ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾ,ಚೀನಾ ಮಾರುಕಟ್ಟೆಯತ್ತ ಜಂಗಲ್‌ಲಾಡ್ಜಸ್‌ ಮತ್ತು ರೆಸಾರ್ಟ್‌ ಲಿ.

By Staff
|
Google Oneindia Kannada News

ರಷ್ಯಾ,ಚೀನಾ ಮಾರುಕಟ್ಟೆಯತ್ತ ಜಂಗಲ್‌ಲಾಡ್ಜಸ್‌ ಮತ್ತು ರೆಸಾರ್ಟ್‌ ಲಿ.
ಮನಮೋಹನ್‌ ಸರ್ಕಾರದ ನೀತಿಗಳು ಆರ್ಥಿಕ ಬೆಳವಣಿಗೆಗೆ ಮಾರಕ

ಬೆಂಗಳೂರು : ಜೈವಿಕ ಮತ್ತು ಸಾಹಸಿ ಪ್ರವಾಸೋದ್ಯಮದ ಬೆಳವಣಿಗೆ ಏರುಗತಿಯಲ್ಲಿರುವ ಹಿನ್ನೆಲೆಯಲ್ಲಿ ರಷ್ಯಾ ಹಾಗೂ ಚೀನಾಗಳೊಂದಿಗೆ ವಾಣಿಜ್ಯ ಒಪ್ಪಂದಗಳಿಗೆ ಜಂಗಲ್‌ ಲಾಡ್ಜಸ್‌ ಮತ್ತು ರೆಸಾರ್ಟ್‌ ಲಿಮಿಟೆಡ್‌ ಮುಂದಾಗಿದೆ.

ಕರ್ನಾಟಕದ ಜೈವಿಕ ಪ್ರವಾಸೋದ್ಯಮದ ಒಂದು ಭಾಗವಾಗಿರುವ ಜಂಗಲ್‌ ಲಾಡ್ಜಸ್‌ ಮತ್ತು ರೆಸಾರ್ಟ್‌ ಲಿಮಿಟೆಡ್‌ (ಜೆಎಲ್‌ಆರ್‌) ಜೈವಿಕ ಮತ್ತು ಸಾಹಸಿ ಪ್ರವಾಸೋದ್ಯಮದ ಜನಪ್ರಿಯತೆಯ ಲಾಭವನ್ನು ಬಳಸಿಕೊಳ್ಳಲು ಎಲ್ಲ ಪ್ರಯತ್ನಗಳನ್ನು ಕೈಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಚೀನಾ ಹಾಗೂ ರಷ್ಯಾಗಳೊಂದಿಗೆ ವಾಣಿಜ್ಯ ಒಪ್ಪಂದಗಳನ್ನು ಮಾಡಿಕೊಳ್ಳಲಿದೆ. ಈ ಪ್ರದೇಶಗಳಲ್ಲಿ ಪ್ರವಾಸೋದ್ಯಮದ ಸಾಧ್ಯತೆಗಳನ್ನು ಹೆಚ್ಚಿಸಿಕೊಳ್ಳುವ ನಿರೀಕ್ಷೆ ನಮಗಿದೆ ಎಂದು ಜೆಎಲ್‌ಆರ್‌ನ ಕಾರ್ಯಕಾರಿ ನಿರ್ವಾಹಕ ವಿನಯ್‌ ಲೂಥ್ರಾ ತಿಳಿಸಿದ್ದಾರೆ.

ಇತ್ತೀಚೆಗೆ ಬ್ಯಾಂಕಾಕ್‌ನಲ್ಲಿ ನಡೆದ ಫೆಸಿಪಿಕ್‌ ಅಷ್ಯಾ ಟ್ರಾವೆಲ್‌ ಸಂಸ್ಥೆಯ ಟ್ರಾವೆಲ್‌ ಮಾರ್ಟ್‌ನಲ್ಲಿ ಜೆಎಲ್‌ಆರ್‌ ಭಾಗವಹಿಸಿತ್ತು . ಈ ಸಂದರ್ಭದಲ್ಲಿ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಜೆಎಲ್‌ಆರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು ಎಂದು ಲೂಥ್ರಾ ಹೇಳಿದರು.

ಜೈವಿಕ ಪ್ರವಾಸೋದ್ಯಮ ಲಾಭಕರವಾದದ್ದು ಎನ್ನುವ ವಿಷಯ ಈಗಾಗಲೇ ರುಜುವಾತಾಗಿದೆ. ಸ್ಥಳೀಯ ಸಮುದಾಯ, ಸಂಸ್ಕೃತಿ ಹಾಗೂ ಮೌಲ್ಯಗಳಿಗೆ ಈ ಪ್ರವಾಸೋದ್ಯಮದಿಂದ ಯಾವುದೇ ಹಾನಿ ಉಂಟಾಗುವುದಿಲ್ಲ ಎನ್ನುವುದೂ ಸ್ಪಷ್ಟವಾಗಿದೆ ಎಂದು ಲೂಥ್ರಾ ತಿಳಿಸಿದರು.

ಐಎಫ್‌ಎಸ್‌ ಅಧಿಕಾರಿಗಳಿಗೆ ಸಂಬಂಧಿಸಿದ ಒಂದು ವಾರದ ಕಡ್ಡಾಯ ತರಬೇತಿಯನ್ನು ಜೆಎಲ್‌ಆರ್‌ ಇತ್ತೀಚೆಗಷ್ಟೇ ಬನ್ನೇರುಘಟ್ಟ ನೇಚರ್‌ ಕ್ಯಾಂಪ್‌, ಕಬಿನಿ ರಿವರ್‌ ಲಾಡ್ಜ್‌ ಹಾಗೂ ಭೀಮೇಶ್ವರಿ ಫಿಷಿಂಗ್‌ ಮತ್ತು ನೇಚರ್‌ ಕ್ಯಾಂಪ್‌ಗಳಲ್ಲಿ ನಡೆಸಿತು ಎಂದು ಲೂಥ್ರಾ ಹೇಳಿದರು.

(ಪಿಟಿಐ)

ಮುಖಪುಟ / ವಾಟ್ಸ್‌ ಹಾಟ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X