ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬನವಾಸಿ ರೈತರ ಗೋಳು ತಪ್ಪಲಿಲ್ಲ , ಕಣ್ತುಂಬಿದ ಭತ್ತ ಮನೆಗೆ ಬರಲಿಲ್ಲ !

By Staff
|
Google Oneindia Kannada News

ಬನವಾಸಿ ರೈತರ ಗೋಳು ತಪ್ಪಲಿಲ್ಲ , ಕಣ್ತುಂಬಿದ ಭತ್ತ ಮನೆಗೆ ಬರಲಿಲ್ಲ !
ಬಿಳಿ ಮಿಡತೆಗಳ ದಾಳಿಯಿಂದಾಗಿ 200 ಹೆಕ್ಟೇರ್‌ ಪ್ರದೇಶದ ಬೆಳೆ ನಾಶ

ಶಿರಸಿ : ಬೆಳೆ ಬಂದ ಕಾಲಕ್ಕೂ ಸುಖವಿಲ್ಲ ಎನ್ನುವಂತಾಗಿದೆ ಬನವಾಸಿ ಹಾಗೂ ಆಸುಪಾಸಿನ ರೈತರ ಪರಿಸ್ಥಿತಿ. ಮಳೆರಾಯ ಕಣ್ತೆರೆದು ಭತ್ತದ ಪೈರು ನಳನಳಿಸುತ್ತಿರುವಾಗ್ಗೆ ಎಲ್ಲಿಂದ ಬಂದವು ಈ ಪಾಟಿ ಹುಳಗಳು.

ಬಿಳಿ ಮಿಡತೆಗಳ ದಾಳಿಯಿಂದಾಗಿ ಕೈಗೆ ಬಂದ ತುತ್ತು ಬಾಯಿಗಿಲ್ಲ ಎನ್ನುವ ಸಂಕಟ ಬನವಾಸಿ ಹೋಬಳಿ ರೈತರದಾಗಿದೆ. ಭಾಷಿ, ತಿಗಣಿ, ಯಡೂರ್‌ಬೈಲ್‌, ಗುಂಡಾಪುರ, ಮಧುರವಳ್ಳಿ, ದಾಸನಕೊಪ್ಪ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಮಾರು 200 ಎಕರೆ ಪ್ರದೇಶದಲ್ಲಿನ ಭತ್ತದ ಬೆಳೆ ಕೀಟಗಳಿಂದಾಗಿ ಸಂಪೂರ್ಣ ನಾಶವಾಗಿದೆ.

ಭತ್ತದ ಪೈರಿನ ಬಿತ್ತನೆ ಹೆಚ್ಚು ನಿಕಚವಾಗಿರುವ ಕಡೆ ಹಾಗೂ ನೀರು ನಿಂತಿರುವ ಕಡೆಗಳಲ್ಲಿ ಕೀಟಗಳ ದಾಳಿ ಹೆಚ್ಚಾಗಿದೆ. ಅನೇಕ ರೈತರು ಕೀಟನಾಶಕಗಳ ಮೊರೆ ಹೋಗಿದ್ದಾರೆ. ಯಶಸ್ಸು ಮಾತ್ರ ಅಷ್ಟಕ್ಕಷ್ಟೇ. ಬೆಳೆಯೂ ಹೋಯಿತು, ಕೀಟನಾಶಕಗಳಿಗಾಗಿ ಸುರಿದ ದುಡ್ಡೂ ಹೋಯಿತು ಎನ್ನುವ ವ್ಯಥೆ ಕೆಲವು ರೈತರದು.

ಕೀಟಗಳನ್ನು ಹತೋಟಿಗೆ ತರುವ ಪ್ರಯತ್ನಗಳು ಚುರುಕಾಗಿವೆ. ಕೀಟನಾಶಕಗಳನ್ನು ರೈತರಿಗೆ ಒದಗಿಸುವ ಕೆಲಸದಲ್ಲಿ ಬನವಾಸಿ ರೈತ ಸಂಪರ್ಕ ಕೇಂದ್ರದಂಥ ಸಂಘಸಂಸ್ಥೆಗಳು ತೊಡಗಿವೆ. ಆದರೆ ಕೀಟನಾಶಕ ಭಾರೀ ದುಬಾರಿ. ಲೀಟರ್‌ಗೆ 3500 ರುಪಾಯಿ ಬೆಲೆ. ಬನವಾಸಿ ಹೋಬಳಿಯಲ್ಲಿ ಸುಮಾರು 1000 ಎಕರೆ ಪ್ರದೇಶದಲ್ಲಿ ಭತ್ತದ ನಾಟಿ ನಡೆದಿದ್ದು , ಈ ಪ್ರದೇಶಕ್ಕೆಲ್ಲ ಕೀಟನಾಶಕ ಹೊಂಚುವುದು ಹೇಗೆ ಎನ್ನುವ ಯೋಚನೆ ಕೃಷಿ ಅಧಿಕಾರಿಗಳದು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X