ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯ ಸರ್ಕಾರ ಪ್ರಕಟಿಸಿರುವ 2005 ರ ರಜೆ ದಿನಗಳ ಪಟ್ಟಿ ಇಲ್ಲಿದೆ!

By Staff
|
Google Oneindia Kannada News

ರಾಜ್ಯ ಸರ್ಕಾರ ಪ್ರಕಟಿಸಿರುವ 2005 ರ ರಜೆ ದಿನಗಳ ಪಟ್ಟಿ ಇಲ್ಲಿದೆ!
ಒಟ್ಟು 17 ದಿನ ರಜೆ, ರಜೆ ದಿನ ಬಂದಿರುವ ಹಬ್ಬಗಳಿಂದಾಗಿ 5 ರಜೆ ಖೋತಾ

ಬೆಂಗಳೂರು : 2005 ನೇ ಸಾಲಿನಲ್ಲಿ ಸರ್ಕಾರಿ ರಜಾದಿನಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ಭಾನುವಾರ ಹಾಗೂ ಎರಡನೇ ಶನಿವಾರದ ರಜೆಗಳನ್ನು ಹೊರತುಪಡಿಸಿ ಒಟ್ಟು 17 ದಿನಗಳ ಸಾರ್ವತ್ರಿಕ ರಜೆಯನು ಸರ್ಕಾರ ಘೋಷಿಸಿ ಆದೇಶ ಹೊರಡಿಸಿದೆ.

ಗಾಂಧಿ ಜಯಂತಿ, ಕಾರ್ಮಿಕರ ದಿನ, ಮೊಹರಂ, ಕ್ರಿಸ್‌ಮಸ್‌ ಭಾನುವಾರದಿಂದ ಬಂದಿರುವುದರಿಂದ ಅವುಗಳು ರಜೇ ಪಟ್ಟಿಯಲ್ಲಿ ಸೇರಿಲ್ಲ . ಎರಡನೇ ಶನಿವಾರದಂದು ಬಂದಿರುವ ಯುಗಾದಿ ಕೂಡ ರಜೆಪಟ್ಟಿಯಿಂದ ಹೊರಗುಳಿದಿದೆ.
ರಜಾದಿನಗಳ ಪಟ್ಟಿ ಇಂತಿದೆ :

ಜನವರಿ

14- ಮಕರ ಸಂಕ್ರಾತಿ,
21-ಬಕ್ರೀದ್‌,
26- ಗಣರಾಜ್ಯೋತ್ಸವ.

ಮಾರ್ಚ್‌

8- ಮಹಾಶಿವರಾತ್ರಿ,
25- ಶುಭ ಶುಕ್ರವಾರ.

ಏಪ್ರಿಲ್‌

14- ಅಂಬೇಡ್ಕರ್‌ಜಯಂತಿ,
22- ಮಹಾವೀರ ಜಯಂತಿ ಹಾಗೂ ಈದ್‌ಮಿಲಾದ್‌.

ಮೇ

11- ಬಸವೇಶ್ವರ ಜಯಂತಿ.

ಆಗಸ್ಟ್‌

15- ಸ್ವಾತಂತ್ರ ದಿನಾಚರಣೆ.

ಸೆಪ್ಟೆಂಬರ್‌

7- ವರಸಿದ್ಧಿ ವಿನಾಯಕ ವ್ರತ.

ಅಕ್ಟೋಬರ್‌

3- ಮಹಾಲಯ ಅಮಾವಾಸ್ಯೆ,
12- ಮಹಾನವಮಿ, ಆಯುಧ ಪೂಜೆ,
13- ವಿಜಯದಶಮಿ,
31- ನರಕ ಚತುರ್ದಶಿ.

ನವೆಂಬರ್‌

1- ಕನ್ನಡ ರಾಜ್ಯೋತ್ಸವ,
2- ಬಲಿಪಾಡ್ಯಮಿ-ದೀಪಾವಳಿ,
4- ರಂಜಾನ್‌.

ಅಕ್ಟೋಬರ್‌17 ರಂದು ತುಲಾ ಸಂಕ್ರಮಣ ಹಾಗೂ ನವೆಂಬರ್‌18 ರಂದು ಹುತ್ತರಿ ಹಬ್ಬದ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಗೆ ಮಾತ್ರ ಅನ್ವಯವಾಗುವಂತೆ ಸ್ಥಳೀಯ ಸಾರ್ವತ್ರಿಕ ರಜೆ ಘೋಷಿಸಲಾಗಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X