ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೀದರ್‌ ಉಪ ಚುನಾವಣೆ : ಶೇ. 42 ಮತದಾನ, ಅ.16 ಮತ ಎಣಿಕೆ

By Staff
|
Google Oneindia Kannada News

ಬೀದರ್‌ ಉಪ ಚುನಾವಣೆ : ಶೇ. 42 ಮತದಾನ, ಅ.16 ಮತ ಎಣಿಕೆ
ಚಿಟಪಟ ಮಳೆಯ ನಡುವೆ ನೀರಸ-ಶಾಂತಿಯುತ ಮತದಾನ

ಬೀದರ್‌ : ಪ್ರತಿಷ್ಠಿತ ಬೀದರ್‌ ಲೋಕಸಭಾ ಕ್ಷೇತ್ರದ ಮರು ಚುನಾವಣೆ, ಬುಧವಾರ(ಅಕ್ಟೋಬರ್‌.13)ಯಾವುದೇ ಅಹಿತಕರ ಘಟನೆಗಳಿಲ್ಲದೇ ಶಾಂತಿಯುತವಾಗಿ ನಡೆದಿದೆ. ವಿದ್ಯುನ್ಮಾನ ಮತಯಂತ್ರಗಳಲ್ಲಿ ಮತದಾರರು ಮತಚಲಾಯಿಸಿದರು. ಮಳೆಯ ನಡುವೆ ಶಂ.42ರಷ್ಟು ಮತದಾನ ಬೀದರ್‌ ಕ್ಷೇತ್ರದಲ್ಲಿ ನಡೆದಿದೆ.

13.74 ಮತದಾರರಿರುವ ಈ ಕ್ಷೇತ್ರದಲ್ಲಿ ಒಂಬತ್ತು ಅಭ್ಯರ್ಥಿಗಳು ಕಣದಲ್ಲಿದ್ದು, ಅವರ ಸೋಲುಗೆಲುವಿನ ಭವಿಷ್ಯವನ್ನು ಮತದಾರ ಪ್ರಭು ಮತಯಂತ್ರದಲ್ಲಿ ದಾಖಲಿಸಿದ್ದಾನೆ. ಬಿಜೆಪಿಯ ರಾಮಚಂದ್ರ ವೀರಪ್ಪನವರ ನಿಧನದಿಂದ ಬೀದರ್‌ ಲೋಕಸಭಾ ಕ್ಷೇತ್ರದಲ್ಲಿ ಮರುಚುನಾವಣೆ ನಡೆದಿದೆ. ಐದು ಸಲ ಸಂಸದರಾಗಿದ್ದ ವೀರಪ್ಪ, ಬೀದರ್‌ ಕ್ಷೇತ್ರವನ್ನು ಬಿಜೆಪಿಯ ಭದ್ರಕೋಟೆಯಾಗಿ ರೂಪಿಸಿದ್ದರು.

ವೀರಪ್ಪನವರ ಪುತ್ರ ಬಸವರಾಜ್‌ ಆರ್ಯ ಬಿಜೆಪಿಯಿಂದ ಸ್ಪರ್ಧಿಸಿದ್ದು, ತಮ್ಮ ತಂದೆಯ ವರ್ಚಸ್ಸನ್ನು ಹಾಗೂ ಅನುಕಂಪದ ಅಲೆಯ ಪ್ರಯೋಜನ ಪಡೆಯಲು ಕಸರತ್ತು ನಡೆಸಿದ್ದರು. ಜೆಡಿಎಸ್‌ನ ಬಾಬು ಹೊನ್ನಾ ನಾಯಕ್‌, ಕಾಂಗ್ರೆಸ್‌ನ ನರಸಿಂಗರಾವ್‌ ಸೂರ್ಯವಂಶಿ ತೀವ್ರ ಪೈಪೋಟಿ ನೀಡಿದ್ದಾರೆ.

ಕ್ಷೇತ್ರದಲ್ಲಿ ಲಂಬಾಣಿ ಜನಾಂಗ ಹೆಚ್ಚಿನ ಸಂಖ್ಯೆಯಲ್ಲಿದ್ದು, ಫಲಿತಾಂಶದಲ್ಲಿ ನಿರ್ಣಾಯಕ ಪಾತ್ರವಹಿಸಲಿದೆ. ರಾಜ್ಯಾಡಳಿತ ಪಾಲುದಾರ ಪಕ್ಷಗಳಾದ ಜೆಡಿಎಸ್‌-ಕಾಂಗ್ರೆಸ್‌ ತಮ್ಮ ಮೈತ್ರಿಯನ್ನು ಇಲ್ಲಿ ಮುಂದುವರೆಸಿಲ್ಲ. ಬಿಜೆಪಿಯಿಂದ ಬೀದರ್‌ಲೋಕಸಭಾ ಕ್ಷೇತ್ರವನ್ನು ಕಸಿಯಲು ಈ ಎರಡೂ ಪಕ್ಷಗಳು ಪ್ರಯತ್ನಿಸಿವೆ. ಪ್ರಚಾರದ ಬಿರುಸು ತೀವ್ರವಾಗಿತ್ತು . ರಾಜ್ಯಮಟ್ಟದ ನಾಯಕರ ಜೊತೆಗೆ ರಾಷ್ಟ್ರೀಯ ನಾಯಕರು ಕ್ಷೇತ್ರದಲ್ಲಿ ಮತದಾರರ ಮನವೊಲಿಸಲು ಅಗಮಿಸಿದ್ದರು. ಮತದಾರನ ಗುಟ್ಟನ್ನು ಅರಿಯಲು ಅಕ್ಟೋಬರ್‌ 16 ರವರೆಗೆ ಕಾಯಲೇ ಬೇಕಾಗಿದೆ.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X