ಕುಕ್ಕರಹಳ್ಳಿ, ಲಿಂಗಾಂಬುಧಿ, ಕಾರಂಜಿ ಕೆರೇಲಿ ಗಣೇಶ ವಿಸರ್ಜನೆ ನಿಷೇಧ
ಕುಕ್ಕರಹಳ್ಳಿ, ಲಿಂಗಾಂಬುಧಿ, ಕಾರಂಜಿ ಕೆರೇಲಿ ಗಣೇಶ ವಿಸರ್ಜನೆ ನಿಷೇಧ
ಜಲ ಮಾಲಿನ್ಯಕ್ಕೆ ಕಡಿವಾಣ ಹಾಕಲು ನಗರ ಪಾಲಿಕೆಯಿಂದ ಕಟ್ಟುನಿಟ್ಟಿನ ಕ್ರಮ
ಮೈಸೂರು ವಿಶ್ವವಿದ್ಯಾಲಯದಯ ತನ್ನ ವ್ಯಾಪ್ತಿಯ ಜಲಮೂಲಗಳಲ್ಲಿ ಗಣೇಶ ವಿಗ್ರಹಗಳ ವಿಸರ್ಜನೆಯನ್ನು ನಿಷೇಧಿಸಿದೆ. ಕುಕ್ಕರಹಳ್ಳಿ, ಕಾರಂಜಿ ಹಾಗೂ ಲಿಂಗಾಂಬುಧಿ ಕೆರೆಗಳಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಯನ್ನು ನಿಷೇಧಿಸಿ ಮೈಸೂರು ನಗರ ಪಾಲಿಕೆ ಆದೇಶ ಹೊರಡಿಸಿದೆ. ಇಷ್ಟೇ ಅಲ್ಲ , ರಾಸಾಯಿನಿಕ ಬಣ್ಣಗಳುಳ್ಳ ಗಣೇಶ ವಿಗ್ರಹಗಳನ್ನು ಇತರ ಜಲಮೂಲಗಳಲ್ಲಿ ವಿಸರ್ಜಿಸುವುದನ್ನೂ ಪಾಲಿಕೆ ನಿಷೇಧಿಸಿದೆ.
ಜಲಮೂಲಗಳಲ್ಲಿ ಗಣೇಶ ವಿಗ್ರಹ ವಿಸರ್ಜನೆ ನಿಷೇಧದಿಂದಾಗಿ ಈ ಬಾರಿ ನಾಗರಿಕರು ಗಣೇಶ ವಿಗ್ರಹಗಳ ವಿಸರ್ಜನೆಗಾಗಿ ಡ್ರಮ್ಮು-ಕೊಳಗಗಳನ್ನೇ ಆಶ್ರಯಿಸಬೇಕು. ಹೀಗೆಂದು ಹಬ್ಬದ ಸಂಭ್ರಮವೇನೂ ಕಡಿಮೆಯಾಗಿಲ್ಲ ಬಿಡಿ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications