ಪ್ರವೇಶ ತೆರಿಗೆಯ ಆರ್ಭಟಕ್ಕೆ ಈ ಬಾರಿ ಪಟಾಕಿಗಳ ಸದ್ದುಗದ್ದಲ ಕ್ಷೀಣ?
ಪ್ರವೇಶ ತೆರಿಗೆಯ ಆರ್ಭಟಕ್ಕೆ ಈ ಬಾರಿ ಪಟಾಕಿಗಳ ಸದ್ದುಗದ್ದಲ ಕ್ಷೀಣ?
ಪಟಾಕಿ ಪ್ರಿಯರಿಗೆ ಪೇಚಾಟ, ಪರಿಸರವಾದಿಗಳು ನಿರುಮ್ಮಳ
ಬೆಂಗಳೂರು : ಈ ವರ್ಷದ ದೀಪಾವಳಿಯಲ್ಲಿ ಪಟಾಕಿಯ ಸದ್ದು ತುಸು ಕ್ಷೀಣವಾಗಲಿದೆ. ಹೊರ ರಾಜ್ಯಗಳಿಂದ ತರುವ ಸರಕು ಸೇವೆಗಳ ಮೇಲೆ, ರಾಜ್ಯ ಸರಕಾರ ವಿಧಿಸಿರುವ ವಿಶೇಷ ಪ್ರವೇಶ ತೆರಿಗೆಯ ಬಿಸಿ ಜನರಿಗೆ ತಟ್ಟಲಿದೆ.
ಪಕ್ಕದ ತಮಿಳುನಾಡಿನ ಶಿವಕಾಶಿಯಿಂದ ಅಗ್ಗದ ದರದಲ್ಲಿ ಪಟಾಕಿ ತಂದು ಹೆಚ್ಚಿನ ಬೆಲೆಗೆ ಮಾರುವ ಆಸೆ ಹೊಂದಿದ್ದ ವ್ಯಾಪರಸ್ಥರು ಇದೀಗ ಬೆಚ್ಚಿಬಿದ್ದಿದ್ದಾರೆ. ಕಳೆದ ವರ್ಷಕ್ಕಿಂತ ಹೆಚ್ಚು ಪಟಾಕಿ ಸಿಡಿಸುವ ಕನಸು ಕಂಡಿದ್ದವರಿಗೆ ಈ ಪ್ರವೇಶ ತೆರಿಗೆ ಕಿರಿಕಿರಿ ತಂದಿದೆ. ತೆರಿಗೆ ಹೊರೆಯಿಂದ ಪಟಾಕಿಗಳ ಬೆಲೆ ಹೆಚ್ಚಾಗಲಿದೆ. ಇದರಿಂದಾಗಿ ರಾಜ್ಯದಲ್ಲಿ , ವಿಶೇಷವಾಗಿ ಬೆಂಗಳೂರಿನಲ್ಲಿ ಪಟಾಕಿಗಳ ಮಾರಾಟ ಕುಸಿಯುವ ನಿರೀಕ್ಷೆಯಿದೆ.
ತೆರಿಗೆ ಹೊರೆ : ವಿಶೇಷ ಪ್ರವೇಶ ತೆರಿಗೆ ಶೇ. 13.8 ನ್ನು ಗಡಿಯಲ್ಲಿಯೇ ಪಾವತಿಸಿ ರಾಜ್ಯಕ್ಕೆ ಪ್ರವೇಶಿಸಬೇಕಾಗಿದೆ. ಕಳೆದ ಫೆಬ್ರವರಿಯಲ್ಲಿ ರಸ್ತೆ ನಿಧಿಗಾಗಿ ಶೇ.10 ಸೆಸ್, ಮೂಲಭೂತ ಸೌಕರ್ಯಗಳ ಅಭಿವೃದ್ದಿಗಾಗಿ ಶೇ. 5ರ ಸೆಸ್‌ನ್ನು ಸರಕಾರ ವಿಧಿಸಿತ್ತು. ಜೊತೆಗೆ ಮಾರಾಟ ತೆರಿಗೆ ಮತ್ತು ವಾಹನಗಳ ಮೇಲೆ ತೆರಿಗೆಯನ್ನು ಹೆಚ್ಚಿಸಲಾಗಿತ್ತು.
ಅಕ್ಟೋಬರ್ 1 ರಿಂದ ಅನುಷ್ಠಾನಕ್ಕೆ ಬಂದಿರುವ ವಿಶೇಷ ಪ್ರವೇಶ ತೆರಿಗೆಯಿಂದ ರಾಜ್ಯದ ಆದಾಯ ಹೆಚ್ಚಾಗಲಿದೆ. ಇತ್ತ ಪಟಾಕಿ ಪ್ರಿಯರು ಶಾಪ ಹಾಕುತ್ತಿದ್ದರೆ, ಪರಿಸರ ಪ್ರೇಮಿಗಳು ಮಾತ್ರ ನಿರುಮ್ಮಳವಾಗಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು