ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೀದರ್‌ ಚುನಾವಣೆ ನಂತರ ಐಟಿದೊರೆಗಳೊಂದಿಗೆ ಧರ್ಮಸಿಂಗ್‌ ಸಭೆ

By Staff
|
Google Oneindia Kannada News

ಬೀದರ್‌ ಚುನಾವಣೆ ನಂತರ ಐಟಿದೊರೆಗಳೊಂದಿಗೆ ಧರ್ಮಸಿಂಗ್‌ ಸಭೆ
ಆರು ತಿಂಗಳಲ್ಲಿ 400 ಕೋಟಿ ವೆಚ್ಚದಲ್ಲಿ ಹೆದ್ದಾರಿ,14 ಪ್ಲೈಓವರ್‌ಗಳ ನಿರ್ಮಾಣ

ಬೆಂಗಳೂರು : ಶೀಘ್ರದಲ್ಲಿಯೇ ಮಾಹಿತಿ ತಂತ್ರಜ್ಞಾನದ ಮುಖಂಡರೊಂದಿಗೆ ಚರ್ಚೆ ನಡೆಸಿ, ಅಗತ್ಯ ಮೂಲಭೂತ ಸೌಕರ್ಯಗಳ ಕಲ್ಪಿಸುವತ್ತ ಸರಕಾರ ಗಮನ ಹರಿಸಲಿದೆ ಎಂದು ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ ತಿಳಿಸಿದ್ದಾರೆ.

ನಗರದಲ್ಲಿ ರಾಯ್ಟರ್ಸ್‌ ಉದ್ಯಮದ ಸೌಕರ್ಯಗಳನ್ನು ಗುರುವಾರ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ಕೆಲವು ತಿಂಗಳ ಹಿಂದೆ ನಾನು ನೀಡಿದ್ದ ಭರವಸೆಯಂತೆಯೇ ಮಾಹಿತಿ ತಂತ್ರಜ್ಞಾನದ ಬೆಳವಣಿಗೆಗೆ ಪೂರಕವಾದ ವಾತಾವರಣ ಕಲ್ಪಿಸಲು ಸರಕಾರ ಬದ್ಧವಾಗಿದೆ. ಬೀದರ್‌ ಚುನಾವಣೆ ಮುಗಿದ ನಂತರ ಐಟಿ ಉದ್ಯಮದ ಗಣ್ಯರೊಂದಿಗೆ ಈ ಬಗ್ಗೆ ಮಾತುಕತೆ ನಡೆಸುವುದಾಗಿ ಹೇಳಿದರು.

ಬಿಎಟಿಎಫ್‌ ಸಹಭಾಗಿತ್ವದಲ್ಲಿ ಸರಕಾರ ರಾಜಧಾನಿ ನಗರದಲ್ಲಿ ಐಟಿ ಮತ್ತು ಬಿಟಿ ಉದ್ಯಮದ ಸಮಸ್ಯೆಗಳ ನಿವಾರಣೆಗೆ ಗಮನ ಹರಿಸಲಾಗಿದೆ. ಕೇಂದ್ರ ಸರಕಾರ ಸುಮಾರು 400 ಕೋಟಿ ವೆಚ್ಚದ ಎಲೆಕ್ಟ್ರಾನಿಕ್‌ ಸಿಟಿಗೆ ಹೆದ್ದಾರಿ ಹಾಗೂ ವಿವಿಧ ಹದಿನಾಲ್ಕು ಫ್ಲೈಓವರ್‌ಗಳ ಕಾಮಗಾರಿಗೆ ಅನುಮೋದನೆ ನೀಡಿದೆ.

ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ ಹಾಗೂ ಬೆಂಗಳೂರು ನಗರ ಪಾಲಿಕೆ ನಿರ್ವಹಣೆಯ ಈ ಯೋಜನೆಗಳು ಮುಂದಿನ ಆರು ತಿಂಗಳಲ್ಲಿ ಪೂರ್ಣಗೊಳ್ಳಲಿವೆ. ಸುತ್ತಲಿನ 8,600 ಎಕರೆ ಪ್ರದೇಶದಲ್ಲಿ ಐಟಿ ಕಾರಿಡಾರ್‌ನ ಕಟ್ಟಡಗಳು ಮಿಣುಗಲಿವೆ. ಐಟಿ ಉದ್ಯಮ ಗಳು ‘ಬೆಂಗಳೂರು ಬ್ರಾಂಡ್‌’ ನ್ನು ನಿರ್ಮಾಣ ಮಾಡಲಿವೆ. ಮುಂದೆ ಮಾಹಿತಿಯ ರಾಜಧಾನಿಯಾಗಿ ಬೆಂಗಳೂರು ಗುರ್ತಿಸಲ್ಪಡ ಬೇಕು ಎಂದು ಮುಖ್ಯಮಂತ್ರಿ ಧರ್ಮಸಿಂಗ್‌ ಅಭಿಪ್ರಾಯಪಟ್ಟರು.

(ಪಿಟಿಐ)

ಮುಖಪುಟ / ಧರ್ಮ-ಕಾರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X