ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಐಟಿ ಪ್ರಗತಿಗಿನ್ನು ಮೈಸೂರು-ಮಂಗಳೂರುಗಳಂಥ ಪಟ್ಟಣಗಳೇ ಗತಿ’

By Staff
|
Google Oneindia Kannada News

‘ಐಟಿ ಪ್ರಗತಿಗಿನ್ನು ಮೈಸೂರು-ಮಂಗಳೂರುಗಳಂಥ ಪಟ್ಟಣಗಳೇ ಗತಿ’
ದೇಶದ ಸಣ್ಣ ನಗರಗಳಲ್ಲಿ ಎಸ್‌ಟಿಪಿಐನಿಂದ ಘಟಕಗಳ ಸ್ಥಾಪನೆ

ಬೆಂಗಳೂರು : ಮಾಹಿತಿ ತಂತ್ರಜ್ಞಾನ ಹಾಗೂ ಬಿಪಿಒ ವಲಯದ ತ್ವರಿತ ಪ್ರಗತಿಗೆ ಮಂಗಳೂರು, ಮೈಸೂರುಗಳಂಥ ಸಣ್ಣ ನಗರ ಪಟ್ಟಣಗಳೇ ಇನ್ನು ಮುಂದೆ ಗತಿ ಎಂದು ಐಟಿ ಇಲಾಖೆಯ ಉನ್ನತ ಅಧಿಕಾರಿ ಅಭಿಪ್ರಾಯಟ್ಟಿದ್ದಾರೆ.

ಟೆಕ್ನಾಲಜಿ ಔಟ್‌ಸೋರ್ಸಿಂಗ್‌ ಎನ್ನುವ ವಿಷಯದ ಕುರಿತು ಬೆಂಗಳೂರುಐಟಿ.ಕಾಂ ಮೇಳದಲ್ಲಿ ಮಂಗಳವಾರ ಮಾತನಾಡಿದ ಭಾರತೀಯ ಸಾಫ್ಟ್‌ವೇರ್‌ ಟೆಕ್ನಾಲಜಿ ಪಾರ್ಕ್‌ಗಳ (ಎಸ್‌ಟಿಪಿಐ) ಡೈರೆಕ್ಟರ್‌ ಜನರಲ್‌ ಎಸ್‌.ಎನ್‌.ಜಿಂದಾಲ್‌ ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿದರು.

ಮುಂದಿನ ದಿನಗಳಲ್ಲಿ ಸಣ್ಣ ಸಣ್ಣ ಪಟ್ಟಣಗಳಲ್ಲಿ ತನ್ನ ಘಟಕಗಳನ್ನು ಸ್ಥಾಪಿಸಲು ಎಸ್‌ಟಿಪಿಐ ಉದ್ದೇಶಿಸಿದೆ. ಭಾರತದ ಸಣ್ಣ ನಗರ ಹಾಗೂ ಪಟ್ಟಣಗಳಲ್ಲಿ ಐಟಿ ಹಾಗೂ ಬಿಪಿಒ ಕ್ಷೇತ್ರಗಲ ತ್ವರಿತ ಪ್ರಗತಿಗೆ ಹೆಚ್ಚಿನ ಅವಕಾಶವಿದೆ. ಮುಂದಿನ ಐದು ವರ್ಷಗಳಲ್ಲಿ ಈ ಸಣ್ಣ ನಗರಗಳು ಐದು ಪಟ್ಟು ಪ್ರಗತಿ ಸಾಧಿಸಲಿವೆ ಎಂದು ಜಿಂದಾಲ್‌ ಹೇಳಿದರು. ತಮ್ಮ ಮಾತಿಗೆ ಉದಾಹರಣೆಯಾಗಿ- ಮೈಸೂರು, ಮಂಗಳೂರು, ಭೋಪಾಲ್‌, ಜೈಪುರ, ಕೊಯಮ್ತತೂರು, ಮಧುರೈಗಳನ್ನು ಜಿಂದಾಲ್‌ ಹೆಸರಿಸಿದರು.

(ಪಿಟಿಐ)

ಮುಖಪುಟ / ಐಟಿ - ಬಿಟಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X