ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್‌ಪೋಸಿಸ್‌ ಟ್ರೇಡ್‌ ಮಾರ್ಕ್‌ಗಾಗಿ ಸುಪ್ರಿಂಕೋರ್ಟ್‌ನಲ್ಲಿ ಸಮರ

By Super
|
Google Oneindia Kannada News

ಬೆಂಗಳೂರು: ಸಾಫ್ಟ್‌ವೇರ್‌ ರಂಗದಲ್ಲಿ ಸಾಮ್ರಾಟ್‌ ಎಂದೇ ಗುರ್ತಿಸಲ್ಪಡುವ ಬೆಂಗಳೂರು ಮೂಲದ ಇನ್‌ಪೋಸಿಸ್‌ ಕಂಪನಿ, ತನ್ನ ಟ್ರೇಡ್‌ಮಾರ್ಕ್‌ನ್ನು ಉಳಿಸಿಕೊಳ್ಳಲು ಸುಪ್ರಿಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ.

ಚೆನೈನ ಬೌದ್ಧಿಕ ಆಸ್ತಿ ಸಂರಕ್ಷಣಾ ಮಂಡಳಿ(ಐಪಿಓಬಿ) ನಿರ್ಣಯದ ವಿರುದ್ಧ , ಇನ್‌ಪೋಸಿಸ್‌ ವ್ಯಾಪಾರ ಚಿಹ್ನೆಯ ಏಕಸ್ವಾಮ್ಯವನ್ನು ಉಳಿಸಿಕೊಳ್ಳಲು ಇನ್‌ಪೋಸಿಸ್‌ ಕಂಪನಿ ಪ್ರಯತ್ನಿಸುತ್ತಿದೆ. ಈ ಬಗೆಗೆ ಹೋರಾಟ ಮುಂದುವರೆಯಲಿದ್ದು, ಇದರಿಂದ ಕಂಪನಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಬ್ಯಾಂಕಿಂಗ್‌ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಇನ್‌ಪೋಸಿಸ್‌ ರಾಜಗುರು ಎನ್‌.ಆರ್‌. ನಾರಾಯಣ ಮೂರ್ತಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇನ್‌ಪೋಸಿಸ್‌ ಕಂಪನಿ ಕಾರ್ಯದರ್ಶಿ ವಿ.ಬಾಲಕೃಷ್ಣ, ಸುಪ್ರಿಂಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ಅರ್ಜಿಸಲ್ಲಿಸಲಾಗಿದೆ. ಐಪಿಎಬಿ ಆದೇಶಕ್ಕೆ ಕೋರ್ಟ್‌ ತಡೆಯಾಜ್ಞೆಯನ್ನು ನೀಡಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಚೆನೈನ ಐಪಿಎಬಿ, ಕಲ್ಕತ್ತ ಮೂಲದ ಜುಪಿಟರ್‌ ಇನ್‌ಪೋಸಿಸ್‌ ಕಂಪನಿ ಸಲ್ಲಿಸಿದ್ದ ಅರ್ಜಿಯ ಹಿನ್ನೆಲೆಯಲ್ಲಿ, ಬೆಂಗಳೂರು ಮೂಲದ ಇನ್‌ಪೋಸಿಸ್‌ ಕಂಪನಿಗೆ ಇನ್‌ಪೋಸಿಸ್‌ ಟ್ರೇಡ್‌ ಮಾರ್ಕನ್ನು ಬದಲಿಸುವಂತೆ ಸೂಚನೆ ನೀಡಿತ್ತು. ಈ ಜುಪಿಟರ್‌ ಇನ್‌ಪೋಸಿಸ್‌ ಕಂಪನಿ ಸಹಾ ಕಂಪ್ಯೂಟರ್‌, ಕಂಪ್ಯೂಟರ್‌ ಬಿಡಿ ಭಾಗಗಳು ಮತ್ತಿತರ ಹಾರ್ಡ್‌ವೇರ್‌ ಸಾಮಗ್ರಿಗಳ ಮಾರಾಟ ಜಾಲವನ್ನು ಹೊಂದಿದೆ.

English summary
Software major Infosys Technologies Ltd Thursday (September 16) said it would file a Special Leave Petition in the Supreme Court contesting the ruling by the IPAB. which had held that it cannot hold a monopoly on trademark Infosys
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X