ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಿಜಿಗಿಜಿ ಬೀಜಿಂಗ್‌ನಲ್ಲಿ ಗುರುವಾರದಿಂದ ವಿಶ್ವ ಶೌಚ ಸಮ್ಮೇಳನ2004

By Staff
|
Google Oneindia Kannada News

ಗಿಜಿಗಿಜಿ ಬೀಜಿಂಗ್‌ನಲ್ಲಿ ಗುರುವಾರದಿಂದ ವಿಶ್ವ ಶೌಚ ಸಮ್ಮೇಳನ2004
ಶೌಚಗೃಹ-ಸಾಮಾಜಿಕ ಪರಿವರ್ತನೆಯ ಸಾಧನ, ಭಾರತ ಪ್ರತಿನಿಧಿಯಿಂದ ವಿಚಾರ ಮಂಡನೆ

ಬೀಜಿಂಗ್‌ : ಚೀನಾದ ರಾಜಧಾನಿ ಬೀಜಿಂಗ್‌ ವಿಶ್ವದ ನಾನಾ ಮೂಲೆಯ ಪ್ರತಿನಿಧಿಗಳನ್ನೀಗ ಎದುರುಗೊಳ್ಳುತ್ತಿದೆ. ಈ ಸಂಭ್ರಮವೆಲ್ಲ ಶೌಚದ ಸುತ್ತಮುತ್ತಲೇ ಸುತ್ತುತ್ತಿದೆ ಗೊತ್ತಾ ?

ವಿಷಯ ಇಷ್ಟು , ವಿಶ್ವ ಶೌಚ ಸಮ್ಮೇಳನ-2004 ಬೀಜಿಂಗ್‌ನಲ್ಲಿ ಗುರುವಾರದಿಂದ (ನ.18) ಆರಂಭಗೊಳ್ಳುತ್ತಿದೆ. ಮೂರು ದಿನಗಳ ಕಾಲ ನಡೆಯುವ ಈ ಸಮ್ಮೇಳದಲ್ಲಿ 150 ಅಕಾಡೆಮಿಗಳು, ನೈರ್ಮಲ್ಯ ಪರಿಣಿತರು, ಶೌಚಗೃಹ ವಿನ್ಯಾಸಗಾರರು ಮತ್ತು ಪರಿಸರ ತಜ್ಞರು ಪಾಲ್ಗೊಳ್ಳುತ್ತಿದ್ದಾರೆ.

ಅಂದಹಾಗೆ, ಶೌಚ ಸಮ್ಮೇಳನದಲ್ಲಿ ಭಾರತದ ಪ್ರತಿನಿಧಿಯೂ ಇದ್ದಾರೆ. ಸುಲಭ್‌ ಇಂಟರ್‌ ನ್ಯಾಷನಲ್‌ ಸಂಸ್ಥಾಪಕ ಡಾ. ಬಿಂದೇಶ್ವರ್‌ ಪಾಠಕ್‌ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಶೌಚಗೃಹ-ಸಾಮಾಜಿಕ ಪರಿವರ್ತನೆಯ ಸಾಧನ ಎನ್ನುವ ವಿಚಾರವನ್ನು ಪಾಠಕ್‌ ಸಮ್ಮೇಳನದಲ್ಲಿ ಮಂಡಿಸುವರು. ಸಮ್ಮೇಳನದಲ್ಲೇ ವಿಶ್ವ ಶೌಚ ದಿನ (ನ.19) ದ ಆಚರಣೆಯೂ ನಡೆಯಲಿದೆ.

ಶೌಚಗೃಹ ಉದ್ಯಮಕ್ಕೆ ಸಂಬಂಧಿಸಿದ ಉದ್ಯಮಿಗಳು, ವಿವಿಧ ಗಣ್ಯರು, ಪರಿಣಿತರು, ಸರಕಾರಿ ಅಧಿಕಾರಿಗಳು, ಸುಮಾರು ಇಪ್ಪತ್ತು ದೇಶಗಳಿಂದ ವಿವಿಧ ಗಣ್ಯರು ಶೌಚ ಸಮಾವೇಶಕ್ಕೆ ಆಗಮಿಸುವ ನಿರೀಕ್ಷೆ ಇದೆ ಎಂದು ಸಮ್ಮೇಳನ ವ್ಯವಸ್ಥಾಪಕರು ತಿಳಿಸಿದ್ದಾರೆ.

ಇದು ನಾಲ್ಕನೇ ವಿಶ್ವ ಶೌಚ ಸಮ್ಮೇಳನವಾಗಿದ್ದು, ಈ ಹಿಂದೆ ಸಿಂಗಾಪುರ್‌, ಸಿಯೋಲ್‌ ಮತ್ತು ತೈಪೆಯಲ್ಲಿ ವಿಶ್ವ ಶೌಚ ಸಮ್ಮೇಳನ ಯಶಸ್ವಿಯಾಗಿ ಆಯೋಜಿಸಲಾಗಿತ್ತು.

ಕ್ಲಿಕ್ಕಿಸಿ : http://www.worldtoilet.org/hp/wto_hp.htm

(ಏಜನ್ಸೀಸ್‌)

ಪೂರಕ ಓದಿಗೆ :
ಶೌಚ : ಛೀ.... ಗಲೀಜು.... ಎನ್ನುವ ಮುನ್ನ...

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X