ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು ಮೃಗಾಲಯದಲ್ಲಿ ಫೂತನಿ ಸಂತಾನ ; ಆನೆಗಳಿಗೆ ವಿಷಪ್ರಾಷನ

By Staff
|
Google Oneindia Kannada News

ಮೈಸೂರು ಮೃಗಾಲಯದಲ್ಲಿ ಫೂತನಿ ಸಂತಾನ ; ಆನೆಗಳಿಗೆ ವಿಷಪ್ರಾಷನ
ವಿಷಪ್ರಾಷನದಿಂದಾಗಿ ಗಣೇಶ ಹಾಗೂ ರೂಪಾ ಆನೆಗಳ ದಾರುಣ ಸಾವು -ವರದಿ

ಮೈಸೂರು : ಇತ್ತೀಚೆಗೆ ಮೈಸೂರು ಮೃಗಾಲಯದಲ್ಲಿ ಶಂಕಾಸ್ಪದ ಸಾವಿಗೀಡಾದ ಆನೆಗಳಿಗೆ ವಿಷ ಪ್ರಾಷನ ಮಾಡಿಸಲಾಗಿದೆ ಎಂದು ಪ್ರಯೋಗಾಲಯದ ಮರಣೋತ್ತರ ಪರೀಕ್ಷೆಯ ವರದಿಗಳು ತಿಳಿಸಿವೆ,

ಗಣೇಶ ಹಾಗೂ ರೂಪ ಎನ್ನುವ ಆನೆಗಳ ಸಾವಿಗೆ ರಿkುಂಕ್‌ ಫಾಸ್ಫೈಡ್‌ ಎನ್ನುವ ಪ್ರಬಲ ರಾಸಾಯಿನಿಕ ವಿಷವೇ ಕಾರಣ ಎಂದು ವರದಿ ತಿಳಿಸಿದೆ. ಸೆಪ್ಟಂಬರ್‌ 4 ಮತ್ತು 7ರಂದು ಗಣೇಶ ಹಾಗೂ ರೂಪಾ ಎನ್ನುವ ಆನೆಗಳು ಮೃಗಾಲಯದಲ್ಲಿ ಸಾವಿಗೀಡಾಗಿದ್ದವು. ಅಚಾನಕ್‌ ಮರಣಕ್ಕೊಳಗಾದ ಈ ಆನೆಗಳ ಅಂತ್ಯ ಅನೇಕ ಊಹೆಗಳಿಗೆ ಕಾರಣವಾಗಿತ್ತು .

ಹಾರ್ಮೋನುಗಳ ವೈಪರೀತ್ಯ ಹಾಗೂ ಉಸಿರಾಟದ ತೊಂದರೆಗೊಳಗಾಗಿ ಆನೆಗಳು ಕೊನೆಯುಸಿರೆಳೆದಿದ್ದವು. ಮರಣೋತ್ತರ ಪರೀಕ್ಷೆಯ ನಂತರ ವಿಷ ಪ್ರಾಷನದ ಘಟನೆ ಬಯಲಾಗಿದೆ. ರಿkುಂಕ್‌ ಸಲ್ಫೈಡ್‌ ಮಾರುಕಟ್ಟೆಯಲ್ಲಿ ಸುಲಭವಾಗಿ ದೊರೆಯುವ ವಿಷವಾಗಿದೆ.

ಈ ಘಟನೆಯ ಸಂಬಂಧ ಗಣೇಶ ಹಾಗೂ ರೂಪಾ ಆನೆಗಳನ್ನು ನೋಡಿಕೊಳ್ಳುತ್ತಿದ್ದ 6 ಮಂದಿ ಮೃಗಾಲಯದ ಸಿಬ್ಬಂದಿಯನ್ನು ಅಮಾನತ್ತಿನಲ್ಲಿಟ್ಟಿದ್ದು , ತನಿಖೆಗಾಗಿ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.

(ಇನ್ಫೋ ವಾರ್ತೆ)

Post your views

ವಾರ್ತಾ ಸಂಚಯ
ಮೈಸೂರಿನ ‘ಶ್ರೀ ಚಾಮರಾಜೇಂದ್ರ ಮೃಗಾಲಯ’ದಲ್ಲಿ ರೂಪಾ ಸಾವು

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X