ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಟಿಟಿ ಸೂತ್ರಕ್ಕೆ ಸುಪ್ರಿಂಕೋರ್ಟ್‌ ಅಸ್ತು ; ಸೆ. 9 ರಿಂದ ಕೌನ್ಸೆಲಿಂಗ್‌ ?

By Staff
|
Google Oneindia Kannada News

ಸಿಟಿಟಿ ಸೂತ್ರಕ್ಕೆ ಸುಪ್ರಿಂಕೋರ್ಟ್‌ ಅಸ್ತು ; ಸೆ. 9 ರಿಂದ ಕೌನ್ಸೆಲಿಂಗ್‌ ?
ರಾಜ್ಯದಲ್ಲಿ ಕೆಲ ತಿಂಗಳಿಂದ ತಲೆದೋರಿದ್ದ ಸಿಇಟಿ ಬಿಕ್ಕಟ್ಟು ಅಂತ್ಯ

ಬೆಂಗಳೂರು : ಕೆಲ ತಿಂಗಳಿಂದ ವೃತ್ತಿಶಿಕ್ಷಣ ಸೀಟು ಹಂಚಿಕೆ ಸಂಬಂಧ ಉಂಟಾಗಿದ್ದ ಬಿಕ್ಕಟ್ಟು ಬಗೆಹರಿದಿದ್ದು , ಪೋಷಕರು ಹಾಗೂ ವಿದ್ಯಾರ್ಥಿಗಳಲ್ಲಿ ನೆಮ್ಮದಿ ಮೂಡಿದೆ. ಸೀಟು ಹಂಚಿಕೆ ಸಂಬಂಧ ರಾಜ್ಯಸರ್ಕಾರ ಮತ್ತು ಖಾಸಗಿ ಆಡಳಿತ ಮಂಡಳಿ ಕಾಮೆಡ್‌-ಕೆ ನಡುವಣ ಒಪ್ಪಂದಕ್ಕೆ ಸುಪ್ರಿಂಕೋರ್ಟ್‌ ಒಪ್ಪಿಕೊಂಡಿದೆ.

ಇಂಜನಿಯರಿಂಗ್‌ ಕೋರ್ಸ್‌ಗಳ ಪ್ರವೇಶಕ್ಕೆ 75: 25 ರ ಅನುಪಾತದಲ್ಲಿ ಸೀಟು ಹಂಚಿಕೆ ಮತ್ತು ವೈದ್ಯಕೀಯ ಪ್ರವೇಶಕ್ಕೆ 60: 40ರ ಅನುಪಾತದಲ್ಲಿ ಸೀಟು ಹಂಚಿಕೆಗೆ ಸರ್ಕಾರ ಹಾಗೂ ಕಾಮೆಡ್‌-ಕೆ ಒಪ್ಪಿಕೊಂಡಿದ್ದು , ಈ ಒಪ್ಪಂದ ಪ್ರಸಕ್ತ ವರ್ಷಕ್ಕೆ ಮಾತ್ರ ಸೀಮಿತವಾಗಿದೆ.

ಅಲ್ಪಸಂಖ್ಯಾತರ ಕಾಲೇಜುಗಳಲ್ಲಿ 50: 50 ರ ಅನುಪಾತ ದಲ್ಲಿಯೇ ಸೀಟು ಹಂಚಿಕೆ ಮುಂದುವರೆಯಲಿದೆ ಎಂಬ ಅಂಶವನ್ನು ಸುಪ್ರೀಂಕೋರ್ಟ್‌ ಗಮನಕ್ಕೆ ತರಲಾಯಿತು. ಸರ್ಕಾರ ಹಾಗೂ ಕಾಮೆಡ್‌-ಕೆ ಜಂಟಿಯಾಗಿ ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸುವ ನ್ಯಾಯಾಧೀಶ ರೂಮಪಾಲ್‌ ಮತ್ತು ನ್ಯಾಯಾಧೀಶ ಅರುಣ್‌ಕುಮಾರ್‌ ಈ ಕುರಿತು ಹಸಿರು ನಿಶಾನೆ ತೋರಿದ್ದಾರೆ.

(ಇನ್ಫೋವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X