ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಕೈಬಸ್‌ಎನ್ನುವ ತೂಗುರೈಲು ; ಸಾರಿಗೆ ರಂಗದಲ್ಲಿ ಅಪರೂಪದ ಸಾಧನೆ

By Staff
|
Google Oneindia Kannada News

ಸ್ಕೈಬಸ್‌ಎನ್ನುವ ತೂಗುರೈಲು ; ಸಾರಿಗೆ ರಂಗದಲ್ಲಿ ಅಪರೂಪದ ಸಾಧನೆ
ಕೊಂಕಣ ರೈಲ್ವೆಯ ಹೆಮ್ಮೆಯ ಕೊಡುಗೆ ದೇಶಕ್ಕೆ ಅ.15 ರಂದು ಸಮರ್ಪಣೆ

ಬೆಂಗಳೂರು: ಕೊಂಕಣ ರೈಲ್ವೆಯ ಮಹತ್ವಕಾಂಕ್ಷೆಯ ಯೋಜನೆಯಾದ ಸ್ಕೈಬಸ್‌ ನಿಲ್ದಾಣ, ಗೋವಾ ರಾಜ್ಯದ ಮಡಗಾಂವ್‌ ಬಳಿ ಪ್ರಯೋಗಿಕವಾಗಿ ಚಲಿಸುವುದರೊಂದಿಗೆ ಪ್ರಪಂಚದ ನಗರ ಸಾರಿಗೆ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆಗೆ ನಾಂದಿ ಹಾಡಿತು.

ಕೇಂದ್ರ ರೈಲ್ವೆ ಸಚಿವ ಲಾಲೂ ಪ್ರಸಾದ್‌ ಯಾದವ್‌ ಅಕ್ಟೋಬರ್‌ 15ರಂದು ವಿಶ್ವಕ್ಕೆ ಅಧಿಕ್ತುತವಾಗಿ ಈ ಹೊಸ ತಂತ್ರಜ್ಞಾನವನ್ನು ಸಮರ್ಪಣೆ ಮಾಡಲಿದ್ದಾರೆ. 1.6 ಕಿ.ಮೀ ವ್ಯಾಪ್ತಿಯ ಸ್ಕೈಬಸ್‌ ಮತ್ತು ವಿನೂತನ ಫ್ಲೈಓವರ್‌ ರೈಲ್ವೆ ಟ್ರ್ಯಾಕ್‌ ನಿರ್ಮಾಣಕ್ಕಾಗಿ ಕೇಂದ್ರವು 50 ಕೋಟಿ ರೂ.ಗಳನ್ನು ಮಂಜೂರು ಮಾಡಿತ್ತು.

ಮಂಡಗಾಂವ್‌ ರೈಲ್ವೆ ನಿಲ್ದಾಣದಲ್ಲಿ ಕೊಂಕಣ ರೈಲ್ವೆ ವ್ಯವಸ್ಥಾಪಕ ಬಿ.ರಾಜಾರಾಮ್‌, ಪ್ರಾಯೋಗಿಕವಾಗಿ ಚಾಲನೆ ನೀಡಿದರು. ಈ ಮೂಲಕ ಕೊಂಕಣ ರೈಲ್ವೆ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯಿತು. ಈ ಸ್ಕೈಬಸ್‌ ಭೂಮಿಯಿಂದ ಆರು ಮೀ. ಎತ್ತರದಲ್ಲಿ ಟ್ರ್ಯಾಕ್‌ಗೆ ಜೋತುಕೊಂಡು ಸಾಗುತ್ತದೆ. ಸ್ಕೈಬಸ್‌ ಚಾಲನೆ ಸಂಪೂರ್ಣ ಕಂಪ್ಯೂಟರೀಕೃತವಾಗಿದ್ದು , ಸ್ವಯಂ ಚಾಲಿತ ಯಂತ್ರಗಳನ್ನು ಅವಲಂಭಿಸಿದೆ.

ವೆಚ್ಚ, ಸುರಕ್ಷತೆ, ಉತ್ತಮ ಸೇವೆ ಇತ್ಯಾದಿ ಎಲ್ಲ ದೃಷ್ಟಿಯಿಂದ ಸ್ಕೈಬಸ್‌ ಅನುಕೂಲಕರ. ಸ್ಕೈಬಸ್‌ ತಂತ್ರಜ್ಞಾನವನ್ನು ಬೇರೆ ರಾಷ್ಟ್ರಗಳಿಗೆ ನೀಡುವ ಮೂಲಕ ಆದಾಯ ಗಳಿಸಲು ವ್ಯಾಪಕ ಅವಕಾಶಗಳಿವೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X