ಕನ್ನಡಮಾಸದ ಕೊಡುಗೆ : ರಾಜ್ಯಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ
ಕನ್ನಡಮಾಸದ ಕೊಡುಗೆ : ರಾಜ್ಯಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ
ಜುಲೈ 2004ರಿಂದ ಅನ್ವಯವಾಗುವಂತೆ ಶೇ.3ರ ಅಧಿಕ ತುಟ್ಟಿಭತ್ಯೆ
ಮೂಲ ವೇತನಕ್ಕೆ ಅನ್ವಯವಾಗುವಂತೆ ಶೇ.3ರ ತುಟ್ಟಿಭತ್ಯೆ ನೀಡುವ ಆದೇಶವನ್ನು ನ.3ರ ಬುಧವಾರ ರಾಜ್ಯ ಸರ್ಕಾರ ಹೊರಡಿಸಿತು. 2004ರ ಜುಲೈನಿಂದಲೇ ಈ ತುಟ್ಟಿಭತ್ಯೆ ಅನ್ವಯವಾಗಲಿದ್ದು , ಸೆಪ್ಟಂಬರ್‌ವರೆಗಿನ ಹಣವನ್ನು ಉಳಿತಾಯ ಪತ್ರಗಳ ರೂಪದಲ್ಲಿ ನೌಕರರು ಪಡೆಯಲಿದ್ದಾರೆ. ಅಕ್ಟೋಬರ್ ತಿಂಗಳ ಹೆಚ್ಚಳ ನಗದು ರೂಪದಲ್ಲಿಯೇ ದೊರಕುವುದು.
ರಾಜ್ಯ ಸರ್ಕಾರದ ಸುಮಾರು 6 ಲಕ್ಷ ನೌಕರರಿಗೆ ಈ ತುಟ್ಟಿಭತ್ಯೆ ಹೆಚ್ಚಳ ಅನ್ವಯವಾಗಲಿದೆ. ಸರ್ಕಾರದ ನಿರ್ಧಾರವನ್ನು ರಾಜ್ಯ ಸರ್ಕಾರ ನೌಕರರ ಸಂಘದ ಕಾರ್ಯದರ್ಶಿ ಎಂ.ವಿ.ರಾಜಶೇಖರಯ್ಯ ಸ್ವಾಗತಿಸಿದ್ದು , ಮುಖ್ಯಮಂತ್ರಿ ಧರ್ಮಸಿಂಗ್‌ರಿಗೆ ಧನ್ಯವಾದ ಅರ್ಪಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications