ಯೋಜನಾ ಆಯೋಗದ ನೆರವಿಗೆ ದಕ್ಷಿಣದ ಮುಖ್ಯಮಂತ್ರಿಗಳ ಪೋಟಿ
ಯೋಜನಾ ಆಯೋಗದ ನೆರವಿಗೆ ದಕ್ಷಿಣದ ಮುಖ್ಯಮಂತ್ರಿಗಳ ಪೋಟಿ
ಜಯಲಲಿತಾ ಬೆಂಗಳೂರಿಗೆ ಬರಲಿಲ್ಲ , ಪ್ರತಿನಿಧಿಗಳು ಬಂದರು
ಮುಖ್ಯಮಂತ್ರಿಗಳಾದ ಎನ್.ಧರ್ಮಸಿಂಗ್(ಕರ್ನಾಟಕ), ವೈ.ಎಸ್. ರಾಜಶೇಖರ ರೆಡ್ಡಿ(ಆಂಧ್ರಪ್ರದೇಶ), ವಿಲಾಸ್ ರಾವ್ ದೇಶ್‌ಮುಖ್(ಮಹಾರಾಷ್ಟ್ರ), ಎನ್.ರಂಗಸ್ವಾಮಿ(ಪಾಂಡಿಚೇರಿ), ಒಮನ್‌ಚಂಡಿ(ಕೇರಳ) ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ತಮಿಳುನಾಡು ಮುಖ್ಯಮಂತ್ರಿಗಳ ಪರವಾಗಿ ಮುಖ್ಯಕಾರ್ಯದರ್ಶಿ ಲಕ್ಷ್ಮಿ ಪ್ರಾಣೇಶ್ ಹಾಜರಾಗಿದ್ದಾರೆ.
ಕೇಂದ್ರ ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಆಹ್ಲುವಾಲಿಯಾ ಮುಖ್ಯಮಂತ್ರಿಗಳೊಂದಿಗೆ ಕೃಷಿ, ಕೃಷಿ ಸಾಲ, ಗ್ರಾಮೀಣ ನಿರುದ್ಯೋಗ, ಆಹಾರ ಧಾನ್ಯ ಬಳಸಿಕೊಂಡು ನಡೆಸುವ ಕಾಮಗಾರಿಗಳು, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳ ಸ್ಥಿತಿಗತಿ ಮತ್ತಿತರ ಸಂಗತಿಗಳನ್ನು ಚರ್ಚಿಸಿದರು.
ಐಟಿ ಪರಿಣಿತರಿಗೆ ಬೇಡಿಕೆ : ಕರ್ನಾಟಕಕ್ಕೆ ಎಎಸ್‌ಐಡಿಇ ಯೋಜನೆಯಡಿ ಸಾಫ್ಟ್ಟ್‌ವೇರ್ ಪರಿಣಿತರನ್ನು ಒದಗಿಸುವಂತೆ ಕೋರಿದ ಮುಖ್ಯಮಂತ್ರಿ ಧರ್ಮಸಿಂಗ್, ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ವಿದ್ಯುತ್ ಹಾಗೂ ರೈಲ್ವೆಯೋಜನೆಗಳಿಗೆ ಚಾಲನೆ ನೀಡಲು ಕೋರಿದರು.
ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದ ಅವರು, ಕೇಂದ್ರ ಸರಕಾರ ರಾಜ್ಯದ ಐಟಿ ಉದ್ಯಮಕ್ಕೆ ಈಗಾಗಲೇ ಸಹಕಾರ ನೀಡಿದೆ. ಜಗತ್ತಿನ ಗಮನ ಸೆಳೆಯುವಂತೆ ಬೆಳೆಯುತ್ತಿರುವ ರಾಜ್ಯದ ಐಟಿ ಉದ್ಯಮವನ್ನು ಬೆಂಬಲಿಸ ಬೇಕು. ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಿದರೆ, ಚೀನಾದೊಂದಿಗೆ ಪೈಪೋಟಿಗೆ ನೀಡಲು ಸಾಧ್ಯವಾಗುತ್ತದೆ. ಹತ್ತನೇ ಹಣಕಾಸು ಪಂಚವಾರ್ಷಿಕ ಯೋಜನೆಯಲ್ಲಿ ರಾಜ್ಯದ 4.899 ಕೋಟಿ ಯೋಜನೆಗೆ ಮಂಜೂರಾತಿ ನೀಡಬೇಕೆಂದು ಎನ್.ಧರ್ಮಸಿಂಗ್ ಒತ್ತಾಯಿಸಿದರು.
ದಕ್ಷಿಣದ ರಾಜ್ಯಗಳು ಬರದಿಂದ ತತ್ತರಿಸಿದ್ದು, ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ರೈತರಿಗೆ ವಿಶೇಷ ಪ್ಯಾಕೇಜ್ ಒದಗಿಸಿ, ಸುಲಭ ರೀತಿಯ ಸಬ್ಸಿಡಿ ಸಾಲವನ್ನು ನೀಡಿ ಚೈತನ್ಯ ತುಂಬಬೇಕಾಗಿದೆ ಎಂದು ಕೇರಳ ಮುಖ್ಯಮಂತ್ರಿಗಳು ಕೇಂದ್ರ ಯೋಜನಾ ಆಯೋಗದ ಗಮನಸೆಳೆದರು.
(ಪಿಟಿಐ)
ಮುಖಪುಟ / ಧರ್ಮ-ಕಾರಣ