ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂದೂಗಳ ಜನಸಂಖ್ಯೆ ಹೆಚ್ಚಳಕ್ಕೆ ಅಷ್ಟಪುತ್ರಸೌಭಾಗ್ಯವತಿ ಆಂದೋಲನ

By Staff
|
Google Oneindia Kannada News

ಹಿಂದೂಗಳ ಜನಸಂಖ್ಯೆ ಹೆಚ್ಚಳಕ್ಕೆ ಅಷ್ಟಪುತ್ರಸೌಭಾಗ್ಯವತಿ ಆಂದೋಲನ
ಭಾರತದಲ್ಲಿ 20:36 ಅನುಪಾತದಲ್ಲಿ ಹಿಂದೂ-ಮುಸ್ಲಿಂ ಜನಸಂಖ್ಯೆ ಬೆಳವಣಿಗೆ

ಹುಬ್ಬಳ್ಳಿ: ಮಹಾರಾಷ್ಟ್ರ, ಚತ್ತೀಸ್‌ಗಢ, ಜಾರ್ಖಂಡ್‌ ರಾಜ್ಯಗಳು ಸೇರಿದಂತೆ ಭಾರತದಲ್ಲಿ ಮುಸ್ಲಿಂರ ಸಂಖ್ಯೆ ನಾಗಾ ಲೋಟದಲ್ಲಿ ಹೆಚ್ಚುತ್ತಿದೆ. ಕುಟುಂಬ ಯೋಜನೆಗೆ ಮುಸ್ಲಿಂ ಧರ್ಮಗುರುಗಳು ಒಪ್ಪದಿರುವುದೇ ಇದಕ್ಕೆ ಕಾರಣ. ಪರಿ ಸ್ಥಿತಿ ಹೀಗೆಯೇ ಮುಂದುವರೆದರೆ, ಹಿಂದೂ ಧರ್ಮದ ಸಂಪ್ರದಾಯದಂತೆ ಅಷ್ಟಪುತ್ರ ಸೌಭಾಗ್ಯವತಿ ಆಂದೋಲನ ವನ್ನು ಅರಂಭಿಸುವುದಾಗಿ ವಿಶ್ವ ಹಿಂದೂ ಪರಿಷತ್ತಿನ ಅಂತಾರಾಷ್ಟ್ರೀಯ ಕಾರ್ಯದರ್ಶಿ ಡಾ.ಪ್ರವೀಣ್‌ ತೊಗಾಡಿಯಾ ಹೇಳಿದರು.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ತೊಗಾಡಿಯಾ, 20:36 ರ ಅನುಪಾತದಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾ ಯದ ಜನಸಂಖ್ಯೆ ಬೆಳೆಯುತ್ತಿದೆ. ಈ ಬೆಳವಣಿಗೆಗೆ ಕಡಿವಾಣ ಹಾಕದಿದ್ದರೆ, ಭಾರತದಲ್ಲಿ ಹಿಂದೂಗಳೇ ಅಲ್ಪಸಂಖ್ಯಾತರಾಗುವ ಸಾಧ್ಯತೆಗಳಿವೆ ಎಂದರು.

ಮತಬ್ಯಾಂಕ್‌ ಸೃಷ್ಟಿಗಾಗಿ ಮುಸ್ಲಿಂರಿಗೆ ವಿಶೇಷ ಮೀಸಲಾತಿ ಕಲ್ಪಿಸಲು ಕೇಂದ್ರದ ಯುಪಿಎ ಸರಕಾರ ಮುಂದಾಗಿದೆ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದ ಎಲ್ಲರಿಗೂ ಬೇಕಿದ್ದರೆ ಮೀಸಲಾತಿ ಕಲ್ಪಿಸಲಿ. ಕೇವಲ ಮುಸ್ಲಿಂರನ್ನು ಓಲೈಸುವ ನೀತಿ ಸಲ್ಲದು. ಇದನ್ನು ಖಂಡಿಸಿ ಗ್ರಾಮಮಟ್ಟದಿಂದ 30 ಲಕ್ಷ ಯುವಕರನ್ನು ಸಂಘಟಿಸಿ, ಹೋರಾಟ ರೂಪಿಸುವುದಾಗಿ ತೊಗಾಡಿಯಾ ತಿಳಿಸಿದರು.

(ಇನ್ಫೋ ವಾರ್ತೆ)

Post your Views

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X