್ತಿತ್ತು : ಇಂಡೋನೇಷ್ಯಾ ಸೇರಿದಂತೆ ಏಷ್ಯಾ ಖಂಡದಲ್ಲಿ , ಭೀಕರ ಭೂಕಂಪ ಮತ್ತು ಸುನಾಮಿ ಉಂಟಾಗುವುದು ನನಗೆ ಮೊದಲೇ ಗೊತ್ತಿತ್ತು. ಡಿಸೆಂಬರ್‌ ಮೊದಲ ವಾರದಲ್ಲಿಯೇ ವೆಬ್‌ಸೈಟ್‌ ಒಂದಕ್ಕೆ ಈ ಬಗೆಗೆ ಲೇಖನ ಬರೆದಿದ್ದೆ ಎಂದು ಮಂಗಳೂರಿನ ಕೆಎಂಸಿಯ ಉಪನ್ಯಾಸಕ ಹಾಗೂ ಸಂಶೋಧಕರಾದ ಪ್ರೊ.ಅರುಣಾಚಲಂ ಹೆಬ್ಬಾರ್‌ ತಿಳಿಸಿದ್ದಾರೆ.

ಮಂಗಳೂರನ್ನು ಸುನಾಮಿ ಬಾಧಿಸುವುದಿಲ್ಲ. ಸಮುದ್ರ ತಳದ ಪ್ಲೇಟ್‌ಗಳ ಚಲನೆಯಿಂದ ಸೀಸ್ಮಿಕ್‌ ಅಲೆಗಳು ಮಂಗಳೂರಿನ್ನು ಬಾಧಿಸುವುದಿಲ್ಲ ಎಂದು ಹೆಬ್ಬಾರ್‌ ಅಭಿಪ್ರಾಯಪಟ್ಟಿದ್ದಾರೆ.

ಸುನಾಮಿ ಆರ್ಭಟಕ್ಕೆ ನಲುಗಿ ಪ್ರಾಣ ಬಿಟ್ಟ ಕನ್ನಡಿಗರ ವಿವರ ಹೀಗಿದೆ ;

  • ಸದಾಶಿವನಗರ- ಶಶಿಧರ್‌ ಉಡುಪ(45), ಗೀತಾ ಉಡುಪ (40) ,ಶ್ರೇಯಸ್‌ (14)
  • ಕೆಂಗೇರಿ- ನಾಗರಾಜ್‌ (45), ಲಲಿತಾ (35), ಗೌರಮ್ಮ (65), ಮದನ್‌ (5), ಹರ್ಷಿತಾ (10), ಪ್ರೇಮಾ (48), ಶಿವಕುಮಾರ್‌ (40), ಜ್ಯೋತಿ (45), ಕಾಂಚನಾ (12), ಕೆಂಪಯ್ಯ (60)
  • ಮಾರತ್‌ಹಳ್ಳಿ- ಜೈಕಾಂತ್‌ (32), ಶಾಂತಾ (47), ತಿಮ್ಮಮ್ಮ (70) , ಸರೋಜಮ್ಮ (48), ಪದ್ಮಮ್ಮ (45), ರೂಪಿಣಿ (16), ಪಾರ್ವತಮ್ಮ ( 46)
  • ಬಸವನಗುಡಿ- ಭಾಗ್ಯಲಕ್ಷ್ಮಿ, ಅರುಣ್‌, ಅಂಬಿಕಾ, ನಂದಿನಿ, ಹರೀಶ್‌, ನಾಗರತ್ನಾ, ಸಂದೀಪ್‌, ಹೇಮಂತ್‌.
  • ಸುರತ್ಕಲ್‌- ಸವಿತಾ (22), ಶಕುಂತಲಾ (19)
  • ಭಟ್ಕಳ- ಮಹಾದೇವಿ ಅಣ್ಣಪ್ಪ ನಾಯ್ಕ (40)
  • ನಂಜನಗೂಡು- ನಂದಿನಿಗೌಡ (35)
  • ಮೈಸೂರು- ಜಾನ್ಸನ್‌, ಶೆರೀಲ್‌,ಕ್ಲಿಸಿ, ಅರ್ಪಿತ
(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X