ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರ ಚಾಮುಂಡಿ ಸನ್ನಿಧಿಯಲ್ಲಿ ಜಯಲಲಿತಾ ಶ್ರವಣಚೌತಿ ಪೂಜೆ

By Staff
|
Google Oneindia Kannada News

ಮೈಸೂರ ಚಾಮುಂಡಿ ಸನ್ನಿಧಿಯಲ್ಲಿ ಜಯಲಲಿತಾ ಶ್ರವಣಚೌತಿ ಪೂಜೆ
ಚಾಮುಂಡೇಶ್ವರಿ ದೇವಿಗೆ ಜೋಡಿ ಬೆಳ್ಳಿದೀಪದ ಕಾಣಿಕೆ

ಮೈಸೂರು : ತಮಿಳುನಾಡಿನ ಮುಖ್ಯಮಂತ್ರಿ ಜೆ.ಜಯಲಲಿತಾ ಬುಧವಾರ(ಡಿ.15) ಮೈಸೂರಿಗೆ ಆಗಮಿಸಿದ್ದರು. ಕರ್ನಾಟಕದ ಮನೆ ಮಗಳು ಜಯಲಲಿತಾ ಇಲ್ಲಿನ ಚಾಮುಂಡಿ ಬೆಟ್ಟಕ್ಕೆ ತೆರಳಿ, ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಹೆಲಿಕಾಪ್ಟರ್‌ನಲ್ಲಿ ಚೆನ್ನೈನಿಂದ ಆಗಮಿಸಿದ ಅವರು, ಲಲಿತಮಹಲ್‌ ಹೆಲಿಪ್ಯಾಡ್‌ನಲ್ಲಿ ಇಳಿದರು. ಅಲ್ಲಿಂದ ಭಾರಿ ಭದ್ರತೆಯಾಂದಿಗೆ ಕಾರಿನಲ್ಲಿ ಬೆಟ್ಟಕ್ಕೆ ಆಗಮಿಸಿದರು. ಜಯಲಲಿತಾ ಅವರಿಗೆ ಜಿಲ್ಲಾಧಿಕಾರಿ ಜಿ.ಕುಮಾರ್‌ನಾಯ್ಕ ಹಾಗೂ ದೇವಾಲಯದ ಪ್ರಧಾನ ಅರ್ಚಕ ನಾಗೇಂದ್ರ ದೀಕ್ಷಿತ್‌ ನೇತೃತ್ವದಲ್ಲಿ ಪೂರ್ಣಕುಂಭ ಸ್ವಾಗತ ನೀಡಲಾಯಿತು. ನಂತರ ಸಂಜೆ 3.45ರಿಂದ 4.10ರವರೆಗೆ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಶ್ರವಣ ಚೌತಿ ಪೂಜಾ ಕಾರ್ಯದಲ್ಲಿ ಪಾಲ್ಗೊಂಡರು.

ಈ ಸಂದರ್ಭದಲ್ಲಿ ಜಯಲಲಿತಾ ಸುದ್ದಿಗಾರರ ಪ್ರಶ್ನೆಗಳಿಂದ ದೂರ ಉಳಿದರು. ಇದೊಂದು ಖಾಸಗಿ ಭೇಟಿಯಾಗಿದ್ದು, ಇತರ ವಿಚಾರಗಳ ಚರ್ಚಿಸಲು ಸೂಕ್ತ ಜಾಗವಲ್ಲ ಎಂದು ಜಯಲಲಿತಾ ಅಭಿಪ್ರಾಯಪಟ್ಟರು.

ಬುಧವಾರ ಮಧ್ಯಾಹ್ನದಿಂದ ಬೆಟ್ಟದ ಮೇಲೆ ನಿಷೇಧಾಜ್ಞೆ ವಿಧಿಸಿದಂತಹ ವಾತಾವರಣ ಇತ್ತು. ಯಾವುದೇ ಯಾತ್ರಿಕರನ್ನು, ಹಾಗೂ ವಾಹನಗಳನ್ನು ಬೆಟ್ಟದ ಮೇಲೆ ಬಿಡಲಿಲ್ಲ. ಜಯಲಲಿತಾಗೆ ಭಾರೀ ರಕ್ಷಣೆ ನೀಡಲಾಗಿತ್ತು. ಅವರ ಕಾರಿನ ಹಿಂದೆ ಮುಂದೆ ಸುಮಾರು 30ಕ್ಕೂ ಅಧಿಕ ಪೋಲೀಸ್‌ ವಾಹನಗಳು ಸಾಗಿದ್ದು, ಮೆರವಣೆಗೆಯಂತೆ ಕಂಡು ಬಂತು.

ಕಾಣಿಕೆ: ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ, ಮೈಸೂರಿನ ಶಕ್ತಿದೇವತೆಯ ಮೇಲೆ ವಿಶ್ವಾಸ ಹೊಂದಿದ್ದಾರೆ. ಪೂಜೆಯ ಬಳಿಕ ಚಾಮುಂಡೇಶ್ವರಿ ದೇವಾಲಯಕ್ಕೆ ದೊಡ್ಡ ಗಾತ್ರದ ಜೋಡಿ ಬೆಳ್ಳಿದೀಪಗಳನ್ನು ಕೊಡುಗೆಯಾಗಿ ನೀಡಿದರು.

ಕಳೆದ ವರ್ಷ ಮಾಘಮಾಸದಲ್ಲಿ ಅವರು ಆಗಮಿಸಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X