ಡಿಕೆಶಿ ಔಟ್ ? ಸಂಪುಟ ವಿಸ್ತರಣೆಗೆ ಅಧಿನಾಯಕಿ ಸೋನಿಯಾ ಓಕೆ
ಡಿಕೆಶಿ ಔಟ್ ? ಸಂಪುಟ ವಿಸ್ತರಣೆಗೆ ಅಧಿನಾಯಕಿ ಸೋನಿಯಾ ಓಕೆ
ಧರ್ಮಸಿಂಗ್ ಸಂಪುಟ ವಿಸ್ತರಣೆಯ ಕ್ಷಣಗಣನೆ ಆರಂಭ
ಬೆಂಗಳೂರು : ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ಹಸಿರು ನಿಶಾನೆ ತೋರುವುದರೊಂದಿಗೆ ನೆನೆಗುದಿಗೆ ಬಿದ್ದಿದ್ದ ರಾಜ್ಯ ಸಚಿವ ಸಂಪುಟ ವಿಸ್ತರಣಗೆ ಕಂಕಣ ಕೂಡಿ ಬಂದಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಸಚಿವ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದ್ದು , ಸಂಪುಟ ವಿಸ್ತರಣೆಯ ಕ್ಷಣಗಣನೆ ಆರಂಭವಾಗಿದೆ.
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಕೇರಳದ ಮಾಜಿ ಮುಖ್ಯಮಂತ್ರಿ ಎ.ಕೆ. ಆ್ಯಂಟನಿ ಹಾಗೂ ಸೋನಿಯಾ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಅವರೊಂದಿಗೆ ಸತತ ಮಾತುಕತೆಯ ನಂತರ ಮುಖ್ಯಮಂತ್ರಿ ಧರ್ಮಸಿಂಗ್ ಸಂಪುಟ ವಿಸ್ತರಣೆಗೆ ಡಿ.3ರಂದು ಹೈಕಮಾಂಡ್ ಒಪ್ಪಿಗೆ ಪಡೆದುಕೊಂಡಿದ್ದಾರೆ. ಉಳಿದಿರುವುದು ದೇವೇಗೌಡ-ಸಿದ್ಧರಾಮಯ್ಯ ಜೊತೆ ಕೂತು ಮಾತನಾಡಿ ದಿನಾಂಕ ನಿಗದಿಪಡಿಸುವುದು.
ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ನಿಕಟವರ್ತಿ ಹಾಗೂ ದೇವೇಗೌಡರ ಕಟ್ಟಾ ವಿರೋಧಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಹೆಸರು ಸಂಭವನೀಯ ಸಚಿವರ ಪಟ್ಟಿಯಲ್ಲಿಲ್ಲ ಎಂದು ದೆಹಲಿ ಮೂಲಗಳು ತಿಳಿಸಿವೆ. ಆದರೆ ಶಿವಕುಮಾರ್ ಅವರನ್ನು ತೃಪ್ತಿಪಡಿಸಲು ಸಚಿವ ಸ್ಥಾನಕ್ಕೆ ಸಮಾನವಾದ ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಹುದ್ದೆ ನೀಡಲು ಹೈಕಮಾಂಡ್ ಉದ್ದೇಶಿಸಿದೆ.
ಕಾಂಗ್ರೆಸ್‌ನ ಸಂಭವನೀಯ ಸಚಿವರ ಪಟ್ಟಿ : ರಾಮಲಿಂಗಾ ರೆಡ್ಡಿ , ಎಂ.ಆರ್.ಸೀತಾರಾಂ, ಎ.ಕೃಷ್ಣಪ್ಪ, ಆರ್.ವಿ.ದೇಶಪಾಂಡೆ, ಡಿ.ಸಿ.ತಮ್ಮಣ್ಣ, ಆಂಜನಮೂರ್ತಿ, ಡಾ।ಜಿ.ಪರಮೇಶ್ವರ, ಗುರುಪಾದಪ್ಪ ನಾಗಮಾರಪಲ್ಲಿ, ಭಾಗೀರಥಿ ಮರುಳಸಿದ್ದನಗೌಡ, ಡಾ।ವೈ. ನಾಗಪ್ಪ ಹಾಗೂ ವಿಧಾನ ಪರಿಷತ್‌ನ ಸದಸ್ಯ ಎಚ್.ಕೆ.ಪಾಟೀಲ್.
(ಇನ್ಫೋ ವಾರ್ತೆ)
ಮುಖಪುಟ / ಧರ್ಮ-ಕಾರಣ