ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಯಲ್‌ 139: ರಾಜ್ಯದ ರೈಲುಸೇವೆ ಸಮಗ್ರಮಾಹಿತಿಗಾಗಿ ಕರೆಕೇಂದ್ರ

By Staff
|
Google Oneindia Kannada News

ಡಯಲ್‌ 139: ರಾಜ್ಯದ ರೈಲುಸೇವೆ ಸಮಗ್ರಮಾಹಿತಿಗಾಗಿ ಕರೆಕೇಂದ್ರ
ಪ್ರಯಾಣಿಕರಿಗೆ ನೂಕು ನುಗ್ಗಲಿಂದ ಮುಕ್ತಿ , ಗಡಿಬಿಡಿ ಮಾತೇ ಇಲ್ಲ

ಬೆಂಗಳೂರು : ರಾಜ್ಯದ ಯಾವುದೇ ಮೂಲೆಯಿಂದ ರೈಲ್ವೆಯ ಎಲ್ಲ ಮಾಹಿತಿಯನ್ನೂ ಪಡೆಯಬಹುದಾದ ಕಾಲ್‌ ಸೆಂಟರ್‌ ವ್ಯವಸ್ಥೆಯಲ್ಲಿ ನೈರುತ್ಯ ರೈಲ್ವೆ ನ.29ರ ಸೋಮವಾರದಿಂದ ಆರಂಭಿಸಿದೆ.

ದೂರವಾಣಿ ಸಂಖ್ಯೆ 139 ಕ್ಕೆ ಕರೆ ಮಾಡುವ ಮೂಲಕ ರೈಲ್ವೆಗೆ ಸಂಬಂಧಿಸಿದ ಎಲ್ಲ ರೀತಿಯ ಮಾಹಿತಿಯನ್ನು ಪಡೆಯಬಹುದು. ರೈಲುಗಳ ಕುರಿತ ಪ್ರಯಾಣಿಕರ ವಿಚಾರಣೆ ಇದರಿಂದ ಸುಲಭವಾಗಲಿದೆ. ರೈಲ್‌ ಟೆಲ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾದ ಸಹಯೋಗದೊಂದಿಗೆ ಈ ಸವಲತ್ತನ್ನು ನೈರುತ್ಯ ರೈಲ್ವೆ ಕಲ್ಪಿಸಿದೆ.

ರೈಲುಗಳ ಆಗಮನ ಮತ್ತು ನಿರ್ಗಮನ, ಸ್ಥಳಾವಕಾಳ ದೊರೆಯುವಿಕೆ, ಟಿಕೆಟ್‌ ದರ, ವಿಶೇಷ ರೈಲುಗಳ ಮಾಹಿತಿ, ರೈಲ್ವೆ ನಿಲ್ದಾಣದಲ್ಲಿನ ಸೌಲಭ್ಯಗಳು, ವಿದೇಶಿ ಪ್ರವಾಸಿಗರಿಗೆ ಸಂಬಂಧಿಸಿದ ಮಾಹಿತಿ, ರೈಲುಗಳಲ್ಲಿನ ಸವಲತ್ತುಗಳು, ಕುಂದು-ಕೊರತೆ ಇತ್ಯಾದಿ ಮಾಹಿತಿ-ವಿಚಾರಣೆಧಿಗಾಗಿ 139 ಸಂಖ್ಯೆಗೆ ಕರೆ ಮಾಡಬಹುದು.

ಕರೆಕೇಂದ್ರದಲ್ಲಿ 240 ದೂರವಾಣಿ ಲೈನುಗಳಿರುವುದರಿಂದ ಸಂಪರ್ಕ ಸುಲಭವಾಗಿ ದೊರೆಯುತ್ತದೆ. ಈ ಸೇವೆಯಿಂದಾಗಿ ಪ್ರಯಾಣಿಕರಿಗೆ ನೂಕು ನುಗ್ಗಲು ಹಾಗೂ ಗಡಿಬಿಡಿಯಿಂದ ಮುಕ್ತಿ ದೊರೆಯುತ್ತದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

(ಇನ್ಫೋ ವಾರ್ತೆ)

Post your views

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X