ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಡುಪಿ-ಕನಕಪೀಠ ಹಾಗೂ ಗೋಪುರ ಸ್ಥಾಪನೆಗೆ ಅಷ್ಠಮಠಗಳ ಸಮ್ಮತಿ

By Staff
|
Google Oneindia Kannada News

ಉಡುಪಿ-ಕನಕಪೀಠ ಹಾಗೂ ಗೋಪುರ ಸ್ಥಾಪನೆಗೆ ಅಷ್ಠಮಠಗಳ ಸಮ್ಮತಿ
ಕನಕದಾಸರಿಗೆ ಬ್ರಾಹ್ಮಣ ಅರ್ಚಕರಿಂದಲೇ ಪೂಜೆ...ಬೆಳ್ಳಿಕವಚ...ಇತ್ಯಾದಿ

ಉಡುಪಿ : ಕನಕ ಅಧ್ಯಯನ ಪೀಠ(ಕನಕ ಮಠ)ವನ್ನು ಉಡುಪಿಯಲ್ಲಿ, ಅಷ್ಠಮಠಗಳ ಸಮ್ಮತಿಯಾಂದಿಗೆ ಸ್ಥಾಪಿಸುತ್ತಿರುವುದಾಗಿ ಶೀರೂರು ಮಠದ ಶ್ರೀಲಕ್ಷ್ಮೀವರ ತೀರ್ಥಸ್ವಾಮೀಜಿ ತಿಳಿಸಿದ್ದಾರೆ.

ಉಡುಪಿ-ಮಣಿಪಾಲ್‌ ರಸ್ತೆಯ ಕುಂಡಲೆ ಕಾಡಿನಲ್ಲಿ , ಸುಮಾರು 25 ಲಕ್ಷರೂ ವೆಚ್ಚದಲ್ಲಿ ಪೀಠ ಸ್ಥಾಪಿಸಲಾಗುವುದು. ಕುರುಬ ಸಮುದಾಯದಿಂದ ಬಂದ ಬೇಡಿಕೆಗೆ ಸ್ಪಂದಿಸುತ್ತಿರುವುದಾಗಿ ಶೀರೂರು ಶ್ರೀಗಳು ಸುದ್ದಿಗಾರರಿಗೆ ತಿಳಿಸಿದರು.

ಕನಕದಾಸರಿಗೆ ಉಡುಪಿಯಲ್ಲಿ ಹಿಂದಿನಿಂದಲೂ ಪ್ರಾತಿನಿಧ್ಯ ನೀಡುತ್ತಲೇ ಬಂದಿದ್ದೇವೆ. ಮೊದಲು ಕನಕನ ಕಿಂಡಿ ಮಾತ್ರ ಇತ್ತು. ನಂತರ ಅಲ್ಲಿ ಕನಕನ ವಿಗ್ರಹವನ್ನು ಪೇಜಾವರ ಶ್ರೀಗಳು ಸ್ಥಾಪಿಸಿದ್ದಾರೆ. ಸುಮಾರು ಒಂದೂವರೆ ಲಕ್ಷ ಮೌಲ್ಯದ ಬೆಳ್ಳಿ ಕವಚವನ್ನು ಕನಕ ವಿಗ್ರಹಕ್ಕೆ ಮಾಡಿಸಲಾಗುತ್ತಿದೆ. ಬ್ರಾಹ್ಮಣ ಅರ್ಚಕರೇ ಇಲ್ಲಿನ ಕನಕ ವಿಗ್ರಹಕ್ಕೆ ಪೂಜೆ ಸಲ್ಲಿಸುತ್ತಿದ್ದಾರೆಂದು ಸ್ವಾಮೀಜಿ ತಿಳಿಸಿದ್ದಾರೆ.

ಕನಕ ಗೋಪುರ: ಉಡುಪಿಯ ಪ್ರಸಿದ್ದ ಕೃಷ್ಣ ದೇವಾಲಯದ ಮುಂಭಾಗದಲ್ಲಿ ಕನಕ ಗೋಪುರ ನಿರ್ಮಾಣಕ್ಕೆ ಸಹಾ ಅಷ್ಠಮಠಗಳು ಸಮ್ಮತಿಸಿರುವ ಕಾರಣ, ಈ ಹಿನ್ನೆಲೆಯ ವಿವಾದ ತಣ್ಣಗಾಗಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X