ದಂತಚೋರ ವೀರಪ್ಪನ್ ಮಗಳು ಪ್ರಭಾಳಿಗೆ ಶಾಲೆಯಿಂದ ಗೇಟ್‌ಪಾಸ್
ದಂತಚೋರ ವೀರಪ್ಪನ್ ಮಗಳು ಪ್ರಭಾಳಿಗೆ ಶಾಲೆಯಿಂದ ಗೇಟ್‌ಪಾಸ್
ಅಪ್ಪ ಮಾಡಿದ ಮಹಾ ಪಾಪಕ್ಕೆ ಮಗಳಿಗೆ ಶಿಕ್ಷೆ...
ತಮಿಳುನಾಡಿನ ಕುದ್ದಲೂರುನಲ್ಲಿ ವ್ಯಾಸಂಗ ಮಾಡುತ್ತಿದ್ದ ವೀರಪ್ಪನ್ ಪುತ್ರಿಗೆ ಶಾಲಾ ಆಡಳಿತ ವರ್ಗಾವಣೆ ಪತ್ರ(ಟಿ.ಸಿ) ನೀಡಲು ನಿರ್ಧರಿಸಿದೆ. ಕುದ್ದಲೂರುನ ಸೇಂಟ್‌ಜೋಸೆಫ್ ಮೆಟ್ರಿಕ್ಯೂಲೇಷನ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ವೀರಪ್ಪನ್ ಪುತ್ರಿ ಪ್ರಭಾ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು.
ಹನ್ನೆರಡು ವರ್ಷದ ಪ್ರಭಾ ಕಳೆದ ಜುಲೈನಲ್ಲಿ ಶಾಲೆಗೆ ದಾಖಲಾಗಿದ್ದಳು. ಶಾಲೆಯ ಪ್ರಾಂಶುಪಾಲರನ್ನು ಹೊರತು ಪಡಿಸಿದರೆ ಬೇರೆ ಯಾರಿಗೂ ಪ್ರಭಾ ಹಿನ್ನೆಲೆ ತಿಳಿದಿರಲಿಲ್ಲ. ವೀರಪ್ಪನ್ ಹಿನ್ನೆಲೆ ತಿಳಿತ ತಕ್ಷಣವೇ ಟಿ.ಸಿ. ನೀಡಲು ಶಾಲೆಯ ಆಡಳಿತ ಮಂಡಳಿ ನಿರ್ಧರಿಸಿತ್ತು. ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಟಿ.ಸಿ. ನೀಡಿದರೆ ಚೆನ್ನಾಗಿರುವುದಿಲ್ಲವೆಂದು ವಕೀಲರೊಬ್ಬರು ನೀಡಿದ ಸಲಹೆ ಮೇರೆಗೆ ಈವರೆಗೆ ಟಿ.ಸಿ. ಪ್ರಕ್ರಿಯೆಯನ್ನು ಮೂಂದೂಡಲಾಗಿತ್ತು . ಆದರೆ ವೀರಪ್ಪನ್ ಸಾವಿನ ಸಂದರ್ಭದಲ್ಲಿ ಆತನ ಮಗಳಿಗೆ ಟಿ.ಸಿ. ನೀಡಲು ಶಾಲಾಡಳಿತ ನಿರ್ಧರಿಸಿದೆ.
(ಪಿಟಿಐ)
ಮುಖಪುಟ / ವೀರಪ್ಪನ್