ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿತೃಗಳಿಗೆ ಶ್ರಾದ್ಧ ಕೊಟ್ಟಿದ್ದಾಯಿತಾ? ಇಲ್ಲಿದೆ ನೋಡಿ ಪಿತೃಪಕ್ಷದ ಮಹತ್ವ

By Staff
|
Google Oneindia Kannada News

ಪಿತೃಗಳಿಗೆ ಶ್ರಾದ್ಧ ಕೊಟ್ಟಿದ್ದಾಯಿತಾ? ಇಲ್ಲಿದೆ ನೋಡಿ ಪಿತೃಪಕ್ಷದ ಮಹತ್ವ
ಒಂದು ದಿನ ಶ್ರಾದ್ಧಮಾಡಿದರೆ ಒಂದು ವರ್ಷದ ವರೆಗೆ ಪಿತೃಗಳು ತೃಪ್ತರು

ಯಮ ಲಹರಿಗಳು ಶಿವ ಮತ್ತು ಮೀನಾಕ್ಷಿ ಲಹರಿಗಳ ಸಹಾಯದಿಂದ ಯಮ ಲೋಕದಲ್ಲಿಯೂ ಕಾರ್ಯನಿರತವಾಗಿರುತ್ತವೆ. ಪಿತೃಗಳು ಯಮಲೋಕದಲ್ಲಿ ಇರುವುದರಿಂದ ಈ ಲಹರಿಗಳ ಮಾಧ್ಯಮದಿಂದ ಅಲ್ಲಿಯವರೆಗೂ ತಲುಪಬಹುದು.

ಭಾದ್ರಪದ ಮಾಸದ ಕೃಷ್ಣ ಪಕ್ಷವನ್ನು ಮಹಾಲಯ ಪಕ್ಷ ಅಥವಾ ಪಿತೃಪಕ್ಷ ಎನ್ನುತ್ತಾರೆ. ಈ ಪಕ್ಷ ಪಿತೃ ಕಾರ್ಯಕ್ಕೆ ಅತ್ಯಂತ ಯೋಗ್ಯವಾಗಿದೆ. ಏಕೆಂದರೆ ಈ ಕಾಲದಲ್ಲಿ ಪಿತೃಗಳು ಯಮಲೋಕದಿಂದ ತಮ್ಮ ಕೌಟುಂಬಿಕ ಮನೆಗಳಿಗೆ ವಾಸ ಮಾಡಲು ಬರುತ್ತಾರೆಂಬ ಭಾವನೆಯಿದೆ. ಈ ಸಮಯದಲ್ಲಿ ಒಂದು ದಿನ ಶ್ರಾದ್ಧಮಾಡಿದರೆ ಒಂದು ವರ್ಷದ ವರೆಗೆ ಪಿತೃಗಳು ತೃಪ್ತರಾಗಿರುತ್ತಾರೆ.

ಭಾದ್ರಪದ ಪೂರ್ಣಿಮೆಯಿಂದ ಅಮಾವಾಸ್ಯೆಯವರೆಗೆ ಪ್ರತಿದಿನ ಮಹಾಲಯ ಶ್ರಾದ್ಧವನ್ನು ಮಾಡಬೇಕು ಎಂಬ ಶಾಸ್ತ್ರವಿದೆ. ಅದು ಆಗದಿದ್ದರೆ ಯಾವ ತಿಥಿಯಂದು ತನ್ನ ತಂದೆಯು ಮೃತರಾಗಿದ್ದಾರೋ ಆ ದಿನ ಎಲ್ಲ ಪಿತೃಗಳನ್ನು ಆಮಂತ್ರಿಸಿ ಮಹಾಲಯ ಶ್ರಾದ್ಧವನ್ನುಮಾಡುವ ಪರಿಪಾಠವಿದೆ.

ಯೋಗ್ಯತಿಥಿಗೆ ಮಹಾಲಯ ಶ್ರಾದ್ಧ ಮಾಡಲಾಗದಿದ್ದರೆ ಮುಂದೆ ಯಾದವ್‌ ವೃಶ್ಚಿಕ ದರ್ಶನಮ್‌ ಅಂದರೆ ಸೂರ್ಯನು ವೃಶ್ಚಿಕರಾಶಿಗೆ ಹೋಗುವವರೆಗೆ ಯಾವುದಾದರೂ ತಿಥಿಯಂದು ಅದನ್ನು ಮಾಡಬಹುದು. ಪಿತೃ ಪಕ್ಷದಲ್ಲಿರುವ ವಿವಿಧ ತಿಥಿಗಳಂದು ವಿಶಿಷ್ಟ ವ್ಯಕ್ತಿಗಳಿಗಾಗಿ ಮಾಡಬೇಕಾಗಿರುವ ಶ್ರಾದ್ಧಗಳು ಈ ಕೆಳಗಿನಂತಿವೆ.

ತಿಥಿ ಶ್ರಾದ್ದದ ಹೆಸರು ಯಾರಿಗಾಗಿ ? ವಿಧಿವಿಶೇಷ
ಚತುರ್ಥಿ ಅಥವಾ ಪಂಚಮಿ (ಭರಣಿ ನಕ್ಷತ್ರ ಇರುವಾಗ) ಭರಣಿ ಅದೇ ವರ್ಷದಲ್ಲಿ ಮೃತ ಪಟ್ಟಿರುವ ವ್ಯಕ್ತಿ -
ನವಮಿ ಅವಿಧವಾ ನವಮಿ ಮುತ್ತೆೈದೆಯಾಗಿ ಮರಣ ಹೊಂದಿದ ಸ್ತ್ರೀ ಶ್ರಾದ್ಧ- ಮುತ್ತೆೈದೆಗೆ ಭೋಜನವನ್ನೂ ಕೊಡುತ್ತಾರೆ
ತ್ರಯೋದಶಿ ಬಾಳಾ ಭೋಳಾನಿ ತೇರಸ್‌ (ಸೌರಾಷ್ಟ್ರ ದಲ್ಲಿರುನ ಹೆಸರು) ಚಿಕ್ಕ ಮಕ್ಕಳು ಕಾಕ ಬಲಿ
ಚತುರ್ದಶಿ ಘಾತ ಚತುರ್ದಶಿ ಅಪಘಾತದಲ್ಲಿ ಮರಣ ಹೊಂದಿದವರು -

(ಸ್ನೇಹಸೇತು : ವಿಜಯ ಕರ್ನಾಟಕ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X