ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದತ್ತ ವಿಶ್ವ ಬ್ಯಾಂಕ್‌ನಿಂದ ಮಿಲಿಯನ್‌ಗಟ್ಟಲೆ ಹಣದ ಪ್ರವಾಹ

By Staff
|
Google Oneindia Kannada News

ಕರ್ನಾಟಕದತ್ತ ವಿಶ್ವ ಬ್ಯಾಂಕ್‌ನಿಂದ ಮಿಲಿಯನ್‌ಗಟ್ಟಲೆ ಹಣದ ಪ್ರವಾಹ
ಅಭಿವೃದ್ಧಿಯಲ್ಲಿ ರಾಜ್ಯ 6ನೇ ರ್ಯಾಂಕ್‌ನಿಂದ 7ನೇ ರ್ಯಾಂಕ್‌ಗೆ ಕುಸಿತ

ಬೆಂಗಳೂರು: ವಿಶ್ವಬ್ಯಾಂಕ್‌ ರಾಜ್ಯ ಸರಕಾರದೊಂದಿಗೆ ಚರ್ಚೆ ನಡೆಸಿದ್ದು, ಪಟ್ಟಣಾಭಿವೃದ್ಧಿ ಹಾಗೂ ವಿವಿಧ ಆರೋಗ್ಯಯೋಜನೆಗಳ ಅನುಷ್ಠಾನಕ್ಕೆ 200 ಮಿಲಿಯನ್‌ ಡಾಲರ್‌ ಹಣವನ್ನು ಸಾಲ ನೀಡಲು ಮುಂದಾಗಿದೆ ಎಂದು ವಿಶ್ವ ಬ್ಯಾಂಕ್‌ ಅಧಿಕಾರಿಗಳು ತಿಳಿಸಿದ್ದಾರೆ.

ಬ್ಯಾಂಕ್‌ ನಿರ್ದೇಶಕರಾದ ಮೈಕಲ್‌ ಕಾರ್ಟರ್‌ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸ್ಪಷ್ಟವಾಗಿ ಸಾಲದ ಮೊತ್ತವನ್ನು ಹೇಳಲಾಗದು. ಆದರೆ 100 ಮಿಲಿಯನ್‌ ಡಾಲರ್‌ಗೂ ಅಧಿಕ ಹಣ ನೀಡುವ ಉದ್ದೇಶವಿದೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಪಟ್ಟಣ ಹಾಗೂ ನಗರಾಭಿವೃದ್ಧಿ ಯೋಜನೆಗಳು ಪ್ರಸಕ್ತ ವರ್ಷದ ಕಡೆಯಲ್ಲಿ, ಆರೋಗ್ಯ ಯೋಜನೆಗಳು ಮುಂದಿನ ವರ್ಷದ ಮಧ್ಯಭಾಗದಲ್ಲಿ ಅರಂಭಗೊಳ್ಳುವ ವಿಶ್ವಾಸವಿದೆ. ಕರ್ನಾಟಕದಲ್ಲಿ ವಿಶ್ವಬ್ಯಾಂಕ್‌ ಹೆಚ್ಚಿನ ಹಣ ಹೂಡಿಕೆ ಮಾಡಲು ನಿರ್ಧರಿಸಿದೆ. ರಾಜ್ಯದಲ್ಲಿನ ಸಾರ್ವಜನಿಕ ಹಣಕಾಸು ವ್ಯವಸ್ಥೆಯನ್ನು ಬ್ಯಾಂಕ್‌ ಅಧ್ಯಯನ ನಡೆಸಿದೆ. ಅದರ ಪ್ರಕಾರ ರಾಜ್ಯದ ಆರ್ಥಿಕ ವರದಿ ತೃಪ್ತಿಕರವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯದಲ್ಲಿ ಗ್ರಾಮೀಣ ಜನರು ಸಂಕಷ್ಟದಲ್ಲಿದ್ದಾರೆ. ಬರಗಾಲ, ಕುಡಿಯುವ ನೀರಿನ ಕೊರತೆ ಮತ್ತಿತರ ಸಮಸ್ಯೆಗಳಿಂದ ಕರ್ನಾಟಕ ಅಭಿವೃದ್ಧಿ ವಿಚಾರದಲ್ಲಿ ಪಕ್ಕದ ತಮಿಳುನಾಡಿಗೆ ಹೋಲಿಸಿದರೆ ಹಿಂದೆ ಉಳಿದಿದೆ. ಭಾರತದಲ್ಲಿ ನಡೆಸಲಾದ ಮಾನವ ಸಂಪನ್ಮೂಲ ಅಭಿವೃದ್ಧಿ ಸೂಚಿ ಪ್ರಕಾರ ಕಳೆದ 20 ವರ್ಷಗಳ ಹಿಂದೆ ತಮಿಳುನಾಡು 7ನೇ ರ್ಯಾಂಕ್‌ನಲ್ಲಿತ್ತು. ಈಗ ಅದು 3ನೇ ರ್ಯಾಂಕ್‌ನಲ್ಲಿದೆ. ಆದರೆ ಕರ್ನಾಟಕ 6ರಿಂದ 7ನೇ ರ್ಯಾಂಕ್‌ಗೆ ಕುಸಿದಿದೆ. ಈ ನಿಟ್ಟಿನಲ್ಲಿ ವಿಶ್ವಬ್ಯಾಂಕ್‌ ಯೋಜನೆ ರಾಜ್ಯಕ್ಕೆ ಪೂರಕವಾಗಲಿದೆ ಎಂದು ಮೈಕಲ್‌ ಕಾರ್ಟರ್‌ ತಿಳಿಸಿದ್ದಾರೆ.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X