ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಲಾರಿ ಮುಷ್ಕರಕ್ಕೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ, ಅಗತ್ಯ ವಸ್ತು ಪೂರೈಕೆ
ಲಾರಿ ಮುಷ್ಕರಕ್ಕೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ, ಅಗತ್ಯ ವಸ್ತು ಪೂರೈಕೆ
ಮುಷ್ಕರಕ್ಕೆ ಕರ್ನಾಟಕ ರಾಜ್ಯ ಲಾರಿ ಮಾಲೀಕರ ಸಂಘ ಬೆಂಬಲ ಇಲ್ಲ
ಮುಷ್ಕರದ ಬಿಸಿ ಕಡಿಮೆ ಮಾಡಲು ರಾಜ್ಯ ಸರಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಜನಸಾಮಾನ್ಯರಿಗೆ ದಿನಬಳಕೆಯ ಅತ್ಯಗತ್ಯ ವಸ್ತುಗಳ ಪೂರೈಕೆಗೆ ತೊಂದರೆಯಾಗದಂತೆ ಸರಕಾರ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಿದೆ.
ಶನಿವಾರದಿಂದ ಆರಂಭವಾಗಿರುವ ಈ ಮುಷ್ಕರಕ್ಕೆ ಕರ್ನಾಟಕ ರಾಜ್ಯ ಲಾರಿ ಮಾಲೀಕರ ಸಂಘ ಬೆಂಬಲವನ್ನು ನೀಡಿಲ್ಲ. ಕೇಂದ್ರದ ತೆರಿಗೆಯ ಹೊರೆ ನಮಗೆ ಅನ್ವಯಿಸದ ಕಾರಣ ಸಂಘ ಈ ತೀರ್ಮಾನ ತೆಗೆದುಕೊಂಡಿದೆ. ರಾಜ್ಯದಲ್ಲಿ ಲಾರಿಗಳ ಸಂಚಾರ ಎಂದಿನಂತಿದೆ ಎಂದು ಸಂಘದ ಅಧ್ಯಕ್ಷ ಬಿ.ಚನ್ನಾ ರೆಡ್ಡಿ ತಿಳಿಸಿದ್ದಾರೆ.
ಆದರೆ ಲಾರಿ ಮಾಲೀಕರು ಹಾಗೂ ಏಜೆಂಟರು ಮುಷ್ಕರದಲ್ಲಿ ತೊಡಗಿರುವುದರಿಂದ, ರಾಜ್ಯದಲ್ಲಿ ಸುಮಾರು 3.25 ಲಕ್ಷ ಲಾರಿಗಳು ಮತ್ತು ಟೆಂಪೋಗಳು ರಸ್ತೆಗಿಳಿದಿಲ್ಲ ಎನ್ನ್ನಲಾಗಿದೆ. ಮುಷ್ಕರದ ಕ್ಷಣಕ್ಷಣದ ಬೆಳವಣಿಕೆಗಳನ್ನು ಸರಕಾರ ಗಮನಿಸುತ್ತಿದೆ.
(ಪಿಟಿಐ)
ಮುಖಪುಟ / ವಾರ್ತೆಗಳು