ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಕತ್ತಿದ್ದರೆ ಜೆಡಿಎಸ್‌ ಒಡೆಯಲಿ ; ಡಿ.ಕೆ.ಶಿ.ಗೆ ಕುಮಾರಸ್ವಾಮಿ ಸವಾಲು

By Staff
|
Google Oneindia Kannada News

ತಾಕತ್ತಿದ್ದರೆ ಜೆಡಿಎಸ್‌ ಒಡೆಯಲಿ ; ಡಿ.ಕೆ.ಶಿ.ಗೆ ಕುಮಾರಸ್ವಾಮಿ ಸವಾಲು
ಆತ(ಡಿಕೆಶಿ)ರಾಜ್ಯವನ್ನು ಲೂಟಿ ಮಾಡುವುದರಲ್ಲಿ ವೀರಪ್ಪನ್‌ನನ್ನು ಸಹ ಮೀರಿಸಿದ್ದಾನೆ - ಕುಮಾರ ಸ್ವಾಮಿ ಆರೋಪ

ಮಂಡ್ಯ : ತಾಕತ್ತಿದ್ದರೆ ಜಾತ್ಯತೀತ ಜನತಾದಳ ಪಕ್ಷವನ್ನು ಒಡೆಯಲಿ ಎಂದು ಪಕ್ಷದ ಕಾರ್ಯಾಧ್ಯಕ್ಷ ಹೆಚ್‌.ಡಿ.ಕುಮಾರ್‌ಸ್ವಾಮಿ ಸವಾಲು ಎಸೆದಿದ್ದಾರೆ. ಸಚಿವ ಸ್ಥಾನದಿಂದ ವಂಚಿತರಾಗಿ ಜೆಡಿಎಸ್‌ ಪಕ್ಷವನ್ನು ಒಡೆಯುವುದಾಗಿ ಹೇಳಿಕೆಗಳನ್ನು ನೀಡಿದ್ದ ಡಿ.ಕೆ.ಶಿವಕುಮಾರ್‌ ಹೆಸರು ಪ್ರಸ್ತಾಪಿಸದೇ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಅಕ್ರಮ ಗಣಿಗಾರಿಕೆಯ ಮೂಲಕ ರಾಜ್ಯದ ಖನಿಜ ಸಂಪತ್ತನ್ನು ಲೂಟಿ ಮಾಡಿದ ಆತ (ಡಿಕೆಶಿ), ಲೂಟಿಯಲ್ಲಿ ವೀರಪ್ಪನ್‌ನನ್ನು ಮೀರಿಸಿದ್ದಾನೆ. ಆತ ಎಸ್‌.ಎಂ.ಕೃಷ್ಣರನ್ನು ಬ್ಲಾಕ್‌ಮೆಲ್‌ ಮೂಲಕ ನಿಯಂತ್ರಿಸುತ್ತಿದ್ದ ಎಂದು ಆರೋಪಿಸಿದರು.

ನಾನು ಜೆಡಿಎಸ್‌ ಪಕ್ಷವನ್ನು ಹೈಜಾಕ್‌ ಮಾಡಿ ಬ್ಲಾಕ್‌ಮೇಲ್‌ ರಾಜಕಾರಣ ಮಾಡುತ್ತಿರುವುದಾಗಿ ದೂರಲಾಗಿದೆ. ಅಂತಹ ಸಂಸ್ಕೃತಿ ನಮ್ಮದಲ್ಲ. ಅದನ್ನು ಸಾಬೀತು ಪಡಿಸಿದರೆ ರಾಜಕಾರಣಕ್ಕೆ ವಿದಾಯ ಹೇಳುತ್ತೇನೆ. ರಾಜಕೀಯಕ್ಕೆ ಬರುವ ಮೊದಲು ಆತ(ಡಿಕೆಶಿ) ಯಾವ ಸ್ಥಿತಿಯಲ್ಲಿದ್ದ ಎನ್ನುವುದನ್ನು ಯೋಚಿಸಲಿ. ಆತನ ಅಪಾರ ಆಸ್ತಿಯ ಮೂಲವನ್ನು ಬಹಿರಂಗಪಡಿಸಿ ಆನಂತರ ಪಾರದರ್ಶಕತೆಯ ಬಗೆಗೆ ಮಾತನಾಡಲಿ ಎಂದರು.

ನನಗೆ ಪಕ್ಷ ಕಟ್ಟುವುದಷ್ಟೆ ಮುಖ್ಯ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬಂದರೂ ನಾನು ಮಂತ್ರಿ ಅಥವಾ ಮುಖ್ಯಮಂತ್ರಿ ಹುದ್ದೆಗೆ ಅಭ್ಯರ್ಥಿಯಲ್ಲ. ಆ ಸ್ಥಾನಕ್ಕೆ ಸಾಕಷ್ಟು ಹಿರಿಯರು, ಅನುಭವಿಗಳು ಪಕ್ಷದಲ್ಲಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.

ಕಾದು ನೋಡಿ: ಸಮ್ಮಿಶ್ರ ಸರಕಾರಕ್ಕಿಂತಲೂ ಕಾಂಗ್ರೆಸ್‌ ಪಕ್ಷವನ್ನು ಬೆಳೆಸುವುದೇ ಮುಖ್ಯ ಎಂದು ಹೇಳಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌- ಕೆಲವೇ ದಿನಗಳಲ್ಲಿ ರಾಜ್ಯದ ರಾಜಕೀಯ ಚಿತ್ರಣ ಬದಲಾಗಲಿದೆ, ಮುಂದಿನ ಬೆಳವಣಿಗೆಯನ್ನು ಕಾದು ನೋಡಿ ಎನ್ನುವ ಮೂಲಕ ಕುತೂಹಲ ಮೂಡಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X