ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀನಿವಾಸಪುರದಲ್ಲಿ 21ನೇ ಶತಮಾನದ ಮರಿ ವಿಶ್ವೇಶ್ವರಯ್ಯಂದಿರು !

By Staff
|
Google Oneindia Kannada News

ಶ್ರೀನಿವಾಸಪುರದಲ್ಲಿ 21ನೇ ಶತಮಾನದ ಮರಿ ವಿಶ್ವೇಶ್ವರಯ್ಯಂದಿರು !
ಸೂರ್ಯ ಮನೆ ಕಡೆಗೆ ಹೊರಟ, ಹೋಮ್‌ವರ್ಕ್‌ ಮುಗಿಸೋ ಬೇಗ!

ಬೆಂಗಳೂರು : ಇಲ್ಲಿನ ಮಕ್ಕಳು ಸೂರ್ಯ ಮನೆಗೆ ಹೋಗುವ ಮುನ್ನವೇ ಓದು-ಬರಹವನ್ನು ಮುಗಿಸಿಬಿಡಬೇಕು. ಸಂಜೆ ಆಟದ ಸಮಯವೆಂದು ಆಡುವಂತಿಲ್ಲ. ಏಕೆಂದರೆ ಆಟದಲ್ಲಿ ತೊಡಗಿದರೆ ಹೋಮ್‌ವರ್ಕ್‌ ಮಾಡೋದಕ್ಕೆ ಆಗೋದಿಲ್ಲ. ಮಾಡದಿದ್ದರೆ ಶಾಲೆಯಲ್ಲಿ ಮೇಷ್ಟ್ರು ಕೈಲಿ ಏಟು ತಪ್ಪಿದ್ದಲ್ಲ! -ಇದು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕು ಕೇಂದ್ರದಲ್ಲಿನ ಕತೆ.

ರಾತ್ರಿವೇಳೆ ಹೋಮ್‌ವರ್ಕ್‌ ಮಾಡಬಹುದಲ್ಲ...? ನಿಮ್ಮ ಪ್ರಶ್ನೆಯೇನೊ ಸರಿ. ಎಲ್ಲ ಮಕ್ಕಳೂ ಹೋಂವರ್ಕ್‌ ಎಂದು ಪುಸ್ತಕ ಹಿಡಿಯುವುದು ಸಂಜೆಗೆ ಕಪ್ಪೇರಿದಾಗಲೇ. ಆದರೆ ಕತ್ತಲಲ್ಲಿ ಎಂತಹ ಓದು? ಅದೂ ಇಕ್ಕಟ್ಟಿನ ಗುಡಿಸಲುಗಳಲ್ಲಿ. ಬೀದಿ ದೀಪದ ಕೆಳಗೆ ಓದಿ ವಿಶ್ವೇಶ್ವರಯ್ಯ ಪ್ರಖ್ಯಾತರಾದಂತೆ, ಇಲ್ಲಿನ ಮಕ್ಕಳು ಅವರ ಹಾದಿಯಲ್ಲಿ ಸಾಗಲಿ ಎನ್ನುವುದು ಆಡಳಿತ ಯಂತ್ರದ ಆಶಯವಿದ್ದಂತೆ ತೋರುತ್ತಿದೆ.

ಶ್ರೀನಿವಾಸಪುರ ಪಟ್ಟಣದ ಬಾಲಾಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ಸುಮಾರು 24 ಗುಡಿಸಲುಗಳು ಸುಮಾರು ವರ್ಷಗಳಿಂದ ನೆಲೆಸಿವೆ. ಇಲ್ಲಿನ ಜನ ಪ್ಲಾಸ್ಟಿಕ್‌ ಬಿಂದಿಗೆ ಬಕೀಟು, ಮನೆ ಬಳಕೆ ವಸ್ತುಗಳು, ಬಳೆ ಮತ್ತಿತರೆ ವಸ್ತುಗಳನ್ನು ಕುಟುಂಬ ಪೋಷಣೆಗಾಗಿ ಮಾರಾಟ ಮಾಡುತ್ತಾರೆ. ಕೆಲವರು ಭಿಕ್ಷಾಟನೆಯನ್ನು ಅವಲಂಬಿಸಿದ್ದಾರೆ.

ನಮ್ಮಂತೆ ನಮ್ಮ ಮಕ್ಕಳು ಆಗಬಾರದೆಂದು ಕೆಲವು ಕುಟುಂಬಗಳು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿವೆ. ಮನೆಯಲ್ಲಿ ಬೆಳಕಿಲ್ಲದಿದ್ದರೂ, ಹದಿನೈದು ಮಕ್ಕಳು ಅಕ್ಷರ ಜ್ಞಾನದ ಬೆಳಕು ಪಡೆಯುತ್ತಿದ್ದಾರೆ. ಗುಡಿಸಲುಗಳ ಪಕ್ಕದಲ್ಲೇ ಇರುವ ಟ್ರಾನ್ಸ್‌ಫಾರ್ಮರ್‌ ಮಕ್ಕಳನ್ನು ಅಣಕಿಸುತ್ತಿದೆ. ಗುಡಿಸಲು ವಾಸಿಗಳಿಗೆ ಮತದಾನದ ಹಕ್ಕು, ಪಡಿತರ ಚೀಟಿ ನೀಡಿರುವ ಸರಕಾರ ಸೂರನ್ನು ಕಲ್ಪಿಸಿಲ್ಲ. ಚುನಾವಣೆಯಲ್ಲಿ ಇತ್ತ ಸಾಗುವ ಜನಪ್ರತಿನಿಧಿಗಳು ವಸತಿ ಕಲ್ಪಿಸುವ ಭರವಸೆಯನ್ನು ಪುನಾರಾವರ್ತಿಸುತ್ತಿದ್ದಾರೆ.

ಇಂದಿರಾ ಆವಾಸ್‌, ರಾಜೀವ್‌ಗಾಂಧಿ ವಸತಿ, ಆಶ್ರಯ ಮತ್ತಿತರ ಸರಕಾರದ ಯೋಜನೆಗಳು ಉಳ್ಳವರ ಪಾಲಾಗುತ್ತಿವೆಯೇ ಹೊರತು ವಸತಿಹೀನರ ತಲುಪುತ್ತಿಲ್ಲ ಎನ್ನುವುದಕ್ಕೆ ಇದೊಂದು ಉದಾಹರಣೆ. ಧರ್ಮರಾಜು ಕಾಲದಲ್ಲಾದರೂ ಈ ಅಕ್ಷರದಾಹಿ ಕುಟುಂಬಗಳಿಗೆ ಬೆಳಕು ಸಿಗುತ್ತಾ ?

(ಇನ್ಫೋ ವಾರ್ತೆ)

Post your views

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X