ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಂಠೀರವ ಕ್ರೀಡಾಂಗಣದಲ್ಲಿ ಅಕ್ಟೋಬರ್‌16ರಿಂದ ಚಿನ್ನಾಭರಣ ಮೇಳ

By Staff
|
Google Oneindia Kannada News

ಕಂಠೀರವ ಕ್ರೀಡಾಂಗಣದಲ್ಲಿ ಅಕ್ಟೋಬರ್‌16ರಿಂದ ಚಿನ್ನಾಭರಣ ಮೇಳ
ಚಿನ್ನದ ಹಬ್ಬದಲ್ಲಿ ‘ಬರ್ಮೀಸ್‌ ರೂಬಿ’ ಮತ್ತು 4.5 ಕೋಟಿ ಬೆಲೆಯ ವಜ್ರದ ನೆಕ್ಲೇಸ್‌

ಬೆಂಗಳೂರು : ವಿವಿಧ ಆಧುನಿಕ ವಿನ್ಯಾಸದ ಚಿನ್ನಾಭರಣಗಳ ಪ್ರದರ್ಶನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪ್ರದರ್ಶನದಲ್ಲಿ ಭಾಗವಹಿಸುವ ವಿನೂತನ ಆಭರಣಗಳ ಬೆಲೆಗಳು ಜನಸಾಮಾನ್ಯರ ಕೈಗೂ ಎಟುಕುವಂತಿದೆ. ಇದು ‘ಜ್ಯುವೆಲ್ಸ್‌ ಆಫ್‌ ಇಂಡಿಯಾ’ದ 6ನೇ ಪ್ರದರ್ಶನವಾಗಿದ್ದು, ಅಕ್ಟೋಬರ್‌ 16ರಿಂದ 19ರವರೆಗೆ ನಡೆಯಲಿದೆ.

ಈ ಪ್ರದರ್ಶನದಲ್ಲಿ ವಿವಿಧ ರಾಜ್ಯಗಳಿಂದ 110ಕ್ಕೂ ಹೆಚ್ಚು ಚಿನ್ನಾಭರಣದ ಉದ್ಯಮಿಗಳು ಭಾಗವಹಿಸಲಿದ್ದು, ಸಾಂಪ್ರದಾಯಿಕ ಮತ್ತು ನೂತನ ರೀತಿಯ ಆಭರಣಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗುವುದು. ವಿಶ್ವದಲ್ಲಿ ಚಿನ್ನಾಭರಣಕ್ಕೆ ಹೆಸರುವಾಸಿಯಾದ ಬರ್ಮಾ ದೇಶದ ‘ಬರ್ಮೀಸ್‌ ರೂಬಿ’ಯನ್ನು ಮತ್ತು 4.5 ಕೋಟಿ ಬೆಲೆಯ ‘ತಮರಿಂಡ್‌’ ವಜ್ರದ ನೆಕ್ಲೇಸ್‌ ಪ್ರದರ್ಶನದಲ್ಲಿ ಪ್ರಮುಖ ಆಕರ್ಷಣಿಯವಾಗಿದೆ.

ಕಳೆದ ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿ ಈ ಚಿನ್ನಾಭರಣ ಪ್ರದರ್ಶನ ನಡೆಸಲಾಗುತ್ತಿದೆ. 80 ಚಿನ್ನಾಭರಣದ ವ್ಯಾಪಾರಿಗಳು ಮತ್ತು ವಿವಿಧ ಜಿಲ್ಲೆಯಿಂದ 60 ಸಾವಿರ ಗ್ರಾಹಕರು ಕಳೆದ ವರ್ಷ ಮೇಳದಲ್ಲಿ ಭಾಗವಹಿಸಿದ್ದರು. ಈ ವರ್ಷ 70 ಸಾವಿರಕ್ಕೂ ಹೆಚ್ಚು ಜನ ಚಿನ್ನದಹಬ್ಬದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಎಕ್ಸ್‌ಪೋ ವರ್ಲ್ಡ್‌ ಸಂಚಾಲಕ ಸಂದೀಪ್‌ ಬೇಕಲ್‌, ಜ್ಯುವೆಲ್ಲರಿ ಅಸೋಸಿಯೇಷನ್‌ ಆಫ್‌ ಬೆಂಗಳೂರು ಕಾರ್ಯದರ್ಶಿ ಪಿ.ವಿ. ಮಹೇಶ್‌ ಹಾಗೂ ಓರ್ರಾ ಡೈಮೆಂಡ್ಸ್‌ನ ವಿಶಾಲ್‌ ಶಾ ತಿಳಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X