ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಟ್ರೋಲ್‌, ಡೀಸೆಲ್‌, ಗ್ಯಾಸ್‌ ತುಟ್ಟಿ : ಜನತೆಗೆ ದೀಪಾವಳಿ ಪಟಾಕಿ !

By Staff
|
Google Oneindia Kannada News

ಪೆಟ್ರೋಲ್‌, ಡೀಸೆಲ್‌, ಗ್ಯಾಸ್‌ ತುಟ್ಟಿ : ಜನತೆಗೆ ದೀಪಾವಳಿ ಪಟಾಕಿ !
ಅಡಿಗೆ ಅನಿಲದ ಸಿಲಿಂಡರ್‌ಗೆ ಕೇಂದ್ರ ಸರಕಾರದಿಂದ 158 ರೂ. ಸಬ್ಸಿಡಿ

ನವದೆಹಲಿ : ದ್ರವ ರೂಪದ ಚಿನ್ನ ಎನ್ನಲಾಗುವ ಪೆಟ್ರೋಲ್‌, ಡೀಸೆಲ್‌ ಮತ್ತು ಅಡಿಗೆ ಅನಿಲದ ಬೆಲೆ ತುಟ್ಟಿಯಾಗಿದೆ. ಗುರುವಾರ(ನ.4) ಮಧ್ಯರಾತ್ರಿಯಿಂದಲೇ ಕೇಂದ್ರ ಸರಕಾರ ಬೆಲೆ ಹೆಚ್ಚಳದ ಶಾಕ್‌ ನೀಡಿದೆ. ಶುಕ್ರವಾರ ಸಿಹಿ ನಿದ್ರೆಯಿಂದ ಎದ್ದ ಜನ, ಸುದ್ದಿ ಕೇಳಿ ಬೆಚ್ಚಿದ್ದಾರೆ.

ಅಂತರರಾಷ್ಟ್ರೀಯ ಮಾರುಕಟ್ಟೆ ಬೆಲೆಯಲ್ಲಿ ಶೇ.33 ರಷ್ಟು ಹೆಚ್ಚಳವಾಗಿದ್ದು, ಜಾಗತಿಕ ಮಾರುಕಟ್ಟೆ ದರಗಳಿಗೆ ದೇಶೀಯ ಇಂಧನದ ಬೆಲೆ ಹೊಂದಿಸಿಕೊಳ್ಳ ಬೇಕಾದರೆ, ಪೆಟ್ರೋಲ್‌ ದರವನ್ನು ಲೀಟರ್‌ಗೆ ರೂ.2.20, ಡೀಸೆಲ್‌ ಬೆಲೆಯನ್ನು ರೂ. 4.15, ಆಡಿಗೆ ಅನಿಲವನ್ನು ಸಿಲಿಂಡರ್‌ಗೆ 158 ರೂಪಾಯಿ ಹೆಚ್ಚಳ ಮಾಡ ಬೇಕಾಗುತ್ತದೆ. ಆದರೆ ಸರಕಾರ ಆಮದು ಬೆಲೆಗಿಂತಲೂ ಬಹಳಷ್ಟು ರಿಯಾಯಿತಿ ದರದಲ್ಲಿ ಇಂಧನಗಳನ್ನು ಪೂರೈಸುತ್ತಿದೆ ಎನ್ನುವ ಅಂಕಿ ಅಂಶಗಳ ಮೂಲಕ ಜನಸಾಮಾನ್ಯರನ್ನು ಸಮಾಧಾನಪಡಿಸಲು ಪ್ರಯತ್ನಿಸಿದೆ.

ದರ ಹೆಚ್ಚಳದ ವಿವರ ಹೀಗಿದೆ:

ಪೆಟ್ರೋಲ್‌- ರೂ. 45.51(ಲೀಟರ್‌ಗೆ ರೂ.2.45 ಹೆಚ್ಚಳ)
ಡೀಸೆಲ್‌-ರೂ.30.80(ಲೀಟರ್‌ಗೆ ರೂ. 2.39 ಹೆಚ್ಚಳ)
ಎಲ್‌ಪಿಜಿ-ರೂ.303.43(ಸಿಲಿಂಡರ್‌ಗೆ 20.78 ಹೆಚ್ಚಳ)

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X