ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಹಿತ್ಯ ಪರಿಷತ್‌ಗೆ ಅ.31 ಚುನಾವಣೆ

By Staff
|
Google Oneindia Kannada News

ಸಾಹಿತ್ಯ ಪರಿಷತ್‌ಗೆ ಅ.31 ಚುನಾವಣೆ
ಕನ್ನಡ ಸಾಂಸ್ಕೃತಿಕ ಲೋಕದ ಅಧಿಕೃತ ಸಂಸ್ಥೆ ಪರಿಷತ್‌ನ ಮತದಾರರ ಸಂಖ್ಯೆ 40 ಸಾವಿರ ಮಾತ್ರ!

ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಜಿಲ್ಲಾ ಗಡಿನಾಡು ಘಟಕಗಳ ಅಧ್ಯಕ್ಷರ ಸ್ಥಾನಕ್ಕೆ ಅಕ್ಟೋಬರ್‌ 31ರಂದು ಚುನಾವಣೆ ನಡೆಯಲ್ಲಿದ್ದು, 40 ಸಾವಿರ ಮತದಾರರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಲಿದ್ದಾರೆ.

ರಾಜ್ಯದ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಚುನಾವಣೆ ಏಕಕಾಲಕ್ಕೆ ನಡೆಯಲಿದೆ. ಗಡಿ ರಾಜ್ಯಗಳಾದ ಕೇರಳ, ಮಹಾರಾಷ್ಟ್ರ, ತಮಿಳುನಾಡು, ಹಾಗೂ ಆಂಧ್ರಪ್ರದೇಶ ದಲ್ಲಿ ನೂರಕ್ಕಿಂತ ಹೆಚ್ಚು ಮತದಾರರು ಇದ್ದು , ಅಲ್ಲಿಯೂ ಗಡಿನಾಡು ಘಟಕಗಳ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಆದರೆ ಗೋವಾದಲ್ಲಿ ನೂರಕ್ಕಿಂತ ಕಡಿಮೆ ಮತದಾರರಿರುವ ಕಾರಣ ಅಲ್ಲಿ ಚುನಾವಣೆ ನಡೆಸುವುದಿಲ್ಲ. ಬದಲಾಗಿ ಅವರು ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಮತದಾನ ಮಾಡುವ ಅವಕಾಶ ನೀಡಲಾಗಿದೆ.

ಗಡಿನಾಡು, ಹೊರನಾಡು ಹಾಗೂ ಹೊರದೇಶಗಳ ಮತದಾರರು ಅಂಚೆ ಮೂಲಕ ಮತದಾನ ಮಾಡಬಹುದು. ಅಟ್ಟೋಬರ್‌ 16 ರ ಒಳಗೆ ಅಲ್ಲಿನ ಮತದಾರರಿಗೆ ರಿಜಿಸ್ಟರ್ಡ್‌ ಅಂಚೆ ಮೂಲಕ ಮತಪತ್ರ ರವಾನಿಸಲಾಗುವುದು. ಅವರು ನವೆಂಬರ್‌ 1 ರೊಳಗೆ ಮತಪತ್ರವನ್ನು ಕಳುಹಿಸಬಹುದಾಗಿದೆ.

ಚುನಾವಣೆಗೆ ಗುರುತಿನ ಪತ್ರ ಕಡ್ಡಾಯಗೊಳಿಸಲಾಗಿದೆ. ಈಗಾಗಲೇ ಗುರುತಿನ ಪತ್ರವನ್ನು ಸದಸ್ಯರಿಗೆ ಕಳಿಸಲಾಗಿದೆ. ಗುರುತಿನ ಪತ್ರ ದೊರೆಯದೇ ಇದ್ದಲ್ಲಿ ಅಥವಾ ಕಳೆದು ಹೋದಲ್ಲಿ ಸಾರ್ವತ್ರಿಕ ಚುನಾವಣೆಯಲ್ಲಿ ಅನುಸರಿಸುವ ರೀತಿ ನೀತಿಗಳ ಆಧಾರದ ಮೇಲೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಪರಿಷತ್ತಿನ ಚುನಾವಣಾಧಿಕಾರಿ ಕೆ. ನಾಗರಾಜ್‌ ತಿಳಿಸಿದ್ದಾರೆ.

ಚನಾವಣೆಯಲ್ಲಿ ಸ್ಪರ್ಧಿಗಳಿಗೆ ಇರಬೇಕಾದ ಅರ್ಹತೆಗಳು

1 ಪರಿಷತ್ತಿನ ಕೇಂದ್ರ ಸ್ಥಾನಕ್ಕೆ ಸತತ ಹತ್ತು ವರ್ಷ ಸದಸ್ಯನಾಗಿರಬೇಕು.

2 ಜಿಲ್ಲಾ ಹಾಗೂ ಗಡಿನಾಡು ಘಟಕಗಳ ಅಧ್ಯಕ್ಷ ಸ್ಥಾನಕ್ಕೆ ಐದು ವರ್ಷ ಸತತ ಸದಸ್ಯನಾಗಿರಬೇಕು.

ನಾಮಪತ್ರಗಳನ್ನು ಪರಿಷತ್ತಿನ ಕೇಂದ್ರ ಕಚೇರಿಯಲ್ಲಿ ಪಡೆಯಬಹುದಾಗಿದೆ. ಸೆ.23 ರಿಂದ 30 ರ ವರೆಗೆ ನಾಮಪತ್ರಗಳ ಸಲ್ಲಿಸಬಹುದಾಗಿದೆ. ನಾಮಪತ್ರಗಳ ಪರಿಶೀಲನೆ ಅ.4 ರಿಂದ ನಡೆಯಲಿದ್ದು, ನಾಮಪತ್ರ ಹಿಂತೆಗೆದುಕೊಳ್ಳಲು ಅ.7 ಕೊನೆಯ ದಿನವಾಗಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X