ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ಜನಾದೇಶ ಪಡೆಯಲು ಕಾಂಗ್ರೆಸ್‌-ಜೆಡಿಎಸ್‌ ಪಕ್ಷದಲ್ಲಿ ಕಸರತ್ತು

By Staff
|
Google Oneindia Kannada News

ಹೊಸ ಜನಾದೇಶ ಪಡೆಯಲು ಕಾಂಗ್ರೆಸ್‌-ಜೆಡಿಎಸ್‌ ಪಕ್ಷದಲ್ಲಿ ಕಸರತ್ತು
ಪೂಜಾರಿಗೆ ಧಮ್‌ ಇದ್ದರೇ ನನ್ನ ವಿರುದ್ಧ ಸಿಬಿಐ ತನಿಖೆ ನಡೆಸಲಿ-ರೇವಣ್ಣ

ಬೆಂಗಳೂರು: ಬೀದರ್‌ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ನಂತರ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟದ ಸರಕಾರದಲ್ಲಿ ಅತೃಪ್ತಿ ಹಾಗೂ ಅಸಮಧಾನದ ಹೊಗೆ ಎದ್ದಿದೆ. ಸಂಪುಟ ವಿಸ್ತರಣೆ ದಿನೇ ದಿನೇ ಹೊಸ ರೂಪ ಪಡೆಯುತ್ತಿದ್ದು, ಸಮ್ಮಿಶ್ರ ಸರಕಾರದ ಭವಿಷ್ಯಕ್ಕೆ ಸವಾಲಾಗಿ ನಿಂತಿದೆ.

ಎರಡು ಪಕ್ಷಗಳ ಮುಖಂಡರು ಸಂಪುಟ ವಿಸ್ತರಣೆ ಬಗೆಗೆ ವ್ಯತಿರಿಕ್ತ ಹೇಳಿಕೆಗಳ ಮೂಲಕ ಗೊಂದಲ ಮೂಡಿಸಿದ್ದಾರೆ. ಸೋಮವಾರ ಬೆಳಿಗ್ಗೆ ಅಕ್ಟೋಬರ್‌ ಅಂತ್ಯದಲ್ಲಿ ಸಂಪುಟವಿಸ್ತರಣೆ ಖಚಿತ ಎನ್ನುತ್ತಿದ್ದ ಮುಖ್ಯಮಂತ್ರಿಗಳು, ಸಂಜೆ ಹೊತ್ತಿಗೆ ತಮ್ಮ ನಿಲುವು ಬದಲಿಸಿದ್ದಾರೆ. ಈಗ ದೀಪಾವಳಿ ವೇಳೆಗೆ ವಿಸ್ತರಣೆ ಎನ್ನುತ್ತಿದ್ದಾರೆ.

ಮಹತ್ವದ ಸಭೆ: ನ.4 ರಂದು ಜೆಡಿಎಸ್‌ ಶಾಸಕಾಂಗ ಸಭೆ ನಡೆಯುತ್ತಿದ್ದು, ರಾಜ್ಯ ರಾಜಕಾರಣದಲ್ಲಿ ಕುತೂಹಲದ ಕೇಂದ್ರ ಬಿಂದುವಾಗಿದೆ. ಸಂಪುಟ ವಿಸ್ತರಣೆಯೂ ಬೇಡ, ಹಂಗಿನ ಸರಕಾರವೂಬೇಡ. ಹೊಸ ಜನಾದೇಶ ಪಡೆಯೋಣ ಎಂಬ ಮಾತುಗಳು ಜೆಡಿಎಸ್‌ ಪಾಳಯದಿಂದ ಕೇಳಿ ಬರುತ್ತಿವೆ.

ಮಹಾರಾಷ್ಟ್ರ ಹಾಗೂ ಬೀದರ್‌ಚುನಾವಣೆಯ ಗೆಲುವು ಕಾಂಗ್ರೆಸ್‌ಗೆ ಚೈತನ್ಯ ತುಂಬಿದೆ. ಇದೇ ಅಲೆಯಲ್ಲಿ ಹೊಸ ಜನಾದೇಶ ಪಡೆಯುವ ಉತ್ಸಾಹ ಕಾಂಗ್ರೆಸ್‌ ಮುಖಂಡರಲ್ಲಿ ಕಾಣಿಸುತ್ತಿದೆ. ದೆಹಲಿಯಲ್ಲಿ ಕೆಲವರು ಹೈಕಮಾಂಡ್‌ ಮೇಲೆ ಒತ್ತಡ ಹಾಕಿದ್ದಾರೆ. ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ರನ್ನು ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ, ರಾಜ್ಯದಲ್ಲಿ ಹೊಸ ಜನಾದೇಶ ಪಡೆಯಬೇಕೆಂಬ ವಾದಗಳು ಕಾಂಗ್ರೆಸ್‌ನಲ್ಲಿವೆ.

ಈ ಎಲ್ಲಾ ಬೆಳವಣಿಗೆಗಳು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ನಿದ್ದೆ ಕೆಡಿಸಿದೆ. ಈ ಹಿನ್ನೆಲೆಯಲ್ಲಿ ನಡೆಯಲಿರುವ ಜೆಡಿಎಸ್‌ ಸಭೆ ಮಹತ್ವ ಹೊಂದಿದೆ. ಜನಾದೇಶ ಪಡೆಯಲು ಕಾಂಗ್ರೆಸ್‌-ಜೆಡಿಎಸ್‌ಗೆ ಮನಸ್ಸಿದ್ದರೂ, ಅಧಿಕಾರ ಬಿಡಲು ಕಷ್ಟವಾಗುತ್ತಿದೆ. ರಾಜಕೀಯದ ಹಾವು-ಏಣಿ ಆಟ ಮುಂದುವರೆದಿದೆ.

ಸವಾಲು: ಕೆಪಿಸಿಸಿ ಅಧ್ಯಕ್ಷ ಜನಾರ್ಧನ್‌ ಪೂಜಾರಿ ಬಗೆಗೆ ದೇವೇಗೌಡರ ಕುಮಾರ ಕಂಠೀರವ ಸಚಿವ ರೇವಣ್ಣ ಕೆಂಡಕಾರಿದ್ದಾರೆ. ದುಷ್ಟರನ್ನು ಕಂಡರೆ ದೂರವಿರು ಎಂದು ಸುಮ್ಮನಿದ್ದರೆ, ಪೂಜಾರಿ ನನ್ನನ್ನು ಕಳಂಕಿತ ಸಚಿವನೆಂದು ಕೆಣಕಿದ್ದಾರೆ. ಪೂಜಾರಿಗೆ ಧಮ್‌ ಇದ್ದರೇ ನನ್ನ ವಿರುದ್ಧ ಮಾಡಿರುವ ಆರೋಪಗಳ ಬಗ್ಗೆ ಸಿಬಿಐ ತನಿಖೆ ನಡೆಸಲಿ ಎಂದು ರೇವಣ್ಣ ಸವಾಲು ಹಾಕಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಧರ್ಮ-ಕಾರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X