ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಡೆಯ ಉಸಿರಿರುವ ತನಕ ಬಿಜೆಪಿ ಸಖ್ಯದ ಮಾತೇ ಇಲ್ಲ -ದೇವೇಗೌಡ

By Staff
|
Google Oneindia Kannada News

ಕಡೆಯ ಉಸಿರಿರುವ ತನಕ ಬಿಜೆಪಿ ಸಖ್ಯದ ಮಾತೇ ಇಲ್ಲ -ದೇವೇಗೌಡ
ಕಾಂಗ್ರೆಸ್‌ ಬಗೆಗಿನ ಜೆಡಿಎಸ್‌ ಶಾಸಕರ ಆಕ್ರೋಶಕ್ಕೆ ಗೌಡರ ಲಕ್ಷ್ಮಣ ರೇಖೆ

ಬೆಂಗಳೂರು : ಸರಕಾರ ರಚನೆ ಸಂದರ್ಭದಲ್ಲಿನ ಒಪ್ಪಂದವನ್ನು ಕಾಂಗ್ರೆಸ್‌ ಮುರಿದಿದೆ. ಸರಕಾರ ರಚನೆಯಾಗಿ ಆರು ತಿಂಗಳಾದರೂ ಸಂಪುಟ ವಿಸ್ತರಿಸಿಲ್ಲ. ಕಾಂಗ್ರೆಸ್‌ ಮೈತ್ರಿಯನ್ನು ತೊರೆದು, ಮತ್ತೆ ಚುನಾವಣೆಗೆ ಹೋಗೋಣ. ನಮ್ಮ ಮಾತಿಗೆ ಸರಕಾರದಲ್ಲಿ ಕವಡೆ ಕಾಸಿನ ಬೆಲೆಯಿಲ್ಲ. ಯಾವ ಪುರುಷಾರ್ಥಕ್ಕೆ ಸರಕಾರ. ಇದು ಹೀಗೆಯೇ ಮುಂದುವರೆದರೆ ಜೆಡಿಎಸ್‌ ಅಸ್ತಿತ್ವವೇ ಕಳೆದು ಹೋಗುತ್ತದೆ ಎಂದು ಜೆಡಿಎಸ್‌ ಶಾಸಕರು ತಮ್ಮ ಅಸಮಧಾನವನ್ನು ವ್ಯಕ್ತಪಡಿಸಿದರು.

ಜೆಡಿಎಸ್‌ ಪಕ್ಷದ ಸಭೆಯಲ್ಲಿ ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡ ಮತ್ತು ಸಿದ್ಧರಾಮಯ್ಯ ಮುಂದೆ ನೇರವಾಗಿಯೇ ಕಾಂಗ್ರೆಸ್‌ ಬಗೆಗಿನ ಆಕ್ರೋಶವನ್ನು ಶಾಸಕರು ಪ್ರಕಟಿಸಿದರು. ಅಲ್ಲದೇ ಕಾಂಗ್ರೆಸ್‌ ಧೋರಣೆಗಳ ಬಗೆಗೆ ತಣ್ಣಗಿರುವ ಪಕ್ಷದ ಮುಖಂಡರನ್ನು ತರಾಟೆಗೆ ತೆಗೆದುಕೊಂಡರು.

ನ.10 ರೊಳಗೆ ಸಂಪುಟ ವಿಸ್ತರಣೆಯಾಗದಿದ್ದರೇ ನಮ್ಮ ದಾರಿ ನಾವು ನೋಡಿಕೊಳ್ಳುತ್ತೇವೆ ಎಂದು ಶಾಸಕರು ಅಪರೋಕ್ಷವಾಗಿ ಸೂಚಿಸಿದರು. ಕಡೆಗೆ ದೇವೇಗೌಡರ ಲಕ್ಷ್ಮಣರೇಖೆ ಎಲ್ಲರ ಬಾಯಿಗೆ ಬೀಗ ಹಾಕಿತು ಎನ್ನಲಾಗಿದೆ.

ಬಿಜೆಪಿ ಬೇಡ : ಕಾಂಗ್ರೆಸ್‌ ಮೈತ್ರಿಯಿಂದ ಹೊರ ಬಂದು ಬಿಜೆಪಿ ಜೊತೆ ಸರಕಾರ ರಚಿಸುವ ಶಾಸಕರ ಪ್ರಸ್ತಾಪಕ್ಕೆ ದೇವೇಗೌಡರು ಸಮ್ಮತಿಸಲಿಲ್ಲ.

ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು, ಎಂತಹ ತ್ಯಾಗಕ್ಕೂ ಸಿದ್ಧ. ಸಹನೆಯಿಂದ ಜೆಡಿಎಸ್‌ ವರ್ತಿಸಬೇಕಾಗಿದೆ. ನನ್ನ ಕಡೆಯ ಉಸಿರಿರುವ ತನಕ ಕೋಮುವಾದಿ ಬಿಜೆಪಿಯಾಂದಿಗೆ ಸಖ್ಯದ ಮಾತೇ ಇಲ್ಲ. ಸಂಪುಟ ವಿಸ್ತರಣೆಗೆ ಕಾಲಮಿತಿ ಇಲ್ಲ. ಸಂಪುಟ ವಿಸ್ತರಣೆ, ನಿಗಮ ಮಂಡಳಿ ಸ್ಥಾನಮಾನ, ಮರುಚುನಾವಣೆ ಇದೆಲ್ಲವನ್ನು ಬಿಟ್ಟು ಪಕ್ಷದ ಸಂಘಟನೆಗೆ ಎಲ್ಲರೂ ಶ್ರಮಿಸಬೇಕೆಂದು ದೇವೇಗೌಡರು ಸಭೆಯಲ್ಲಿ ಕರೆ ನೀಡಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X