ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೀದರ್‌ಲೋಕಸಭೆ ಸ್ಥಾನ ‘ಕೈ’ಗೆ, ಕೊನೆಗೂ ಜ್ವಲಿಸಿದ ‘ಸೂರ್ಯ’ವಂಶಿ

By Staff
|
Google Oneindia Kannada News

ಬೀದರ್‌ಲೋಕಸಭೆ ಸ್ಥಾನ ‘ಕೈ’ಗೆ, ಕೊನೆಗೂ ಜ್ವಲಿಸಿದ ‘ಸೂರ್ಯ’ವಂಶಿ
ಬಿಜೆಪಿಯ ಬಸವರಾಜ ಆರ್ಯ ಪರಾಜಿತ, ಜೆಡಿಎಸ್‌ಗೆ ಮೂರನೇ ಸ್ಥಾನ

ಬೀದರ್‌ : ಸಾಕಷ್ಟು ಕುತೂಹಲ ಕೆರಳಿಸಿದ್ದ ಬೀದರ್‌ ಲೋಕಸಭಾ ಕ್ಷೇತ್ರದ ಮರುಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ನರಸಿಂಗರಾವ್‌ ಸೂರ್ಯವಂಶಿ, 13 ಸಾವಿರ ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.

ಬಿಜೆಪಿಯ ಭದ್ರಕೋಟೆ ಎನ್ನಲಾಗಿದ್ದ ಬೀದರ್‌ ಲೋಕಸಭಾ ಕ್ಷೇತ್ರ ಹದಿಮೂರು ವರ್ಷಗಳ ನಂತರ ಕಾಂಗ್ರೆಸ್‌ ಪಾಲಾಗಿದೆ. ಶನಿವಾರ ನಡೆದ ಮತ ಎಣಿಕೆಯಲ್ಲಿ ತಮ್ಮ ಪ್ರತಿಸ್ಪರ್ಧಿಗಳಾದ ಬಿಜೆಪಿಯ ಬಸವರಾಜ ಆರ್ಯ ಹಾಗೂ ಜೆಡಿಎಸ್‌ನ ಹೊನ್ನನಾಯಕ್‌ರನ್ನು ಸೂರ್ಯವಂಶಿ ಸೋಲಿಸಿದ್ದಾರೆ. ಜೆಡಿಎಸ್‌ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.

1991, 1996,1998, 1999, 2004 ಹೀಗೆ ಬಿಜೆಪಿಯ ದಿ.ರಾಮಚಂದ್ರವೀರಪ್ಪ ವಿರುದ್ಧ ಸೋಲುತ್ತಲೇ ಬಂದಿದ್ದ, ಕಾಂಗ್ರೆಸ್‌ನ ನರಸಿಂಗರಾವ್‌ ಸೂರ್ಯವಂಶಿ ಈ ಚುನಾವಣೆಯಲ್ಲಿ ಜಯಶೀಲರಾಗಿದ್ದಾರೆ. ಚುನಾವಣೆಯ ಫಲಿತಾಂಶಗಳು ರಾಜ್ಯದ ಸಮ್ಮಿಶ್ರ ಸರಕಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ.

ಜನಮತ : ಸೋನಿಯಾ ನಾಯಕತ್ವವನ್ನು ಜನರು ಬೆಂಬಲಿಸಿರುವುದು ಬೀದರ್‌ ಚುನಾವಣೆಯಲ್ಲಿ ವ್ಯಕ್ತವಾಗಿದೆ. ಸಮ್ಮಿಶ್ರ ಸರಕಾರದ ಮಿತ್ರ ಪಕ್ಷ ಜೆಡಿಎಸ್‌ ಚುನಾವಣೆಯ ಕಣದಲ್ಲಿದ್ದದ್ದು ದುರದೃಷ್ಟಕರ. ಬೀದರ್‌ ಗೆಲುವಿನಿಂದ ಸರಕಾರದ ಮೇಲಿನ ಜವಬ್ದಾರಿ ಹೆಚ್ಚಿದೆ. ಈ ಭಾಗದ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಶ್ರಮಿಸುವುದಾಗಿ ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ ಭರವಸೆ ನೀಡಿದ್ದಾರೆ.

ಅಭಿನಂದನೆ : ಕಾಂಗ್ರೆಸ್‌ ಗೆಲುವಿಗೆ ಕಾರಣರಾದ ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ರನ್ನು, ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾಗಾಂಧಿ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ ದೂರವಾಣಿ ಮೂಲಕ ಅಭಿನಂದಿಸಿದ್ದಾರೆ.

(ಪಿಟಿಐ)

ಮುಖಪುಟ / ಧರ್ಮ-ಕಾರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X