ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂಬತ್ತು ವರ್ಷಗಳ ಹೋರಾಟದ ನಂತರ ಈ ರೈತನಿಗೆ ನ್ಯಾಯ ಸಿಕ್ಕಿತು !

By Staff
|
Google Oneindia Kannada News

ಒಂಬತ್ತು ವರ್ಷಗಳ ಹೋರಾಟದ ನಂತರ ಈ ರೈತನಿಗೆ ನ್ಯಾಯ ಸಿಕ್ಕಿತು !
ವಂಚನೆಯ ವಿರುದ್ಧ ಸೆಣಸಿದ ಸಾಹಸಿ ಮುಳಬಾಗಿಲು ವೆಂಕಟರವಣಪ್ಪ

ಬೆಂಗಳೂರು : ದೇಶದ ಬೆನ್ನೆಲುಬು ರೈತ. ಇಂತಹ ಬೆನ್ನೆಲುಬಿಗೆ ನ್ಯಾಯ ನೀಡಲು ಸತಾಯಿಸುತ್ತದೆ ನಮ್ಮ ಆಡಳಿತ ವ್ಯವಸ್ಥೆ. ಗೆದ್ದವನು ಸೋತ, ಸೋತವನು ಸತ್ತ ಈ ಮಾತು ಭಾರತೀಯ ಕಾನೂನು ವ್ಯವಸ್ಥೆಗೆ ಹಿಡಿದ ಕನ್ನಡಿ. ಆದರೆ ಸತತವಾಗಿ ಒಂಬತ್ತು ವರ್ಷಗಳ ಕಾಲ ಬಡಿದಾಡಿ, ಕೊನೆಗೂ ನ್ಯಾಯಸಿಕ್ಕಿತು ಎನ್ನುವ ಸಂಭ್ರಮವನ್ನು ದಕ್ಕಿಸಿಕೊಂಡಿದ್ದಾನೆ ಮುಳಬಾಗಲು ರೈತ ಎಂ.ಎನ್‌. ವೆಂಕಟರವಣಪ್ಪ.

ಮುಳಬಾಗಲು ತಾಲೂಕಿನ ಮಸ್ತೂರು ಗ್ರಾಮದ ಪ್ರಗತಿಪರ ರೈತ ವೆಂಕಟರವಣಪ್ಪ . ಆತ 12 ಚೀಲ ಆಲೂಗಡ್ಡೆ ಬೀಜಗಳನ್ನು ಬಂಗಾರಪೇಟೆಯ ಶಿವ ಟ್ರೇಡಿಂಗ್‌ ಕಂಪನಿಯಲ್ಲಿ 1995 ಸೆಪ್ಟೆಂಬರ್‌ನಲ್ಲಿ ಖರೀದಿಸಿದ್ದ. ವ್ಯವಸ್ಥಿತವಾಗಿಯೇ ಬೇಸಾಯವನ್ನು ಶುರುಮಾಡಿದ. ಆದರೆ ಭೂತಾಯಿ ಮಡಿಲಿಗೆ ಸುರಿದ ಬೀಜಗಳು ಸರಿಯಾಗಿ ಮೊಳೆಯಲೇ ಇಲ್ಲ.

ಬೇಸಾಯವನ್ನೇ ಬದುಕಾಗಿ ಸ್ವೀಕರಿಸಿರುವ ವೆಂಕಟರವಣಪ್ಪನಿಗೆ ತಪ್ಪು ಎಲ್ಲಾಗಿದೆ ಎಂದು ಅರಿವಾಯಿತು. ಬೆಳೆ ವೈಫಲ್ಯಕ್ಕೆ ಬೀಜಗಳ ಕಳಪೆ ಗುಣಮಟ್ಟವೇ ಕಾರಣ ಎಂಬುದನ್ನು ಆತ ಆರಿತ. ಪರಿಶೀಲನೆ ನಂತರ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಸಹಾ ವೆಂಕಟರವಣಪ್ಪನ ವಾದವನ್ನು ಸಮರ್ಥಿಸಿತ್ತು. ಬೇಸರದಿಂದ ಆತ ಬೀಜ ಖರೀದಿಸಿದ್ದ ಕಂಪನಿ ಮಾಲೀಕ ಶಿವಾನಂದಪ್ಪನನು ್ನ ತರಾಟೆಗೆ ತೆಗೆದುಕೊಂಡ. ಬೆಳೆ ನಷ್ಟಕ್ಕೆ ನೀನೇ ಹೊಣೆ. ಹೀಗಾಗಿ ಹಣ ಮರುಪಾವತಿಸಲು ಒತ್ತಾಯಿಸಿದ. ಈ ಮನವಿಗೆ ಮೂರು ಕಾಸಿನ ಬೆಲೆ ನೀಡದೇ ಕಂಪನಿ ಮಾಲೀಕ ಮನಬಂದಂತೆ ಬೈದು ಕಳುಹಿಸಿದ.

ವೆಂಕಟರವಣಪ್ಪನಿಗೆ ದಿಕ್ಕು ತೋಚಲಿಲ್ಲ. ತನಗಾದ ಅನ್ಯಾಯ ಹಾಗೂ ವಂಚನೆಗೆ ಮನದಲ್ಲೇ ಮರುಗಿದ. ಆದರೂ ಛಲ ಬೀಡದೇ, ತಾನು ಖರೀದಿ ಮಾಡಿದ್ದ ಬೀಜಗಳ ರಸೀದಿ ಮತ್ತಿತರ ದಾಖಲೆಗಳನ್ನು ಸಂಗ್ರಹಿಸಿದ. ನನಗೆ ನ್ಯಾಯನೀಡಿ ಎಂದು ಜಿಲ್ಲಾ ಗ್ರಾಹಕರ ವೇದಿಕೆಯ ಮೆಟ್ಟಿಲು ಹತ್ತಿದ. ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ. ರೈತನಾದ ವೆಂಕಟರಣಪ್ಪ ವಂಚನೆಗೆ ಗುರಿಯಾಗಿರುವುದು ಸತ್ಯ. ನಷ್ಟ ಪರಿಹಾರವಾಗಿ ಕಂಪನಿ 16,465 ರೂ. ನೀಡಬೇಕೆಂದು ತೀರ್ಪು ಹೊರಬಿದ್ದಿದೆ, ಒಂಬತ್ತು ವರ್ಷಗಳ ನಂತರ.

(ಇನ್ಫೋ ವಾರ್ತೆ)

Post your views

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X