ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಕಣ ಬರಹ, ವರದಿಗಾರಿಕೆ : ಪತ್ರಿಕೋದ್ಯಮದ ತಾಜಾ ಕೈಪಿಡಿಗಳು

By Staff
|
Google Oneindia Kannada News

ಅಂಕಣ ಬರಹ, ವರದಿಗಾರಿಕೆ : ಪತ್ರಿಕೋದ್ಯಮದ ತಾಜಾ ಕೈಪಿಡಿಗಳು
ರಾಜ್ಯದಲ್ಲಿ 50 ಪತ್ರಕರ್ತರ ಕೊಲೆಗಳಾಗಿವೆ-ಮುಖ್ಯಮಂತ್ರಿಧರ್ಮಸಿಂಗ್‌

ಬೆಂಗಳೂರು: ಪತ್ರಿಕೋದ್ಯಮ ಉದ್ದಗಲ ಮತ್ತು ಆಳವನ್ನು ಪರಿಣಾಮಕಾರಿಯಾಗಿ ಪರಿಚಯಿಸುವ ಎರಡು ಪುಸ್ತಕಗಳನ್ನು ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ ಡಿ.17ರಂದು ಬಿಡುಗಡೆ ಮಾಡಿದರು.

ಅಂಕಣಕಾರ ಎಚ್‌.ಎಸ್‌.ಕೃಷ್ಣಸ್ವಾಮಿ ಅಯ್ಯಂಗಾರ್‌(ಎಚ್ಚೆಸ್ಕೆ) ಅವರ ‘ಅಂಕಣ ಬರಹ’ ಹಾಗೂ ಪ್ರಜಾವಾಣಿ ಮುಖ್ಯ ವರದಿಗಾರ ಪದ್ಮರಾಜ್‌ ದಂಡಾವತಿ ಅವರ ‘ರಿಪೋರ್ಟಿಂಗ್‌’ ಎನ್ನುವ ಕನ್ನಡ ಪುಸ್ತಕಗಳನ್ನು, ಕರ್ನಾಟಕ ಮಾಧ್ಯಮ ಅಕಾಡೆಮಿ ಹೊರತಂದಿದೆ.

ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಧರ್ಮಸಿಂಗ್‌, ಪ್ರಸ್ತುತ ಪತ್ರಕರ್ತರ ಬದುಕು ಆತಂಕದಲ್ಲಿದೆ. ಪತ್ರಕರ್ತರ ಕಲ್ಯಾಣಕ್ಕೆ ಪೂರಕವಾಗುವಂತೆ ಕಾರ್ಯಕ್ರಮ ರೂಪಿಸಲು ಸರಕಾರ ಸಲಹೆ ಪಡೆಯಲು ಸರ್ಕಾರ ಸಮಿತಿ ರಚಿಸಲಿದೆ ಎಂದರು.

ಕಠಿಣ ಸವಾಲುಗಳ ನಡುವೆ ಪತ್ರಕರ್ತರು ಕರ್ತವ್ಯ ನಿರ್ವಹಿಸಬೇಕಾಗಿದೆ. ಜೀವವನ್ನೇ ಪಣವಾಗಿಟ್ಟು ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದಲ್ಲಿ ಪತ್ರಕರ್ತರ 50 ಕೊಲೆಗಳಾಗಿವೆ. ಇಂತಹ ಅಕಾಲಿಕ ಸಾವಿಗೆ ತುತ್ತಾದ ಕಾರ್ಯನಿರತ ಪತ್ರಕರ್ತರ ಕುಟುಂಬಕ್ಕೆ ಸರಕಾರ ನೆರವು ನೀಡಲಿದೆ. ಮಾಧ್ಯಮ ಅಕಾಡೆಮಿಗೆ ಪುಸ್ತಕಗಳ ಪ್ರಕಟಣೆಗಾಗಿ 5 ಲಕ್ಷ ರೂ.ಗಳನ್ನು ಬಿಡುಗಡೆ ಮಾಡುವುದಾಗಿ ಧರ್ಮಸಿಂಗ್‌ ಹೇಳಿದರು.

ವಿಧಾನ ಪರಿಷತ್‌ ಸಭಾಪತಿ ವಿ.ಆರ್‌.ಸುದರ್ಶನ್‌ ಮಾತನಾಡಿ, ಮುದ್ರಣ ಮಾಧ್ಯಮದಲ್ಲಿ ವಿದೇಶಿ ಹೂಡಿಕೆ ಹರಿದು ಬರಲಿದೆ. ಈ ಪರಿಣಾಮ ಅತ್ಯಂತ ಸ್ಪರ್ಧಾತ್ಮಕ ವಾತಾವಾರಣ ಸೃಷ್ಟಿಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಮಾಧ್ಯಮ ಅಕಾಡೆಮಿ ಅಧ್ಯಕ್ಷ ಹಾಗೂ ಸೂರ್ಯೋದಯ ಪತ್ರಿಕೆಯ ಸಂಪಾದಕ ಅರ್ಜುನದೇವ್‌, ವಾರ್ತಾ ಇಲಾಖೆ ಆಯುಕ್ತ ಸಿ.ಚಂದ್ರಶೇಖರ್‌ ಮತ್ತಿತರರು ಹಾಜರಿದ್ದರು.

ಕೊಸರು: ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಪತ್ರಕರ್ತರ ಕಾರ್ಯವೈಖರಿ ಬಗೆಗೆ ಇತ್ತೀಚಿಗಷ್ಟೇ ಕೆಂಡಕಾರಿದ್ದ ಮುಖ್ಯಮಂತ್ರಿಗಳಿಗೆ ಈಗ ಪ್ರೀತಿ ಬಂದಿದೆ. ಏಕೆಂದರೆ ಸಂಪುಟ ವಿಸ್ತರಣೆ ಮುಗಿದಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X