ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎರಡನೇ ದಿನಕ್ಕೆ ಉಮಾ ‘ತಿರಂಗಾ’ ಯಾತ್ರೆ : ಪ್ರಧಾನಿ ತರಾಟೆಗೆ

By Staff
|
Google Oneindia Kannada News

ಎರಡನೇ ದಿನಕ್ಕೆ ಉಮಾ ‘ತಿರಂಗಾ’ ಯಾತ್ರೆ : ಪ್ರಧಾನಿ ತರಾಟೆಗೆ
ಪಠ್ಯಪುಸ್ತಕಗಳ ಕೇಸರೀಕರಣ ಕುರಿತಂತೆ ಸಾರ್ವಜನಿಕ ಚರ್ಚೆ ನಡೆಯಬೇಕು

ಬಿಜಾಪುರ : ಪ್ರಧಾನ ಮಂತ್ರಿ ಮನಮೋಹನ ಸಿಂಗ್‌ ಅವರ ನಿರ್ಧಾರಗಳಿಗೆ ದಿಕ್ಕುದೆಸೇ ಇಲ್ಲ ಮತ್ತು ಎನ್‌ಡಿಎ ಸರ್ಕಾರ ಕೈಗೊಂಡಿದ್ದ ಉತ್ತಮ ಕಾರ್ಯಗಳನ್ನು ಅವರು ನಿಷ್ಕಿೃಯಗೊಳಿಸಿದ್ದಾರೆ ಎಂದು ಉಮಾ ಭಾರತಿ ತರಾಟೆ ತೆಗೆದುಕೊಂಡಿದ್ದಾರೆ.

ತಿರಂಗಾಯಾತ್ರೆಯ ಎರಡನೆಯ ದಿನ ಶನಿವಾರ ಪತ್ರಕರ್ತರೊಂದಿಗೆ ಮಾತನಾಡುತ್ತ, ಮನಮೋಹನ್‌ ಅವರ ಬಗ್ಗೆ ಅವರು ಪ್ರಧಾನಿಯಾಗುವ ಮೊದಲು ಯಾರಿಗೂ ಅಗೌರವವಿರಲಿಲ್ಲ. ಪ್ರಧಾನಿಯಾದ ನಂತರ ಅದನ್ನು ಕಳೆದುಕೊಳ್ಳುತ್ತಿದ್ದಾರೆ. ಕಳಂಕಿತ ಮಂತ್ರಿಗಳ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಅವರು ನೈತಿಕ ಧೈರ್ಯವನ್ನು ತೋರುತ್ತಿಲ್ಲ ಎಂದರು.

ವಾಜಪೇಯಿ ಸರ್ಕಾರದ ಆರು ವರ್ಷಗಳ ಅಭಿವೃದ್ಧಿ ಕಾರ್ಯವನ್ನು ಮೂರು ತಿಂಗಳಲ್ಲಿ ಹಾಳುಗೆಡವಿದ್ದಾರೆ. ಪ್ರಧಾನ ಮಂತ್ರಿ ಸ್ವತಂತ್ರವಾಗಿ ಮತ್ತು ಪರಿಣಾಮಕಾರಿಯಾಗಿ ಆಡಳಿತ ನಿರ್ವಹಿಸುತ್ತಿಲ್ಲ ಎಂದು ಉಮಾ ಅವರು ವಿಷಾದ ವ್ಯಕ್ತಪಡಿಸಿದರು.

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಅರ್ಜುನ್‌ ಸಿಂಗ್‌ ಅವರು ಕೈಗೊಂಡಿರುವ ‘ಪಠ್ಯಪುಸ್ತಕ ನಿರ್ಮಲೀಕರಣ’ ಎಡಪಕ್ಷಗಳ ಕುಮ್ಮಕ್ಕಿನಿಂದ ನಡೆಯುತ್ತಿದೆ ಎಂದು ಉಮಾ ಕಿಡಿಕಾರಿದರು. ಪಠ್ಯಪುಸ್ತಕಗಳ ಕೇಸರೀಕರಣ ಕುರಿತಂತೆ ಸಾರ್ವಜನಿಕ ಚರ್ಚೆ ನಡೆಯಬೇಕು ಎಂದು ಅವರು ಹೇಳಿದರು.

(ಪಿಟಿಏ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X