ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯೋತ್ಸವ ಪ್ರಶಸ್ತಿ ಯಾರುಯಾರಿಗೆ? ಇಲ್ಲಿಹುದು ಸಂಭಾವ್ಯರ ಪಟ್ಟಿ

By Staff
|
Google Oneindia Kannada News

ರಾಜ್ಯೋತ್ಸವ ಪ್ರಶಸ್ತಿ ಯಾರುಯಾರಿಗೆ? ಇಲ್ಲಿಹುದು ಸಂಭಾವ್ಯರ ಪಟ್ಟಿ
ಕನ್ನಡ ಜ್ವರ ಶುರುವಾಯ್ತು ನೋಡ್ರಿ, ಈ ಬಾರಿ 70 ಮಂದಿಗೆ ಪ್ರಶಸ್ತಿ ಕಣ್ರೀ..

ಬೆಂಗಳೂರು : ನವೆಂಬರ್‌ ಬಂತು ಎಂದರೆ ಕರ್ನಾಟಕದಲ್ಲಿ ಕನ್ನಡದ ಕಾವು ದಿಢೀರ್‌ ಹೆಚ್ಚುತ್ತದೆ. ಕನ್ನಡಿಗರು ನಿದ್ರೆಯಿಂದ ಎದ್ದು, ಗಲ್ಲಿಗಲ್ಲಿಗಳಲ್ಲಿ ಕನ್ನಡಮ್ಮನಿಗೆ ಜೈಕಾರದ ಘೋಷಣೆಗಳನ್ನು ಕೂಗುತ್ತಾರೆ. ಕನ್ನಡ ನಾಡು-ನುಡಿ ಚೆಂದಾ, ತೆಗೆಯಿರಿ ರಾಜ್ಯೋತ್ಸವಕ್ಕೆ ಚಂದಾ ಎಂದು ರಾಜ್ಯೋತ್ಸವ ಕನ್ನಡಿಗರು ಎಲ್ಲರಿಗೂ ಗಂಟು ಬೀಳುತ್ತಾರೆ.

ಕನ್ನಡ ಹೋರಾಟಗಾರರಿಗೆ, ಕವಿಗಳಿಗೆ, ಕನ್ನಡ ಭಾಷಣ ಬಿಗಿಯುವವರಿಗೆ, ಆರ್ಕೆಸ್ಟ್ರಾಗಳಿಗೆ, ಹಾಸ್ಯೋತ್ಸವಗಳು ಹಾಗೂ ನಗೆ ಪರಿಣಿತರಿಗೆ ಇದು ಹಬ್ಬದ ತಿಂಗಳು. ಅದೇ ರೀತಿ ರಾಜ್ಯೋತ್ಸವ ಪ್ರಶಸ್ತಿಗೆ ಸಹಾ ಸಾಕಷ್ಟು ಕಸರತ್ತುಗಳು ಶುರುವಾಗುತ್ತವೆ. ಪ್ರಶಸ್ತಿಗೆ ಪಾತ್ರರಾದವರನ್ನು ಯೋಗ್ಯರು-ಅಯೋಗ್ಯರು ಎಂದು ಜನತೆ ವಿಭಾಗಿಸಿದರೂ, ಪ್ರಶಸ್ತಿ ಆಯ್ಕೆಗೆ ಸರಕಾರದ ಮಾನದಂಡಗಳು ಯಾರಿಗೂ ಅರ್ಥವಾಗುವುದಿಲ್ಲ. ಇದು ಪ್ರತಿವರ್ಷದ ಕತೆ.

ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಕು.ವೀರಭದ್ರಪ್ಪ , ಹಿಂದೂಸ್ತಾನಿ ಗಾಯಕ ಪಂ.ಪರಮೇಶ್ವರ ಹೆಗಡೆ, ಅರ್ಥಶಾಸ್ತ್ರಜ್ಞ ಡಾ.ಅರವಿಂದ ನಾಡಕರ್ಣಿ ಸೇರಿದಂತೆ 70 ಮಂದಿಗೆ ಲಭ್ಯವಾಗಿದೆ ಎಂದು ಅನಧಿಕೃತ ಮೂಲಗಳು ತಿಳಿಸಿವೆ.

ಸಚಿವ ಎಂ. ಪಿ. ಪ್ರಕಾಶ್‌ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರನ್ನು ಗುರ್ತಿಸಲಾಗಿದೆ. ಈ ಪಟ್ಟಿಯನ್ನು ಮುಖ್ಯಮಂತ್ರಿ ಧರ್ಮಸಿಂಗ್‌, ಉಪಮುಖ್ಯಮಂತ್ರಿ ಸಿದ್ಧರಾಮಯ್ಯ ಅಂತಿಮಗೊಳಿಸುವರು.

ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯಲ್ಲಿರುವ ಸಂಭಾವ್ಯರು :

  • ಸಾಹಿತ್ಯ ಕ್ಷೇತ್ರ- ಡಾ.ನಿರುಪಮಾ, ಗುರುಮೂರ್ತಿ ಪೆಂಡಕೂರು, ಬಿ.ವಿ.ವೀರಭದ್ರಪ್ಪ , ನಾ.ಮೊಗಸಾಲೆ
  • ಸಂಗೀತ ಕ್ಷೇತ್ರ- ಪಂ.ಸೋಮನಾಥ ಮರಡೂರ, ಪಂ. ಆರ್‌.ಕೆ.ಪದ್ಮನಾಭ,ನಾದಸ್ವರ ವಾದಕ ಚಂದ್ರಶೇಖರ್‌
  • ಚಿತ್ರಕಲಾ ಕ್ಷೇತ್ರ- ಹೀರಾಲಾಲ್‌ ಮಲ್ಕಾರಿ
  • ವೈದ್ಯಕೀಯ ಕ್ಷೇತ್ರ- ಡಾ.ವಿವೇಕ್‌ ಜವಳಿ
  • ಪತ್ರಿಕೋದ್ಯಮ- ರಂಜಾನ್‌ ದರ್ಗಾ
  • ಜಾನಪದ-ಮಾತಂಗವ್ವ
  • ಸುಗಮ ಸಂಗೀತ- ವೈ.ಕೆ.ಮುದ್ದುಕೃಷ್ಣ,
  • ಹರಿಕಥಾ ಕ್ಷೇತ್ರ-ಶೋಭಾ ನಾಯ್ಡು
  • ಚಲನಚಿತ್ರ- ಕೆ.ಎಸ್‌.ಎಲ್‌. ಸ್ವಾಮಿ , ಹರಿಣಿ.
(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X