ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಗತಿಪರ ‘ಅಗ್ನಿ’ ಪುರುಷರ ಮುಂದಾಳತ್ವದಲ್ಲಿ ಕರುನಾಡ ಸೇನೆ ಸಜ್ಜು

By Staff
|
Google Oneindia Kannada News

ಪ್ರಗತಿಪರ ‘ಅಗ್ನಿ’ ಪುರುಷರ ಮುಂದಾಳತ್ವದಲ್ಲಿ ಕರುನಾಡ ಸೇನೆ ಸಜ್ಜು
ಬ್ರಿಗೇಡ್‌ ರಸ್ತೆಗೆ ಬಸವಣ್ಣ ರಸ್ತೆಯೆಂದು ಮರು ನಾಮಕರಣ, ರಾಜಧಾನಿಗೆ ಕನ್ನಡ ಕಂಪು

ಬೆಂಗಳೂರು : ಕನ್ನಡ ನಾಡು-ನುಡಿ ಸಂರಕ್ಷಣೆಯ ಹೆಸರಲ್ಲಿ ಸಾಕಷ್ಟು ಸಂಘಟನೆಗಳಿವೆ. ಆದರೆ ಅವುಗಳ ಫಲಶ್ರುತಿ ಮಾತ್ರ ಕಾಣಿಸುತ್ತಿಲ್ಲ. ಈ ಕೊರತೆ ತುಂಬಲು ಹಾಗೂ ಕನ್ನಡಕ್ಕಾಗಿ ಕೈಎತ್ತಲು ಹೊಸ ಸಂಘಟನೆ ಹುಟ್ಟುತ್ತಿದೆ.

ಹಿರಿಯ ವಕೀಲ ಸಿ. ಹೆಚ್‌. ಹನುಮಂತರಾಯ ಮಾರ್ಗದರ್ಶನದಲ್ಲಿ ‘ಕರುನಾಡ ಸೇನೆ’ ಹೋರಾಟಕ್ಕೆ ಸಜ್ಜಾಗಿದೆ.

ಅಗ್ನಿ ವಾರಪತ್ರಿಕೆಯ ಸಂಪಾದಕ ಶ್ರೀಧರ್‌ ಸೇನೆಯ ದಂಡನಾಯಕರಾಗಿದ್ದು- ನಾಡು ಕಂಡ ನೂರಾರು ಸಂಘಟನೆಗಳಿಗಿಂತಲೂ ಇದು ಸಂಪೂರ್ಣ ಭಿನ್ನವಾಗಿದೆ. ಮಾತಿಗಿಂತಲೂ ಕಾಯಕದಲ್ಲಿಯೇ ನಮಗೆ ನಂಬಿಕೆ ಎಂದು ಶ್ರೀಧರ್‌ ಅಭಿಪ್ರಾಯಪಟ್ಟಿದ್ದಾರೆ.

ಇದು ಪತ್ರಿಕೆಯಲ್ಲ ಪ್ರತಿಭಟನೆಯ ಅಸ್ತ್ರ ಎನ್ನುವ ಘೋಷಣೆಯ ಅಗ್ನಿ ಪತ್ರಿಕೆ ಮೂಲಕ ಗುರ್ತಿಸಿಕೊಂಡಿರುವ ಶ್ರೀಧರ್‌, ರಾಜಧಾನಿ ನಗರದಲ್ಲಿನ ಕನ್ನಡೇತರ ನಾಮಫಲಕಗಳ ವಿರುದ್ಧ ಮೊದಲ ಹೋರಾಟಕ್ಕೆ ಮುಂದಾಗಿದ್ದಾರೆ. ಬ್ರಿಗೇಡ್‌ ರಸ್ತೆಗೆ ಬಸವಣ್ಣ ರಸ್ತೆ, ಕಮರ್ಷಿಯಲ್‌ ಸ್ಟ್ರೀಟ್‌ಗೆ ಟಿಪ್ಪುಸುಲ್ತಾನ್‌ ಹೆಸರನ್ನು ಹೊಸದಾಗಿ ನಾಮಕರಣ ಮಾಡುವ ಕನಸು ಅವರದು. ಬೆಂಗಳೂರನ್ನು ಸಂಪೂರ್ಣ ಕನ್ನಡೀಕರಣದ ಮೂಲಕ ಶುಚಿಗೊಳಿಸುವುದು ಸೇನೆಯ ಗುರಿ. ನ.8 ರಂದು ನಗರದ ಸೆಂಟ್ರಲ್‌ ಕಾಲೇಜು ಮೈದಾನದಲ್ಲಿ ಸೇನೆಯ ಉದ್ಘಾಟನಾ ಸಮಾರಂಭ ನಡೆಯಲಿದೆ.

ನಾಡಿನ ಹೆಸರಾಂತ ಸಾಹಿತಿಗಳು, ಕಲಾವಿದರು, ನಿಜವಾದ ಕನ್ನಡ ಹೋರಾಟಗಾರರು, ದಲಿತ ಸಂಘರ್ಷ ಸಮಿತಿ, ರೈತ ಸಂಘ ಸೇರಿದಂತೆ ಅನೇಕ ಸಂಘಟನೆಗಳ ಬೆಂಬಲ ಸೇನೆಗಿದೆ. ರಾಜಧಾನಿ ನಗರಕ್ಕೆ ಮಾತ್ರ ಸೀಮಿತವಾಗದೇ ರಾಜ್ಯದ ಎಲ್ಲಾ ಊರುಗಳಲ್ಲಿ ಸಂಘಟನೆಯನ್ನು ಬಲಪಡಿಸಲಾಗುವುದು. ನಮ್ಮ ಚಟುವಟಿಕೆ ನವೆಂಬರ್‌ಗೆ ಮಾತ್ರ ಸೀಮಿತವಲ್ಲ ಎಂದು ಶ್ರೀಧರ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇಂದೂಧರ ಹೊನ್ನಾಪುರ, ಕವಿ ಬಂಜಗೆರೆ ಜಯಪ್ರಕಾಶ್‌, ನಟ ಲೋಹಿತಾಶ್ವ, ಪಟ್ಟಣಗೆರೆ ಜಯಣ್ಣ ಈ ಸಂದರ್ಭದಲ್ಲಿ ಹಾಜರಿದ್ದರು.

(ಇನ್ಫೋ ವಾರ್ತೆ)

Post your views

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X