ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಬಾಬುಡನ್‌ಗಿರಿಯಲ್ಲಿ ಸರಕಾರಿ ಪ್ರಾಯೋಜಿತ ದತ್ತ ಜಯಂತಿ

By Staff
|
Google Oneindia Kannada News

ಬಾಬಾಬುಡನ್‌ಗಿರಿಯಲ್ಲಿ ಸರಕಾರಿ ಪ್ರಾಯೋಜಿತ ದತ್ತ ಜಯಂತಿ
ಪ್ರತಿವರ್ಷದ ಬಾಬಾಬುಡನ್‌ಗಿರಿಯಲ್ಲಿ ರಕ್ಷಣಾ ವ್ಯವಸ್ಥೆಗಾಗಿ ಸರಕಾರದಿಂದ 5 ಕೋಟಿ ವ್ಯಯ

ಚಿಕ್ಕಮಂಗಳೂರು : ಜಿಲ್ಲೆಯ ಬಾಬಾ ಬುಡನ್‌ಗಿರಿಯಲ್ಲಿ ದತ್ತ ಜಯಂತಿ ನೀರಸವಾಗಿ ನಡೆದಿದೆ. ಜಿಲ್ಲಾಡಳಿತದ ಆಹ್ವಾನದ ಮೇರೆಗೆ ಭಾನುವಾರ(ಡಿ.26) ಇಬ್ಬರು ಸ್ವಾಮಿಗಳು ದತ್ತಪೀಠಕ್ಕೆ ತೆರಳಿ, ಪೂಜೆ ಸಲ್ಲಿಸಿದರು. ಈ ಮೂಲಕ ವಿವಾದಕ್ಕೆ ತೆರೆ ಬಿದ್ದಿದೆ.

ಗರ್ಭಗುಡಿಯಲ್ಲಿನ ದತ್ತ ಪಾದುಕೆಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಭಾರಿ ಸಂಖ್ಯೆಯ ಪೊಲೀಸರನ್ನು ಕಾನೂನು ಸುವ್ಯವಸ್ಥೆಗಾಗಿ ನಿಯೋಜಿಸಲಾಗಿತ್ತು. ಹಿಂದೂ- ಮುಸಲ್ಮಾನರ ಧರ್ಮಗಳನ್ನು ಸಂಕೇತಿಸುವ ಬಣ್ಣಗಳನ್ನು ಹಾಕದೆ, ಪೀಠದ ಪರಿಸರದಲ್ಲಿ ಶಾಂತಿಭಾವೈಕ್ಯತೆಯ ಸಂದೇಶ ಸಾರುವ ಶ್ವೇತ ಬಣ್ಣಕ್ಕೆ ವಿವಾದಿತ ಸ್ಥಳದಲ್ಲಿ ಒತ್ತು ನೀಡಲಾಗಿತ್ತು. ಈ ಸಂದರ್ಭದಲ್ಲಿ ಹಿಂದೂಗಳ ಭಾವನೆಗಳ ಅನುಗುಣವಾಗಿ ಪೂಜೆ ನಡೆಸಲು ಹಾಗೂ ಹೋಮ ಹವನಗಳಿಗೆ ಅವಕಾಶ ನೀಡಬೇಕೆಂದು ಶಂಕರದೇವರ ಮಠ ಹಾಗೂ ಬಸವಮಂದಿರದ ಸ್ವಾಮಿಗಳು ಪ್ರತಿಪಾದಿಸಿದರು.

ದತ್ತ ಮೊದಲು ಬಾಬಾ ನಂತರ ಇದು ಇತಿಹಾಸದ ಸತ್ಯ ಕತೆ. 1975 ರ ಆದೇಶ ಎಲ್ಲೂ ಉಲ್ಲಂಘನೆಯಾಗಿಲ್ಲ. ವಿವಾದಗಳನ್ನು ಸೂಕ್ಷ್ಮವಾಗಿ ವಿಚಾರ ಮಾಡಿ ಸಮಸ್ಯೆ ಬಗೆಹರಿಸುವ ದಿಶೆಯಲ್ಲಿ ನಾಯಕರು, ಧರ್ಮಗುರುಗಳು ಶ್ರಮಿಸಬೇಕೆಂದು ಯಳನಾಡು ಮಠದ ಸ್ವಾಮೀಜಿ ತಿಳಿಸಿದ್ದಾರೆ.

ದತ್ತ ಜಯಂತಿ ವಿವಾದ ಪ್ರತಿವರ್ಷ ಕಾವೇರುತ್ತಿದೆ. ಪೋಲೀಸ್‌ ಬಂದೋಬಸ್ತ್‌ ಕಾರ್ಯಕ್ಕೆ ಸುಮಾರು 5ಕೋಟಿ ರೂ.ಗಳನ್ನು ಪ್ರತಿವರ್ಷ ವ್ಯಯಿಸಲಾಗುತ್ತಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X