ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಬಿಪಿಒ ವಿರೋಧಿ ಶಾಸನ’ ಕ್ಕೆ ಕ್ಯಾಲಿಫೋರ್ನಿಯಾ ಸೆನೆಟ್‌ಅಂಗೀಕಾರ

By Staff
|
Google Oneindia Kannada News

‘ಬಿಪಿಒ ವಿರೋಧಿ ಶಾಸನ’ ಕ್ಕೆ ಕ್ಯಾಲಿಫೋರ್ನಿಯಾ ಸೆನೆಟ್‌ಅಂಗೀಕಾರ
ಸ್ಥಳೀಯ ಉದ್ಯೋಗಾವಕಾಶ ಹೆಚ್ಚಳ ಹಾಗೂ ಅಧಿಕ ತೆರಿಗೆ ಸಂಗ್ರಹದ ನಿರೀಕ್ಷೆ

ಕ್ಯಾಲಿಫೋರ್ನಿಯ : ವಾಣಿಜ್ಯ ಹೊರಗುತ್ತಿಗೆ ಬಗ್ಗೆ ಅಮೆರಿಕಾದಾದ್ಯಂತ ವ್ಯಕ್ತವಾಗುತ್ತಿರುವ ವಿರೋಧದ ಮೂರ್ತರೂಪ ಎನ್ನುವಂತೆ ಕ್ಯಾಲಿಪೋರ್ನಿಯ ಆಡಳಿತವು ವ್ಯಾಪಾರ ಹೊರಗುತ್ತಿಗೆ ವಿರೋಧಿ ಶಾಸನವನ್ನು (Anti-BPO bill) ಹೊರತಂದಿದೆ.

ಬಿಪಿಒ ವಿರೋಧಿ ಶಾಸನಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದರೂ, ಕ್ಯಾಲಿಫೋರ್ನಿಯಾ ಸೆನೆಟ್‌ ಶಾಸನವನ್ನು ಅಂಗೀಕರಿಸಿದೆ ಎಂದು San Jose Mercury ವರದಿ ಮಾಡಿದೆ. 21-14 ಮತಗಳಿಂದ ಶಾಸನ ಅಂಗೀಕೃತವಾಗಿದ್ದು , ಈ ಶಾಸನಕ್ಕೆ ಗವರ್ನರ್‌ ಆರ್ನಾಲ್ಡ್‌ ಶ್ವಾಸನೇಗರ್‌ (ಕನ್ನಡದ ಶಿವಾಜಿನಗರ್‌ ಖ್ಯಾತಿಯ ಈತ ಪ್ರಸಿದ್ಧ ಹಾಲಿವುಡ್‌ ನಟನೂ ಹೌದು) ಅಂಕಿತವಷ್ಟೇ ಬಾಕಿಯಿದೆ.

ಬಿಪಿಒ ವಿರೋಧಿ ಶಾಸನಕ್ಕೆ ಅಂಕಿತ ಹಾಕದಂತೆ ಶ್ವಾಸನೇಗರ್‌ ಮೇಲೆ ವಾಣಿಜ್ಯ ಲಾಬಿಗಳು ಒತ್ತಡ ಹೇರುತ್ತಿವೆ. ಆದರೆ ಬಹುಮತದಿಂದ ಅಂಗೀಕೃತವಾಗಿರುವ ಶಾಸನವನ್ನು ಪಕ್ಕಕ್ಕೆ ಸರಿಸುವುದು ಗವರ್ನರ್‌ಗೆ ಕಷ್ಟಸಾಧ್ಯವಾಗಿದೆ ಎಂದು ವರದಿ ತಿಳಿಸಿದೆ.

ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಹಾಗೂ ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಹಣ ಹರಿದು ಬರಲು ನೂತನ ಶಾಸನ ಅನುವು ಮಾಡಿಕೊಡಲಿದೆ. ಕ್ಯಾಲಿಪೋರ್ನಿಯಾ ಆರ್ಥಿಕ ವಲಯ ಕೂಡ ಹಿಗ್ಗಲಿದೆ ಎಂದು ಆಡಳಿತ ವರ್ಗ ತಿಳಿಸಿದೆ.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X