ದತ್ತಪೀಠಕ್ಕೆ ಪಾದಬೆಳೆಸಿ: ಮುಖ್ಯಮಂತ್ರಿಧರ್ಮಸಿಂಗ್‌ಗೆ ಶಾಸಕ ಮನವಿ

ದತ್ತಪೀಠಕ್ಕೆ ಪಾದಬೆಳೆಸಿ: ಮುಖ್ಯಮಂತ್ರಿಧರ್ಮಸಿಂಗ್‌ಗೆ ಶಾಸಕ ಮನವಿ
ಜಿಲ್ಲಾಡಳಿತ ತೀವ್ರ ನಿರ್ಲಕ್ಷ್ಯದಿಂದ ಭಕ್ತರಿಗೆ ತೊಂದರೆ

ಚಿಕ್ಕಮಗಳೂರು : ವಿವಾದಾಸ್ಪದ ದತ್ತಪೀಠಕ್ಕೆ ಮುಖ್ಯಮಂತ್ರಿಧರ್ಮಸಿಂಗ್‌ ಭೇಟಿ ನೀಡಬೇಕು ಎಂದು ಶಾಸಕ ಸಿ.ಟಿ. ರವಿ ಮನವಿ ಮಾಡಿದ್ದಾರೆ.

ಮುಖ್ಯಮಂತ್ರಿಯವರಿಗೆ ದತ್ತಪೀಠ ವಿವಾದವನ್ನು ಬಗೆಹರಿಸಬೇಕು ಎನ್ನುವ ಸದಾಶಯವಿದ್ದರೆ ಅವರು ದತ್ತಪೀಠಕ್ಕೆ ಭೇಟಿ ನೀಡಬೇಕು. ಈ ಭೇಟಿಯ ಮೂಲಕ ವಾಸ್ತವ ಸಂಗತಿಗಳನ್ನು ಅವರು ಗ್ರಹಿಸಬೇಕು ಎಂದು ಶಾಸಕ ಸಿ.ಟಿ. ರವಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಮಯದಲ್ಲಿ ಒತ್ತಾಯಿಸಿದರು.

ದತ್ತಪೀಠ ವಿವಾದ ಪರಿಹಾರದ ಕುರಿತು ಮಾತುಕತೆ ನಡೆಸುವ ಇಂಗಿತವನ್ನು ಮುಖ್ಯಮಂತ್ರಿಗಳು ವ್ಯಕ್ತಪಡಿಸಿದ್ದಾರೆ. ಈ ಮಾತುಕತೆಗೆ ಮುನ್ನ ಅವರು ದತ್ತಪೀಠಕ್ಕೆ ಭೇಟಿ ನಡೆಯುವುದು ಅವಶ್ಯ. ಅಂತೆಯೇ ಹಿಂದೂಪರ ಸಂಘಟನೆಗಳು ಹಾಗೂ ಶಾಖಾದ್ರಿ ಕುಟುಂಬದ ನಡುವೆಯೂ ಮಾತುಕತೆ ನಡೆಯಬೇಕು ಎಂದು ರವಿ ಹೇಳಿದರು.

ದತ್ತಪೀಠಕ್ಕೆ ಭೇಟಿ ನೀಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಆದರೆ ಜಿಲ್ಲಾಡಳಿತ ಯಾವುದೇ ವ್ಯವಸ್ಥೆ ಕಲ್ಪಿಸಿಲ್ಲ . ರಸ್ತೆಗಳನ್ನು ರಿಪೇರಿ ಮಾಡಿಸಲು ಜಿಲ್ಲಾಡಳಿತ ತೀವ್ರ ನಿರ್ಲಕ್ಷ್ಯ ವಹಿಸಿರುವುದರಿಂದ ಭಕ್ತಾದಿಗಳು ಗಂಟೆಗಟ್ಟಲೆ ಕಾಯುವಂತಾಗಿದೆ. ದತ್ತಪೀಠ ಸಂಪರ್ಕಿಸುವ ರಸ್ತೆಗಳ ರಿಪೇರಿಗಾಗಿ 40 ಲಕ್ಷ ರುಪಾಯಿ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಅದೇರೀತಿ ರಸ್ತೆಗಳ ಶಾಶ್ವತ ಅಭಿವೃದ್ಧಿಗಾಗಿ 2.95 ಕೋಟಿ ರುಪಾಯಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ರವಿ ತಿಳಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ಧರ್ಮ-ಕಾರಣ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+