ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾಲು ಕುಡಿದ ಹುಡುಗನಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

By Staff
|
Google Oneindia Kannada News

ಹಾಲು ಕುಡಿದ ಹುಡುಗನಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಕೇಂದ್ರ ಸಾಹಿತ್ಯ ಅಕಾಡೆಮಿಯ ಸುವರ್ಣ ಮಹೋತ್ಸವ ಪ್ರಶಸ್ತಿಗಳು ಪ್ರಕಟ

ಬೆಂಗಳೂರು : ವಿಶಿಷ್ಟ ದನಿಯ ಕವಿ, ಕಥೆಗಾರ ಅಬ್ದುಲ್‌ ರಶೀದ್‌ಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಸುವರ್ಣ ಮಹೋತ್ಸವ ಪ್ರಶಸ್ತಿ ದೊರೆಕಿದೆ. ಪ್ರಶಸ್ತಿ 40 ಸಾವಿರ ರುಪಾಯಿ ನಗದು ಬಹುಮಾನ ಹೊಂದಿದೆ.

ಕೇಂದ್ರ ಸಾಹಿತ್ಯ ಅಕಾಡೆಮಿಗೆ 50ವರ್ಷ ತುಂಬಿರುವ ಸಂದರ್ಭದಲ್ಲಿ ಈ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಐದು ಮಂದಿ ಯುವ ಲೇಖಕರು ಮತ್ತು ಹಿರಿಯ ಸಾಹಿತಿಗಳನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಮಲೆಯಾಳಂ ಲೇಖಕಿ ಎಸ್‌. ಸಿತಾರ, ಬಂಗಾಳಿ ಬರೆಹಗಾರ ಮಂದ್ರಕಾಂತ ಸೇನ್‌, ಇಂಗ್ಲೀಷ್‌ ಕವಿ ಮತ್ತು ಲೇಖಕ ರಂಜಿತ್‌ ಹೊಸಕೋಟೆ, ಹಿಂದಿ ಲೇಖಕಿ ನೀಲಾಕ್ಷಿ ಸಿಂಗ್‌ ಇತರ ಪ್ರಶಸ್ತಿ ಪುರಸ್ಕೃತರು.

Abdul Rashid selected for Kendra Sahithya Academy awardದಿಲ್ಲಿಯಲ್ಲಿ ನವೆಂಬರ್‌ 1ರಂದು ನಡೆಯುವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಧಾನಮಂತ್ರಿ ಮನಮೋಹನ್‌ ಸಿಂಗ್‌ ಪ್ರಶಸ್ತಿ ಪ್ರದಾನ ಮಾಡುವರು. ಇದೇ ಸಮಾರಂಭದಲ್ಲಿ ಮರಾಠಿಯ ಹಿರಿಯ ದಲಿತ ಕವಿ, ಕಾದಂಬರಿಕಾರ ನಾಮ್‌ ದೇವ್‌ ಲಕ್ಷ್ಮಣ್‌ ಧಸಾಲ್‌ ಅವರನ್ನು ಜೀವನದ ಸಾಧನೆಗಾಗಿ ಗೌರವಿಸುತ್ತಿದೆ.

ಹಾಲು ಕುಡಿದ ಹುಡುಗ, ಪ್ರಾಣ ಪಕ್ಷಿ , ನನ್ನ ಪಾಡಿಗೆ ನಾನು, ಮಾತಿಗೂ ಆಚೆ ರಷೀದರ ಕೃತಿಗಳು. ಹಾಲು ಕುಡಿದ ಹುಡುಗ ಕಥಾಸಂಕಲನಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ವರ್ಧಮಾನ ಹಾಗೂ ಲಂಕೇಶ್‌ ಸಾಹಿತ್ಯ ಪ್ರಶಸ್ತಿಗಳೂ ಅವರಿಗೆ ಸಂದಿವೆ.

ದಟ್ಸ್‌ಕನ್ನಡದಲ್ಲಿ ಪ್ರಕಟವಾಗಿರುವ ರಷೀದರ ಎರಡು ಕಥೆಗಳು : ಮಣ್ಣಾಂಗಟ್ಟಿ ಹಾಗೂ ಒಂದು ಪುರಾತನ ಪ್ರೇಮ.

ಪ್ರಸ್ತುತ ಮೈಸೂರು ಆಕಾಶವಾಣಿ ಕೇಂದ್ರದಲ್ಲಿ ಕಾರ್ಯಕ್ರಮ ನಿರ್ವಾಹಕರಾಗಿ ರಷೀದ್‌ ಕಾರ್ಯ ನಿರ್ವಹಿಸುತ್ತಿದ್ದಾರೆ.

(ಇನ್ಫೋ ವಾರ್ತೆ)

Post your views

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X