ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾರಸ್ವತಲೋಕಕ್ಕೆ ನಿಸಾರರ ಸ-ರಸೋಕ್ತಿ !

By Staff
|
Google Oneindia Kannada News

ಸಾರಸ್ವತಲೋಕಕ್ಕೆ ನಿಸಾರರ ಸ-ರಸೋಕ್ತಿ !
ನಿತ್ಯೋತ್ಸವದ ಕವಿ ಪ್ರೊ.ಕೆ.ಎಸ್‌. ನಿಸಾರ್‌ಅಹಮದ್‌ರ ಹೊಸಕೃತಿ ‘ಸ-ರಸೋಕ್ತಿಗಳ ಸಂಗಾತಿ’ ಬಿಡುಗಡೆಯ ಸಮಾರಂಭದ ವರದಿ ಇಲ್ಲಿದೆ.

  • ಗಿರಿಶಾಸ್ತ್ರಿ , ಬೆಂಗಳೂರು
ಸಮಕಾಲೀನ ಸಾಹಿತ್ಯದ ಅಗ್ರಶ್ರೇಣಿಯ ಸಾಲಿನಲ್ಲಿ ಪ್ರಮುಖರಾದ ಪ್ರೊ.ಕೆ.ಎಸ್‌. ನಿಸಾರ್‌ ಅಹಮದ್‌ ಅವರ ಚಿಂತನಾರ್ಹ ಕೃತಿ ‘ಸ-ರಸೋಕ್ತಿಗಳ ಸಂಗಾತಿ’ ಸೆ.12 ರಂದು ಬೆಂಗಳೂರಿನಲ್ಲಿ ನಡೆದ ಆತ್ಮೀಯ ಸಮಾರಂಭದಲ್ಲಿ ಅನಾವರಣ ಗೊಂಡಿತು.

ಪ್ರೊ. ನಿಸಾರರ ಆತ್ಮೀಯರೂ ಕನ್ನಡದ ನಿವೃತ್ತ ಪ್ರಾಧ್ಯಾಪಕರೂ ಆದ ಪ್ರೋ. ರಾಜಶೇಖರ ಶೆಟ್ಟಿಯವರ ದೊಮ್ಮಲೂ ರಿನ ನಿವಾಸದಲ್ಲಿ ನಡೆದ ಈ ಸರಳ ಸಮಾರಂಭದಲ್ಲಿ ನಾಡಿನ ಖ್ಯಾತ ವಿಮರ್ಶಕರು, ಸಾಹಿತಿಗಳು, ನಿಸಾರರ ಶಿಷ್ಯರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Prof. K.S. Nisar Ahmeds SaRasokthigala Sangathi released in Bangalore on Sep. 12th 2004.ಖ್ಯಾತ ಸುಗಮ ಸಂಗೀತ ಹಾಗೂ ಚಲನಚಿತ್ರ ಗಾಯಕಿ ಡಾ.ಶಮಿತಾ ಮಲ್ನಾಡ್‌ ಅವರು, ಕುವೆಂಪು ಹಾಗೂ ನಿಸಾರರ ಪ್ರಾರ್ಥನಾ ಗೀತೆಗಳನ್ನು ಹಾಡುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಪ್ರೊ. ಎಚ್‌.ಪಿ. ರಾಜಶೇಖರ ಶೆಟ್ಟಿ ಸ್ವಾಗತ ಭಾಷಣದಲ್ಲಿ , ತಮ್ಮ ಬದುಕು ಸಮಾಜದ ಮುಖ್ಯವಾಹಿನಿಯಿಂದ ವಿಮುಖವಾಗಿದ್ದ ಸಂದರ್ಭದಲ್ಲಿ ಚೈತನ್ಯ ತುಂಬಿ ಮುಖ್ಯವಾಹಿನಿಗೆ ತಂದ ಪ್ರೊ. ನಿಸಾರರ ಸ್ನೇಹಪರತೆಯನ್ನು ಶ್ಲಾಘಿಸಿ ದರು.

ಕೃತಿಯನ್ನು ಹೊರತಂದಿರುವ ಬೆಂಗಳೂರಿನ ಸಪ್ನ ಬುಕ್‌ ಹೌಸ್‌ ಮಾಲೀಕರಾದ ನಿತಿನ್‌ ಷಾ ಮಾತನಾಡಿ, ನಿಸಾರರ ಸರಸೋಕ್ತಿಗಳ ಸಂಗಾತಿ ಪುಸ್ತಕವನ್ನು ನಾವು ಪ್ರಕಟಿಸಿರುವುದು ಸಂತೋಷ ತಂದಿದೆ. ನಮ್ಮ ಸಂಸ್ಥೆ ಈಗಾಗಲೇ 1300 ಕ್ಕೂ ಅಧಿಕ ವೈವಿಧ್ಯಮಯ ಕನ್ನಡದ ಪುಸ್ತಕಗಳನ್ನು ಪ್ರಕಟಿಸಿದೆ. ಕನ್ನಡಿಗರ ಸಹಕಾರ ಹೀಗೆಯೇ ಮುಂದುವರೆದರೆ, ಮತ್ತಷ್ಟು ಸಾಹಿತ್ಯ ಸೇವೆಗೆ ಸಿದ್ದವಾಗಿರುವುದಾಗಿ ತಿಳಿಸಿದರು.

ಧ್ವನಿ ಕಾಣಿಕೆ : ಸಮಾರಂಭದಲ್ಲಿ ಹಾಜರಿದ್ದ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ ಮಾತನಾಡಿ, ಮೂರುವರೆ ದಶಕಗಳ ಹಿಂದೆ ಶಿವಮೊಗ್ಗದಲ್ಲಿ ಅಧ್ಯಾಪಕರಾಗಿದ್ದ ನಿಸಾರರ ಗಮನ ಸೆಳೆಯಲು ಸಾಕಷ್ಟು ಕಸರತ್ತು ಮಾಡಿದ್ದನ್ನು ನೆನಪಿಸಿಕೊಂಡರು. ನಿಸಾರರ ಎರಡು ಗೀತೆಗಳನ್ನು ತಮ್ಮ ಶ್ರೀಮಂತ ಕಂಠದಲ್ಲಿ ಹಾಡಿ ನೆಚ್ಚಿನ ಕವಿಗೆ ತಮ್ಮ ಧ್ವನಿ ಕಾಣಿಕೆಯನ್ನು ನೀಡಿದರು.

ಖ್ಯಾತ ವಿಮರ್ಶಕ ಪ್ರೊ. ಎಂ.ಎಚ್‌.ಕೃಷ್ಣಯ್ಯ ನಿಸಾರರ ಸ-ರಸೋಕ್ತಿಗಳ ಸಂಗಾತಿ ಪುಸ್ತಕವನ್ನು ಬಿಡುಗಡೆಮಾಡಿ, ತಮ್ಮ ಹಾಗೂ ನಿಸಾರರ ನಡುವಿನ ಒಡನಾಟವನ್ನು ನೆನಪಿಸಿಕೊಂಡರು. ನಿಸಾರರಲ್ಲಿನ ಸರಸತೆ ಈಗಲೂ ಮುಂದುವರೆದಿದೆ. ಆದರೆ ಅದೀಗ ಮಾಗಿದ ರಸಾನುಭವ. ನಿಸಾರರ ಕಾವ್ಯ ಗಟ್ಟಿತನದಿಂದ ಕೂಡಿದೆ.ಅವರ ನುಡಿಗಾರಿಕೆ,ಕೌಶಲ, ಅದ್ಪುತ. ಅವರೊಬ್ಬ ಶಬ್ಧ ಬ್ರಹ್ಮರೆಂದು ಹೇಳಿದರು.

ಮಂಗಳೂರು ವಿವಿಯ ಕನ್ನಡ ಪ್ರಾಧ್ಯಾಪಕ ಹಾಗೂ ತುಳು ಅಕಾಡೆಮಿ ಅಧ್ಯಕ್ಷರಾದ ಡಾ.ಬಿ.ಎ.ವಿವೇಕ ರೈ ಮಾತನಾಡಿ, ನಿಸಾರರ ಗದ್ಯ ಗ್ರಂಥಗಳ ಶೀರ್ಷಿಕೆಗಳು ಸಹಾ ಅರ್ಥಪೂರ್ಣವಾಗಿವೆ. ಮನದೊಂದಿಗೆ ಮಾತುಕತೆ, ಹಿರಿಯರು ಹರಸಿದರೆ ಹೆದ್ದಾರಿ, ಅಚ್ಚುಮೆಚ್ಚು, ಇದು ಬರಿ ಬೆಡಗಲ್ಲೋ ಅಣ್ಣ ಮುಂತಾದಗ್ರಂಥಗಳನ್ನು ಅವರು ಪ್ರಸ್ತಾಪಿಸಿದರು.

ನಿಸಾರ್‌ ನವ್ಯ ಹಾಗೂ ನವೋದಯ ಕಾಲದಲ್ಲಿ ಏಕಪ್ರಕಾರವಾಗಿ ಅನುಭವದ ಗಟ್ಟಿನೆಲೆಯಲ್ಲಿ ಸಾಹಿತ್ಯ ಕೃಷಿ ಮುಂದು ವರೆಸಿದ್ದಾರೆ. ಐವತ್ತು ವರ್ಷಗಳಿಗೂ ಮೀರಿ ವೈವಿಧ್ಯಮಯವಾಗಿ ಬರೆಯುವವರು ಬಹಳ ವಿರಳ. ಈ ಪುಸ್ತಕದಲ್ಲಿ ನಿಸಾರರ 70 ವರ್ಷಗಳ ಬದುಕಿನ ಸಾರವಿದೆ. 21 ನೇ ಶತಮಾನಕ್ಕೂ ಪ್ರಸ್ತುತವಾಗುವ ಕವಿ ನಿಸಾರರು ಲೌಕಿಕ ನೆಲೆಯಿಂದ ಆಧ್ಯಾತ್ಮಕ್ಕೆ ಏರಿದವರು ಎಂದರು.

ಸನ್ಮಾನ : ನಿಸಾರ್‌ಅಹಮದ್‌ ಬದುಕು-ಬರಹಗಳ ಬಗೆಗೆ ಪಿ.ಎಚ್‌.ಡಿ ಮಹಾಪ್ರಬಂಧಗಳನ್ನು ಬರೆದು, ಡಾಕ್ಟರೇಟ್‌ ಗಳಿಸಿದ ಬೆಂಗಳೂರು ವಿವಿಯ ಡಾ.ಮಂಜುಳ ರೆಡ್ಡಿ, ಗುಲ್ಪರ್ಗಾ ವಿವಿಯ ಡಾ.ರಾಮಚಂದ್ರಗಣಾಪುರರನ್ನು ಸಮಾರಂಭದ ಅಧ್ಯಕ್ಷತೆವಹಿಸಿದ್ದ ಗಾಂಧಿವಾದಿ ಎಚ್‌.ಎಸ್‌.ದೊರೆಸ್ವಾಮಿ ಗೌರವಿಸಿದರು.

ಕವಿ ನಿಸಾರ್‌ ಅಹಮದ್‌ ಮಾತನಾಡಿ, ನಾನು ಎತ್ತರದ ಕವಿಯಾಗದೇ ನಿಮ್ಮೆಲ್ಲರಿಗೆ ಹತ್ತಿರದ ಕವಿಯಾದ ಖುಷಿ ನನ್ನಲ್ಲಿದೆ. ಇತಿಮಿತಿಗಳ ನಡುವೆಯೇ ಸಣ್ಣಪುಟ್ಟ ಸಾಹಿತ್ಯದ ಕೆಲಸಗಳನ್ನು ಮಾಡಿದ್ದೇನೆ. ಆದರೆ ಕನ್ನಡಿಗರು ತುಂಬು ಅಕ್ಕರೆಯಿಂದ ಅತಿಶಯವಾದ ಮಾನ್ಯತೆ ನೀಡಿದ್ದಾರೆ ಎಂದು ವಿನಮ್ರರಾಗಿ ನುಡಿದರು.

ಇಂಥ ಸಾಹಿತ್ಯ ಪ್ರಕಾರ ಬೆಳೆಯಬೇಕು. ಬಿಡಿಬಿಡಿ ಸಾಲುಗಳು ಸಮಗ್ರಕೃ ತಿಯನ್ನು ಪ್ರವೇಶಿಸಲು ಕೈಮರವಾಗ ಬಹು ದು. ಗಾದೆಗಳ ಮಾತಿನಂತೆಯೇ ಕವಿಗಳ ಬರಹಗಳ ಸಾಲುಗಳು ಜನರ ಬಳಕೆಗೆ ದಕ್ಕಬೇಕಾಗಿದೆ. ಸಾಹಿತ್ಯಾಭಿಮಾನಿ ಗಳನ್ನು ಮಾತ್ರವಲ್ಲದೇ, ಜನಸಾಮಾನ್ಯರಲ್ಲಿ ಸಹಾ ಸರೋಸೋಕ್ತಿಗಳ ಸಂಗಾತಿ ಅಕರ್ಷಿಸಿದರೆ, ನನ್ನ ಶ್ರಮ ಸಾರ್ಥಕ ವಾಗುತ್ತದೆ. ಕನ್ನಡದ ಹಿರಿ ತಲೆಮಾರಿನ ಡಿವಿಜಿ, ಮಾಸ್ತಿ, ಕುವೆಂಪು, ಕಾರಂತ, ವಿ.ಸೀ, ಬೇಂದ್ರೆ, ಅನಕೃ, ಎಸ್‌.ವಿ. ರಂಗಣ್ಣನವರ ಕೃ ತಿಗಳ ಮುಂದಿನ ಪ್ರಯತ್ನಗಳಿಗೆ ಈ ಸಂಗಾತಿ ನಾಂದಿಯಾಡಲಿ. ಪ್ರಸ್ತಕದಲ್ಲಿರುವ ಸೂಕ್ತಿಗಳಿಂದ ಕನ್ನಡ ಭಾಷೆ ಮೌಖಿಕವಾಗಿ ಬೆಳೆಯಲು ಸಾಧ್ಯ ಎಂದರು.

ನಂತರ ಪ್ರೋ.ಕೆ.ಎಸ್‌.ನಿಸಾರ್‌ ಅಹಮದ್‌ಹಾಗೂ ಅವರ ಧರ್ಮಪತ್ನಿ ಷಾನವಾಜ್‌ರನ್ನು ಸನ್ಮಾನಿಸಲಾಯಿತು.

ಸಮಾರಂಭದ ಅಧ್ಯಕ್ಷತೆವಹಿಸಿದ್ದ ಎಚ್‌.ಆರ್‌.ದೊರೆಸ್ವಾಮಿ, ಸಮಾಜವನ್ನು ತಿದ್ದುವ ಕೆಲಸ ಕಾವ್ಯದಿಂದಾಗಬೇಕು. ಜನರ ಬದುಕಿಗೆ ಪುಷ್ಠಿ ಹಾಗೂ ಚೆಲುವು ನೀಡುವಲ್ಲಿ ಕಾವ್ಯ ಅಗತ್ಯ. ನಿಸಾರರ ಕಾವ್ಯ ಮನಸ್ಸನ್ನು ಪ್ರಸನ್ನಗೊಳಿಸುವು ದರೊಂದಿಗೆ, ಬುದ್ದಿಯನ್ನು ಪ್ರಚೋದಿಸುತ್ತದೆ ಎಂದರು.

ದೂರದರ್ಶನದ ವಾರ್ತಾ ವಾಚಕಿ ಸಬೀಹಾ ಬಾನು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಆರ್‌.ದೊಡ್ಡೇಗೌಡ ಮತ್ತಿತರರು ಹಾಜರಿದ್ದರು.

ಸ-ರಸೋಕ್ತಿಗಳ ಸಂಗಾತಿ : ಕನ್ನಡ ಸಾಹಿತ್ಯದಲ್ಲಿ ತೀರಾ ಅಪರೂಪವೆನ್ನಿಸುವ, ಓರ್ವ ಕವಿಯ ಕೃತಿಗಳಿಂದ ಆಯ್ದ ಸಮಗ್ರ ಸ್ವರೂಪದ ಚಿಂತನೆಗೆ ದಾರಿ ಮಾಡುವ ವಾಕ್ಯಾವಳಿ ಹಾಗೂ ಸೂಕ್ತಿಗಳನ್ನು ಒಂದೆಡೆ ಸಂಕಲಿಸಿ ಪ್ರಕಟಿಸಿರುವ ಪ್ರೊ. ನಿಸಾರರ ಪ್ರಬುದ್ಧ ಚಿಂತನೆಗೆ ಸಾಕ್ಷೀಭೂತವಾಗಿದೆ.

ಬದುಕಿಗೆ ಸಂಬಂಧಿಸಿದ ವಿವಿಧ ವಲಯಗಳ ಬಗೆಗೆ ಕವಿ ಹಾಗೂ ವೈಚಾರಿಕ ಬರಹಗಾರ ನಿಸಾರರ ಅನಿಸಿಕೆ, ಅಭಿ ಪ್ರಾಯಗಳು ಅವರ ಸ್ವ-ಚಿಂತನೆ, ಲೋಕಾನುಭವ, ಮತ್ತಿತರ ಸಂಗತಿಗಳನ್ನು ವಿಷಯಾಧಾರಿತವಾಗಿ ವರ್ಗೀಕರಿಸಿ, ಗೊಂದಲಕ್ಕೆ ಎಡೆಯಿಲ್ಲದೆ ಕ್ರೋಢಿಕರಿಸಿರುವುದು ಈ ಕೃ ತಿಯ ವೈಶಿಷ್ಟ್ಯ.

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X