ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಂಚಿಶ್ರೀ ಜಾಮೀನು ಅರ್ಜಿ ಗುರುವಾರಕ್ಕೆ; ಜಯಲಲಿತ ಮೌನಭಂಗ

By Staff
|
Google Oneindia Kannada News

ಕಂಚಿಶ್ರೀ ಜಾಮೀನು ಅರ್ಜಿ ಗುರುವಾರಕ್ಕೆ; ಜಯಲಲಿತ ಮೌನಭಂಗ
ಪೊಲೀಸರ ಬಳಿ ಸಾಕಷ್ಟು ಸಾಕ್ಷ್ಯಾಧಾರಗಳಿವೆ- ಜಯಾ

ಚೆನ್ನೈ : ಕಂಚಿ ಶ್ರೀ ಶಂಕರಾಚಾರ್ಯ ಜಯೇಂದ್ರ ಸರಸ್ವತಿ ಸ್ವಾಮೀಜಿಯ ಜಾಮೀನು ಅರ್ಜಿಯ ವಿಚಾರಣೆಯನ್ನು ಮದ್ರಾಸ್‌ ಹೈಕೋರ್ಟ್‌ ಗುರುವಾರ(ನ.17)ಕ್ಕೆ ಮುಂದೂಡಿದೆ.

ಜಾಮೀನು ಅರ್ಜಿಯ ವಿಚಾರಣೆಯನ್ನು ಬುಧವಾರ ಕೈಗೆತ್ತಿಕೊಂಡ ನ್ಯಾಯಮೂರ್ತಿ ಆರ್‌. ಬಾಲಸುಬ್ರಮಣ್ಯನ್‌, ಕಾಂಚೀಪುರಂ ನ್ಯಾಯಾಧೀಶರ ಮೂಲಕ ಜಾಮೀನಿನ ಅರ್ಜಿ ತಲುಪಿಲ್ಲ ಎನ್ನುವ ನೆಪವೊಡ್ಡಿ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದರು.

ಸಮರ್ಥನೆ : ಕಂಚಿ ಶ್ರೀ ಜಯೇಂದ್ರ ಸರಸ್ವತಿ ಸ್ವಾಮಿಗಳ ಬಂಧನವನ್ನು ಸಮರ್ಥಿಸಿರುವ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ, ಕಾನೂನಿನ ಪರಿಧಿಯಲ್ಲಿ ಎಲ್ಲರೂ ಸರಿಸಮಾನರು ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೊಲೆ ಪ್ರಕರಣದಲ್ಲಿ ಶ್ರೀಗಳ ಪಾತ್ರವಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಅವರ ಬಂಧನದ ಮೂಲಕ ಸರಕಾರ ಪ್ರಜಾಪ್ರಭುತ್ವಕ್ಕೆ ಗೌರವ ಸಲ್ಲಿಸಿದೆ ಎಂದು ಬುಧವಾರ ನಡೆದ ವಿಧಾನ ಸಭೆಯ ಚರ್ಚೆಯಲ್ಲಿ ಜಯಲಲಿತಾ ತಿಳಿಸಿದರು.

ಕಂಚಿ ಶ್ರೀಗಳ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಬಳಿ ಸಾಕಷ್ಟು ಸಾಕ್ಷಿಗಳಿವೆ ಎಂದು ಜಯಲಲಿತಾ ಪ್ರಶ್ನೆಯಾಂದಕ್ಕೆ ಉತ್ತರಿಸಿದರು. ಕಂಚಿಶ್ರೀಗಳ ಬಂಧನದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯಧಿಲಲಿತಾ ಹೇಳಿಕೆ ನೀಡಿರುವುದು ಇದೇ ಮೊದಲ ಸಲ.

ಆರೋಪಿ ಶರಣು : ಶಂಕರರಾಮನ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಬಿಕಾಪತಿ ಎನ್ನುವ ಆರೋಪಿ ಬುಧವಾರ ನ್ಯಾಯಾಲಯಕ್ಕೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಶಂಕರರಾಮನ್‌ ಕೊಲೆ ಪ್ರಕರಣದಲ್ಲಿ 18 ಜನರ ಮೇಲೆ ಆರೋಪ ಪಟ್ಟಿ ಸಲ್ಲಿಸಲಾಗಿದೆ.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X