ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ವರ್ಷ ಬಳ್ಳಾರಿಜಿಲ್ಲೆ ಪಾಲಿಗೆ ಸುಷ್ಮಾ ಸ್ವರಾಜ್‌ ‘ಅಸಹಾಯಕ ಲಕ್ಷ್ಮಿ’

By Staff
|
Google Oneindia Kannada News

ಈ ವರ್ಷ ಬಳ್ಳಾರಿಜಿಲ್ಲೆ ಪಾಲಿಗೆ ಸುಷ್ಮಾ ಸ್ವರಾಜ್‌ ‘ಅಸಹಾಯಕ ಲಕ್ಷ್ಮಿ’
ಡಾ.ಬಿ.ಕೆ.ಶ್ರೀನಿವಾಸ ಮೂರ್ತಿ ಮನೆಯಲ್ಲಿ ಸುಷ್ಮಾರಿಂದ ವರಲಕ್ಷ್ಮಿ ಪೂಜೆ

ಬೆಂಗಳೂರು: ‘ಭಾಗ್ಯದ ಲಕ್ಷ್ಮಿಬಾರಮ್ಮ...’ ಎಂಬ ಮಹಿಳಾ ಮಣಿಗಳ ಕರೆ, ಲಕ್ಷ್ಮಿಗೆ ಕೇಳಿಸಿತೋ ಇಲ್ಲವೋ ಗೊತ್ತಿಲ್ಲ. ಆದರೆ ಕೊಟ್ಟ ಮಾತಿನಂತೆ ಕೇಂದ್ರದ ಮಾಜಿ ಸಚಿವೆ ಸುಷ್ಮಾ ಸ್ವರಾಜ್‌, ಬಳ್ಳಾರಿಗೆ ವರ ಮಹಾಲಕ್ಷ್ಮಿ ಹಬ್ಬದಂದು ಬಂದಿದ್ದರು.

ಸೋನಿಯಾಗಾಂಧಿ ಬಳ್ಳಾರಿ ಲೋಕ ಸಭಾಕ್ಷೇತ್ರದಿಂದ ಕಣಕ್ಕಿಳಿದಿದ್ದ ಸಂದರ್ಭದಲ್ಲಿ ಅವರ ಎದುರಾಳಿಯಾಗಿ ಸುಷ್ಮಾ ಸ್ಪರ್ಧೆ ನೀಡಿದ್ದರು. ವಿದೇಶಿ ಸೊಸೆ ಹಾಗೂ ಮನೆ ಮಗಳ ಸ್ಪರ್ಧೆಯೆಂದೇ ಅಂದು ಬಳ್ಳಾರಿಯತ್ತ ಎಲ್ಲರೂ ಕಣ್ಣುನೆಟ್ಟಿದ್ದರು. ಚುನಾವಣೆಯಲ್ಲಿ ಮತದಾರರೊಂದಿಗೆ ಅವಿನಾಭಾವ ಸಂಬಂಧ ಬೆಳೆಸಿಕೊಂಡಿದ್ದರು. ಮತದಾರರು ಕೈ ಬಿಟ್ಟರೂ ಸಹಾ, ಆ ಸಂಬಂಧವನ್ನು ಸುಷ್ಮಾ ಮುಂದುವರೆಸಿದ್ದಾರೆ. ಬಳ್ಳಾರಿ ಜನರಿಗೆ ಒಲವಿನ ದ್ಯೋತಕವಾಗಿ ಪ್ರತಿವರ್ಷ ವರಮಹಾಲಕ್ಷ್ಮಿ ಹಬ್ಬದಂದು ಇಲ್ಲಿಗೆ ಆಗಮಿಸುತ್ತಿದ್ದಾರೆ.

ವರ್ಷಕ್ಕೊಂದು ವರ: ಪ್ರತಿವರ್ಷ ಬಳ್ಳಾರಿಗೆ ಆಗಮಿಸಿದಾಗಲೂ ಆವರು ಒಂದೊಂದು ಕಾಣಿಕೆ ನೀಡಿದ್ದಾರೆ. 2000 ದಲ್ಲಿ ಆಗಮಿಸಿ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ್ದರು. 2001ರಲ್ಲಿ ವಾರ್ತಾ ಸಚಿವೆಯಾಗಿ ಆಗಮಿಸಿದ್ದಾಗ ದೂರದರ್ಶನದ ಮೆಟ್ರೋ ಚಾನಲ್‌ನ್ನು, 2002ರಲ್ಲಿ ಎಫ್‌ಎಂ ಬ್ಯಾಂಡ್‌ ರೇಡಿಯೋ ಸ್ಟೇಶನ್‌ನ್ನು ಕೊಡುಗೆಯಾಗಿ ನೀಡಿದ್ದರು. 2003ರಲ್ಲಿ ಕೇಂದ್ರ ಆರೋಗ್ಯ ಸಚಿವೆಯಾಗಿ ಆಗಮಿಸಿದ್ದಾಗ ಬಳ್ಳಾರಿಯನ್ನು ಏಡ್ಸ್‌ ಮುಕ್ತ ಜಿಲ್ಲೆಯನ್ನಾಗಿಸುವ 15 ಕೋಟಿ ವೆಚ್ಚದ ಯೋಜನೆಗೆ ಚಾಲನೆ ನೀಡಿದ್ದರು.

ಈ ವರ್ಷ ಅಧಿಕಾರದಲ್ಲಿಲ್ಲದ ಕಾರಣ, ಬಳ್ಳಾರಿಗೆ ಯಾವುದೇ ಕೊಡುಗೆ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಸುಷ್ಮಾ ಸ್ವರಾಜ್‌ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X