ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿಂದ ಅರಕಲಗೂಡಿನ ರಾಮನಾಥಪುರಕ್ಕೆ ಕರ್ನಾಟಕ ಸಂಗೀತ

By Staff
|
Google Oneindia Kannada News

ಬೆಂಗಳೂರಿಂದ ಅರಕಲಗೂಡಿನ ರಾಮನಾಥಪುರಕ್ಕೆ ಕರ್ನಾಟಕ ಸಂಗೀತ
ಅ.6ರಿಂದ ರಾಮನಾಥಪುರದಲ್ಲಿ ಖ್ಯಾತ ಕಲಾವಿದರಿಂದ ಸಂಗೀತ ಸಂಭ್ರಮ

ಹಾಸನ : ಬೆಂಗಳೂರು ಹಾಗೂ ಇತರ ನಗರ ಪ್ರದೇಶಗಳಿಗಷ್ಟೇ ತನ್ನ ಕಾರ್ಯಕ್ರಮಗಳನ್ನು ಸೀಮಿತಪಡಿಸಿಕೊಂಡಿದ್ದ ಕರ್ನಾಟಕ ಗಾನಕಲಾ ಪರಿಷತ್ತು ಇದೇ ಮೊದಲ ಬಾರಿಗೆ ಹಳ್ಳಿಯಾಂದರಲ್ಲಿ ಬೃಹತ್‌ ಸಂಗೀತ ಉತ್ಸವ ಹಮ್ಮಿಕೊಂಡಿದೆ.

ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ರಾಮನಾಥಪುರದಲ್ಲಿ ಗಾನಕಲಾ ಪರಿಷತ್ತಿನ 35ನೇ ಸಮ್ಮೇಳನ ನಡೆಯಲಿದೆ. ಅಕ್ಟೋಬರ್‌ 6ರಿಂದ ಐದು ದಿನಗಳ ಕಾಲ ನಡೆಯುವ ಈ ಸಮ್ಮೇಳನಕ್ಕೆ ಸಿದ್ಧತೆಗಳು ಭರದಿಂದ ನಡೆದಿವೆ ಎಂದು ಪರಿಷತ್‌ ಅಧ್ಯಕ್ಷ ಆರ್‌.ಕೆ.ಪದ್ಮನಾಭ್‌ ತಿಳಿಸಿದ್ದಾರೆ.

ಸ್ಥಳೀಯ ಶ್ರೀರಾಮ ಸೇವೆ ಸಮಿತಿ ಸಹಕಾರದೊಂದಿಗೆ ಈ ಸಮ್ಮೇಳನ ನಡೆಯುತ್ತಿದೆ. ಈ ಬಾರಿಯ ಸಮ್ಮೇಳನದಲ್ಲಿ ಯುವ ಕಲಾವಿದರ ಪ್ರದರ್ಶನಕ್ಕೆ ಆದ್ಯತೆ ನೀಡಲಾಗುವುದು ಎಂದು ಪದ್ಮನಾಭ್‌ ತಿಳಿಸಿದರು.

1969ರಲ್ಲಿ ಪ್ರಾರಂಭವಾದ ಗಾನಕಲಾ ಪರಿಷತ್‌ ಸಂಗೀತಗಾರರ ವೇದಿಕೆಯಾಗಿ ಕಾರ್ಯ ನಿರ್ವಹಿಸುತ್ತಿದೆ. ಹಲವಾರು ಯುವ ಗಾಯಕರ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿದೆ.

ರಾಮನಾಥಪುರ ಸಮ್ಮೇಳನದ ಅಧ್ಯಕ್ಷತೆಯನ್ನು ವಿದುಷಿ ಶಚೀದೇವಿ ವಹಿಸುವರು. ಹಿರಿಯ ವಯಲಿನ್‌ ಕಲಾವಿದ ಎಚ್‌.ಕೆ.ವೆಂಕಟರಾಂ ಯುವ ಸಂಗೀತಗಾರರ ಸಮ್ಮೇಳನದ ಅಧ್ಯಕ್ಷತೆ ವಹಿಸುವರು. ಕಲಾವಿದರಾದ ಎಸ್‌.ಕೆ.ರಾಮಚಂದ್ರರಾವ್‌, ಪದ್ಮಶ್ರೀ ಎಂ.ಎಸ್‌.ಗೋಪಾಲಕೃಷ್ಣನ್‌ ಮುಂತಾದವರು ಕಾರ್ಯಕ್ರಮ ನೀಡುವರು ಎಂದು ಪದ್ಮನಾಭ್‌ ಹೇಳಿದರು.

ಪ್ರಖ್ಯಾತ ಕರ್ನಾಟಕ ಸಂಗೀತಗಾರರ ಅಪರೂಪದ ಚಿತ್ರಗಳು ಹಾಗೂ ವೀಣೆ ಶೇಷಣ್ಣನವರ ಸಂಗ್ರಹವನ್ನು ಸಮ್ಮೇಳನದಲ್ಲಿ ಪ್ರದರ್ಶಿಸಲಾಗುವುದು. ಪ್ರವೀಣ್‌ ಗೋಡ್ಖಿಂಡಿ ಹಾಗೂ ಟಿ.ಆರ್‌.ಶ್ರೀನಾಥ್‌ರ ದ್ವಂದ್ವ ಕೊಳಲು ವಾದನ, ಬಿ.ಜಯಶ್ರೀ ಅವರ ರಂಗಗೀತೆಗಳು, ವಿದ್ಯಾಪ್ರಸನ್ನ ತೀರ್ಥರ ಸಂಗೀತ ಕಾರ್ಯಕ್ರಮಗಳು ಸಮ್ಮೇಳನದ ಕೆಲವು ವಿಶೇಷಗಳು ಎಂದು ಪದ್ಮನಾಭ್‌ ತಿಳಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X