ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ಇಂಗ್ಲಿಷ್‌ ಕಾದಂಬರಿಕಾರ ಮುಲ್ಕ್‌ರಾಜ್‌ ಆನಂದ್‌ ನಿಧನ

By Staff
|
Google Oneindia Kannada News

ಭಾರತೀಯ ಇಂಗ್ಲಿಷ್‌ ಕಾದಂಬರಿಕಾರ ಮುಲ್ಕ್‌ರಾಜ್‌ ಆನಂದ್‌ ನಿಧನ
ನೇಪಥ್ಯಕ್ಕೆ ಸರಿದ ಮಾನವೀಯ ಅಂತಃಕರಣದ ಬರಹಗಾರ

Mulk Raj Anand is no moreಮುಂಬಯಿ : ಇಂಗ್ಲಿಷ್‌ನಲ್ಲಿ ಬರೆಯುವ ಪ್ರಮುಖ ಭಾರತೀಯ ಲೇಖಕರಲ್ಲೊಬ್ಬರಾದ ಮುಲ್ಕ್‌ರಾಜ್‌ ಆನಂದ್‌ ಇನ್ನಿಲ್ಲ . ಮುಲ್ಕ್‌ರಾಜ್‌ ಪುಣೆಯ ಜೆಹಾಂಗೀರ್‌ ಆಸ್ಪತ್ರೆಯಲ್ಲಿ ಸೆ.28ರ ಮಂಗಳವಾರ ಬೆಳಗ್ಗೆ ನಿಧನರಾದರು. ಅವರಿಗೆ 99 ವರ್ಷ ವಯಸ್ಸಾಗಿತ್ತು .

ಮುಂಬಯಿಯಲ್ಲಿ ನೆಲೆಸಿರುವ ಪತ್ನಿ ಹಾಗೂ ಲಂಡನ್‌ ನಿವಾಸಿ ಪುತ್ರಿಯನ್ನು ಮುಲ್ಕ್‌ರಾಜ್‌ ಅಗಲಿದ್ದಾರೆ. ನ್ಯೂಮೋನಿಯಾದಿಂದ ಬಳಲುತ್ತಿದ್ದ ಅವರು ಸೆ.17ರಂದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು.

ತಮ್ಮ ಇಂಗ್ಲಿಷ್‌ ಕಾದಂಬರಿಗಳಿಗೆ ಅನೇಕ ಅಂತರರಾಷ್ಟ್ರೀಯ ಹಾಗೂ ರಾಷ್ಟ್ರೀಯ ಪ್ರಶಸ್ತಿಗಳನ್ನು ಮುಲ್ಕ್‌ರಾಜ್‌ ಆನಂದ್‌ ಪಡೆದಿದ್ದರು. Untouchables ಮುಲ್ಕ್‌ರಾಜ್‌ರ ಪ್ರಸಿದ್ಧ ಕೃತಿಗಳಲ್ಲೊಂದು. ಭಾರತ ಸರ್ಕಾರ ಪದ್ಮಭೂಷಣ ಪ್ರಶಸ್ತಿ ನೀಡಿ ಮುಲ್ಕ್‌ರಾಜ್‌ರನ್ನು ಗೌರವಿಸಿತ್ತು .

ಸರ್ವೋದಯ ಹೆಸರಿನ ಟ್ರಸ್ಟ್‌ ಒಂದನ್ನು ಮುಲ್ಕ್‌ರಾಜ್‌ ಸ್ಥಾಪಿಸಿದ್ದು , ಈ ಟ್ರಸ್ಟ್‌ ಹೆಸರಿಗೆ ತಮ್ಮ ಸಮಸ್ತ ಆಸ್ತಿಯನ್ನು ವಿಲ್‌ ಮಾಡಿದ್ದಾರೆ.

ಆರ್‌.ಕೆ.ನಾರಾಯಣ್‌, ರಾಜಾರಾವ್‌ ಹಾಗೂ ಮುಲ್ಕ್‌ರಾಜ್‌ ಆನಂದ್‌ ಇಂಗ್ಲಿಷ್‌ನಲ್ಲಿ ಬರೆಯುವ ಶ್ರೇಷ್ಠ ಭಾರತೀಯ ತ್ರಿವಳಿ ಲೇಖಕರೆಂದು ಪ್ರಸಿದ್ಧರಾಗಿದ್ದಾರೆ. ಈ ತ್ರಿವಳಿಗಳ ಪೈಕಿ ಮುಲ್ಕ್‌ರಾಜ್‌ ಅವರದು ತೀರಾ ವಿಶಿಷ್ಠವಾದ ಶೈಲಿ. ತಣ್ಣನೆಯ ದನಿಯಲ್ಲಿ ಸಾಮಾಜಿಕ ವಿಡಂಬನೆಯನ್ನು ಚಿತ್ರಿಸುವಲ್ಲಿ ಮುಲ್ಕ್‌ರಾಜ್‌ ಸಿದ್ಧಹಸ್ತರಾಗಿದ್ದರು.

ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ಮನಮೋಹನ್‌ಸಿಂಗ್‌ ದೂರವಾಣಿಯ ಮೂಲಕ ಮುಲ್ಕ್‌ರಾಜ್‌ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ಸುಶೀಲ್‌ಕುಮಾರ್‌ ಶಿಂಧೆ ಕೂಡ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X