ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೂರು ಕೃಷ್ಣಮೂರ್ತಿಗೆ ಕುವೆಂಪು ವಿ.ವಿ. ಗೌರವ ಡಾಕ್ಟರೇಟ್‌

By Staff
|
Google Oneindia Kannada News

ಮತ್ತೂರು ಕೃಷ್ಣಮೂರ್ತಿಗೆ ಕುವೆಂಪು ವಿ.ವಿ. ಗೌರವ ಡಾಕ್ಟರೇಟ್‌
ಡಿಸೆಂಬರ್‌ 28ರಂದು ರಾಜ್ಯಪಾಲರಿಂದ ಡಾಕ್ಟರೇಟ್‌ ಪ್ರದಾನ

ಬೆಂಗಳೂರು : ಭಾರತೀಯ ವಿದ್ಯಾಭವದ ಕಾರ್ಯಕಾರಿ ನಿರ್ದೇಶಕ ಮತ್ತೂರು ಕೃಷ್ಣಮೂರ್ತಿ ಅವರಿಗೆ ಕುವೆಂಪು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌ ದೊರೆತಿದೆ.

ಕುವೆಂಪು ವಿಶ್ವವಿದ್ಯಾಲಯದ 15ನೇ ವಾರ್ಷಿಕ ಘಟಿಕೋತ್ಸವವಾದ ಡಿಸೆಂಬರ್‌ 28ರಂದು ರಾಜ್ಯಪಾಲ ಟಿ.ಎನ್‌. ಚತುರ್ವೇದಿ ಮತ್ತೂರರಿಗೆ ಗೌರವ ಡಾಕ್ಟರೇಟ್‌ ಪ್ರದಾನ ಮಾಡುವರು.

ಮತ್ತೂರರ ಕಿರು ಪರಿಚಯ : ಶಿವಮೊಗ್ಗ ಜಿಲ್ಲೆಯ ಮತ್ತೂರು ಗ್ರಾಮದಲ್ಲಿ ಜನಿಸಿದ ಕೃಷ್ಣಮೂರ್ತಿ, ವೇದ ಹಾಗೂ ಸಂಸ್ಕೃತಿಗಳನ್ನು ಅಭ್ಯಸಿಸಿದವರು. ಕುಮಾರವ್ಯಾಸ ಭಾರತದ ಬಗ್ಗೆ ಇದುವವರೆಗೆ ಟಿವಿ ವಾಹಿನಿಗಳಲ್ಲಿ ಹಲವು ವ್ಯಾಖ್ಯಾನಗಳನ್ನು ನೀಡಿರುವ ಹೆಗ್ಗಳಿಕೆಯೂ ಇವರದಾಗಿದೆ. ಸಂಯುಕ್ತ ಕರ್ನಾಟಕದಲ್ಲಿ ಪತ್ರಕರ್ತರಾಗಿ ದುಡಿದಿರುವ ಮತ್ತೂರು, ಭಾರತೀಯ ವಿದ್ಯಾಭವನದ ಲಂಡನ್‌ ಶಾಖೆಯ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸಿದ್ದರು. ಮತ್ತೂರರ 24 ಕೃತಿಗಳು ಕನ್ನಡದಲ್ಲಿ ಹಾಗೂ 7 ಕೃತಿಗಳು ಇಂಗ್ಲಿಷಿನಲ್ಲಿ ಪ್ರಕಟವಾಗಿವೆ.

ಡಿ.23ರ ಗುರುವಾರ ನಿಧನರಾದ ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್‌ ಅವರ ಇನ್‌ಸೈಡರ್‌ ಕೃತಿಯನ್ನು ಅಂತರ್‌ ದೃಷ್ಟಿ ಹೆಸರಿನಲ್ಲಿ ಮತ್ತೂರು ಕನ್ನಡಕ್ಕೆ ತಂದಿದ್ದರು. ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಮತ್ತೂರರಿಗೆ ಸಂದಿವೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X