ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಡುಪಿ ಜಿಲ್ಲೆಯಲ್ಲಿ ಶಾಖೋತ್ಪನ್ನ ಸ್ಥಾವರಗಳು ಬೇಡ -ಮನೋರಮಾ

By Staff
|
Google Oneindia Kannada News

ಉಡುಪಿ ಜಿಲ್ಲೆಯಲ್ಲಿ ಶಾಖೋತ್ಪನ್ನ ಸ್ಥಾವರಗಳು ಬೇಡ -ಮನೋರಮಾ
ನಂದಿಕೂರು ಹಾಗೂ ಯೆಲ್ಲೂರು-ಸಂತೂರು ವಿದ್ಯುತ್‌ ಸ್ಥಾವರಗಳಿಗೆ ವಿರೋಧ

ಉಡುಪಿ : ಜಿಲ್ಲೆಯಲ್ಲಿ ಯಾವುದೇ ಶಾಖೋತ್ಪನ್ನ ಸ್ಥಾವರಗಳನ್ನು ಸ್ಥಾಪಿಸುವುದಕ್ಕೆ ಅನುಮತಿ ನೀಡಬಾರದು ಎಂದು ಸಂಸದೆ ಮನೋರಮಾ ಮಧ್ವರಾಜ್‌ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಶಾಖೋತ್ಪನ್ನ ಸ್ಥಾವರಗಳ ಸ್ಥಾಪನೆಗೆ ಉಡುಪಿ ಜಿಲ್ಲೆಯ ಜನತೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆ ಕಾರಣದಿಂದಾಗಿ ಯೆಲ್ಲೂರು-ಸಂತೂರು ಹಾಗೂ ನಂದಿಕೂರುಗಳಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಸ್ಥಾವರಗಳನ್ನು ಕೈಬಿಡಬೇಕೆಂದು ಮುಖ್ಯಮಂತ್ರಿ ಎನ್‌.ಧರ್ಮಸಿಂಗ್‌ರಿಗೆ ಬರೆದ ಪತ್ರದಲ್ಲಿ ಮನೋರಮಾ ಮಧ್ವರಾಜ್‌ ಒತ್ತಾಯಿಸಿದ್ದಾರೆ.

ನಂದಿಕೂರು, ಯೆಲ್ಲೂರು-ಸಂತೂರು, ಯೆರ್ಮಾಳ್‌, ನಡ್ಸಾಲ್‌, ಹೆಜ್ಮಾಡಿ, ಪಲಿಮಾರು ಹಾಗೂ ಇನ್ನ್ನಾಗಳಲ್ಲಿ ವಿದ್ಯುತ್‌ ಸ್ಥಾವರಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ ವಿವಿಧ ಕಂಪನಿಗಳಿಗೆ ಅನುಮತಿ ನೀಡಿದೆ. ಆದರೆ ಪರಿಸರ ಜಾಗೃತಿ ಉಡುಪಿ ಜಿಲ್ಲೆಯಲ್ಲಿ ವ್ಯವಸ್ಥಿತವಾಗಿದ್ದು , ಶಾಖೋತ್ಪನ್ನ ಸ್ಥಾವರಗಳ ಸ್ಥಾಪನೆಗೆ ಜನತೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಪಶ್ಚಿಮ ಘಟ್ಟಗಳಿಗೆ ಹೊಂದಿಕೊಂಡಿರುವ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳು ಜೈವಿಕ ಸೂಕ್ಷ್ಮ ಪ್ರದೇಶಗಳಾಗಿದ್ದು ಈ ಪ್ರದೇಶಗಳಲ್ಲಿ ಗಣಿಗಾರಿಕೆ ಹಾಗೂ ವಿದ್ಯುತ್‌ ಸ್ಥಾವರಗಳ ಸ್ಥಾಪನೆ ಸಲ್ಲದೆಂದು ಪುಣೆಯ ರಾಷ್ಟ್ರೀಯ ಪರಿಸರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ ಹಾಗೂ ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಗಳ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಈ ವಿಷಯವನ್ನು ಮನೋರಮಾ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X