For Daily Alerts
ಶಂಕರಾಚಾರ್ಯ ಬಂಧನಕ್ಕೆ ಬೇಸತ್ತು ಹಿಂದೂ ಕಾರ್ಯಕರ್ತ ಆತ್ಮಹತ್ಯೆ
ಶಂಕರಾಚಾರ್ಯ ಬಂಧನಕ್ಕೆ ಬೇಸತ್ತು ಹಿಂದೂ ಕಾರ್ಯಕರ್ತ ಆತ್ಮಹತ್ಯೆ
ಅಯ್ಯಂಪಾಳ್ಯದ ಷಣ್ಮುಗಂ ಕೀಟನಾಶಕ ಸೇವಿಸಿ ಸಾವಿಗೆ ಶರಣು
ಕೊಯಮತ್ತೂರಿಗೆ 40 ಕಿಮೀ ದೂರದ ಪಲ್ಲಾಡಮ್ ಸಮೀಪ ಷಣ್ಮುಗಂ ಎನ್ನುವ ಎಂಬಾತ ಸೋಮವಾರ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶಂಕರಾಚಾರ್ಯರ ಬಂಧನ ವಿರೋಧಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಇತರ ಹಿಂದೂ ಸಂಘಟನೆಗಳು ಹಮ್ಮಿಕೊಂಡಿದ್ದ ಉಪವಾಸ ಪ್ರತಿಭಟನೆಯಲ್ಲಿ ಷಣ್ಮುಗಂ ಪಾಲ್ಗೊಂಡಿದ್ದ . ಸ್ಥಳದಲ್ಲಿ ಇದ್ದಕ್ಕಿದ್ದಂತೆ ಕುಸಿದುಬಿದ್ದ ಆತನನ್ನು ಪಲ್ಲಾಡಮ್‌ನ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಕಂಚಿಶ್ರೀಗಳ ಬಂಧನದಿಂದ ಷಣ್ಮುಗಂ ತೀವ್ರ ಹತಾಶನಾಗಿದ್ದ . ಉಪವಾಸ ನಡೆಯುವ ಸ್ಥಳಕ್ಕೆ ಧಾವಿಸುವ ಮೊದಲೇ ಆತ ಕೀಟನಾಶಕ ಸೇವಿಸಿದ್ದ ಎಂದು ಮೂಲಗಳು ತಿಳಿಸಿವೆ.
(ಪಿಟಿಐ)
ಮುಖಪುಟ / ವಾರ್ತೆಗಳು